»   » ಪಬ್ಲಿಕ್ ಟಿವಿಗೆ ನಟ ಯಶ್ ನೀಡಿದ ಸ್ಪಷ್ಟನೆ ಏನು?

ಪಬ್ಲಿಕ್ ಟಿವಿಗೆ ನಟ ಯಶ್ ನೀಡಿದ ಸ್ಪಷ್ಟನೆ ಏನು?

By: Sony
Subscribe to Filmibeat Kannada

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರು ರೈತರ ಪರ ಹೋರಾಟ ನಡೆಸುವ ಸಲುವಾಗಿ ಮಾಧ್ಯಮಕ್ಕೆ ಸವಾಲು ಹಾಕಿರುವ ವಿಚಾರ ಎಲ್ಲಾ ಕಡೆ ವೈರಲ್ ಆಗಿದೆ. ಮಾಧ್ಯಮದ ವಿರುದ್ಧ ಯಶ್ ಅವರು ಹಾಕಿದ ಸವಾಲಿಗೆ ಪ್ರತಿಯಾಗಿ ಪಬ್ಲಿಕ್ ಟಿವಿಯವರು ಕೂಡ ಪ್ರತಿಕ್ರಿಯೆ ನೀಡಿದ್ದರು.

ಈ ಬಗ್ಗೆ ಮಾತಾಡಲು ಯಶ್ ಅವರು ಪ್ರಯತ್ನಪಟ್ಟರೂ ಕೂಡ 'ನಿನ್ನೆ ರಾತ್ರಿ ಪಬ್ಲಿಕ್ ಟಿವಿಯವರೇ ಫೋನ್ ತೆಗೆದುಕೊಳ್ಳಲಿಲ್ಲ' ಎಂದು ಖುದ್ದು ಯಶ್ ಅವರೇ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

ಇದಾದ ನಂತರ ಯಶ್ ಅವರು ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರ ಬಗ್ಗೆ ಕೂಡ ಪ್ರಸ್ತಾಪ ಮಾಡಿ ವಿಡಿಯೋ ಸಂದೇಶ ಕಳುಹಿಸಿದ್ದರು. ಇದನ್ನು ನೋಡಿದ ಪಬ್ಲಿಕ್ ಟಿವಿಯವರು ಯಶ್ ಅವರನ್ನು ಫೋನ್ ಮೂಲಕ ಸಂಪರ್ಕ ಮಾಡಿ, ನಿಮ್ಮ ಸಮಯ ಒದಗಿಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ.[ಸವಾಲು ಸೈಡಿಗಿಟ್ಟ ಯಶ್: ಎಲ್ಲಾ ಚಾನೆಲ್ ಗಳಿಗೂ ಹೊಸ ಆಫರ್.!]

ಇದಕ್ಕೆ ರಾಕಿಂಗ್ ಸ್ಟಾರ್ ಯಶ್, ಅವರು ಏನಂದ್ರು, ಪಬ್ಲಿಕ್ ಟಿವಿ ನಿರೂಪಕಿ ಮತ್ತು ಬ್ಯೂರೋ ಜೊತೆ ಯಶ್ ಅವರು ಫೋನ್ ಸಂಭಾಷಣೆ ನಡೆಸಿರುವುದರ ಸಂಪೂರ್ಣ ಮಾಹಿತಿಯನ್ನು ನೋಡಲು ಮುಂದೆ ಓದಿ....

ಯಶ್ ಟ್ವೀಟ್ ನಲ್ಲೇನಿದೆ?

"ಪಬ್ಲಿಕ್ ಟಿವಿ ಜೊತೆ ಮಾತಾಡಬೇಕೆಂದು ನಾನು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪ್ರಯತ್ನಪಟ್ಟೆ. ಆದ್ರೆ ಸಿಗಲಿಲ್ಲ. ಏನೇ ಆಗ್ಲಿ ನೀವೇ ಕಾಲ್ ಮಾಡಿ ಅಥವಾ ಬೇರೆ ಫೋನ್ ನಂ ವ್ಯವಸ್ಥೆ ಮಾಡಿ. ಕಾಯುತ್ತಿದ್ದೇನೆ" ಹೀಗೆ ಮಾಧ್ಯಮದ ಕಡೆಯಿಂದ ಪ್ರತಿಕ್ರಿಯೆ ಬರದ ಕಾರಣ ಯಶ್ ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಬರ್ತಿರಾ ಅಂತ ಕೇಳೋದು ಬೇಡ, ನೇರವಾಗಿ ಫೋನ್ ಮಾಡಿ ಎಂದು ಕೂಡ ಯಶ್ ಅವರು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಪಬ್ಲಿಕ್ ಟಿವಿ ಯಶ್ ಅವರ ಜೊತೆ ನಡೆಸಿದ ಸಂಭಾಷಣೆಯ ತುಣುಕುಗಳು ಇಲ್ಲಿವೆ...['ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಬಗ್ಗೆ ಯಶ್ ಬಾಯಿಂದ ಬಂದ ಮಾತುಗಳಿವು]

ಯಶ್ ಜೊತೆ ಫೋನ್ ಇನ್ ಕಾರ್ಯಕ್ರಮ

ನಿರೂಪಕಿ: ಯಶ್ ನೀವು ಯಾವಾಗ ಬರ್ತೀರಿ.
ಯಶ್: ನಾನು ಕೂಡ ಯಾವಾಗ ಫೋನ್ ಕಾಲ್ ಬರುತ್ತೆ ಅಂತ ಕಾಯ್ತಾ ಇದ್ದೆ. ಬಹಳ ಖುಷಿಯಾಗಿದೆ, ಮತ್ತು ನೀವು ಹೇಳ್ತಾ ಇರೋ ಪಾಯಿಂಟ್ ಕೂಡ ತುಂಬಾ ಸೂಕ್ತ. ಟ್ವಿಟ್ಟರಲ್ಲೋ ಫೋನಲ್ಲೋ ಬಗೆ ಹರಿಯೋ ಸಮಸ್ಯೆ ಇದಲ್ಲಾ. ಇದರ ಬಗ್ಗೆ ತುಂಬಾ ಸುಧೀರ್ಘವಾದ ಚರ್ಚೆ ನಡೆಯಬೇಕು. ಬಹಳಷ್ಟು ಕೆಲಸಗಳು ಆದ ಮೇಲೇನೇ ಏನಾದ್ರೂ ಮಾಡೋಕೆ ಸಾಧ್ಯ. ಅದಕ್ಕೆ ಕೆಲವು ರೂಪು-ರೇಷೆಗಳನ್ನು ಹಾಕಿಕೊಳ್ಳಲು ಸಮಯ ಹಿಡಿಯುತ್ತೆ. ಅದು ನನಗೂ ಗೊತ್ತಿದೆ.[ಸವಾಲಿಗೆ ಸೈ ಎಂದ 'ಪ್ರಜಾ ಟಿವಿ': ಸಂಜೆ 7ಕ್ಕೆ 'ಯಶ್'ಗೆ ಅಗ್ನಿಪರೀಕ್ಷೆ.!]

ಯಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ ಪಬ್ಲಿಕ್ ಟಿವಿ

ಮೆಟ್ರೋ ಬ್ಯೂರೋ ಮುಖ್ಯಸ್ಥ: ಆವತ್ತು ರಾತ್ರಿ ನಮಗೆ ಖಚಿತ ಮಾಹಿತಿ ಇಲ್ಲದ ಪರಿಣಾಮ ನಾವು ನಿಮ್ಮನ್ನು ಸಂಪರ್ಕ ಮಾಡಲಿಲ್ಲ. ಮರುದಿನ ರಾತ್ರಿ 10.15ರ ಸುಮಾರಿಗೆ ರಂಗನಾಥ್ ಸರ್ ಇರಲಿಲ್ಲ, ಆ ಕಾರಣಕ್ಕೆ ನಾವು ಫೋನ್ ಕನೆಕ್ಟ್ ಮಾಡಲಿಲ್ಲ. ಯಾಕೆಂದರೆ ನೀವು ರಂಗನಾಥ್ ಅವರ ಜೊತೆನೇ ಮಾತಾಡಬೇಕು ಅನ್ನೋದು ನಮ್ಮ ಆಸೆ.

ಯಶ್: ಹೌದು ನಿನ್ನೆಯದು ಸರಿಯಾಗಿಯೇ ಇದೆ. ಆದ್ರೆ ಮೊದಲ ದಿನ ನನಗೆ ಮಿಸ್ ಕಮ್ಯುನಿಕೇಷನ್ ಆಗಿರಬೇಕು. ಅವತ್ತಿನ ದಿನ ನಾನು ಟಿವಿ ಮುಂದೆ ಕೂತು ರಂಗನಾಥ್ ಅವರ ಲೈವ್ ಪ್ರೋಗ್ರಾಂ ನೋಡ್ತಾ ಇದ್ದೆ.

ಪಬ್ಲಿಕ್ ಟಿವಿ ಪ್ರೈಮ್ ಟೈಮ್ ನಲ್ಲಿ ಮಾಡೋಕೆ ರೆಡಿ

ಮೆಟ್ರೋ ಬ್ಯೂರೋ ಮುಖ್ಯಸ್ಥ: ನಾವು ನಿಮಗೆ ಫೋನ್ ಕಾಲ್ ಗೆ ಟ್ರೈ ಮಾಡಿದ್ವಿ, ಆವಾಗ ಹೊರಗಡೆ ಇದ್ದಾರೆ ಅಂತ ಹೇಳಿದ್ರು ನಿಮ್ಮ ಮ್ಯಾನೇಜರ್.
ಯಶ್: ಹೌದು ನಾನು ಹೊರಗಡೆ ಇದ್ದೆ, ಅದಕ್ಕೋಸ್ಕರನೇ ನಾನು ಓಡಿ ಬಂದು ಟಿವಿ ಮುಂದೆ ಕೂತೆ. ಜೊತೆಗೆ ಆ ಕಾರ್ಯಕ್ರಮವನ್ನು ನಾನು ಲೈವ್ ಆಗಿ ನೋಡಿದೆ.

ಮೆಟ್ರೋ ಬ್ಯೂರೋ ಮುಖ್ಯಸ್ಥ: ಇವೆರಡೂ ಫೋನ್ ಗೆ ಸಂಬಂಧಪಟ್ಟ ಹಾಗೆ ಆಯ್ತು ಸರ್. ಈಗ ನೀವು ಹೇಳಿದ್ರಿ ಪ್ರೈಮ್ ಟೈಮ್ ನಲ್ಲಿ ಕಾರ್ಯಕ್ರಮ ಮಾಡಬೇಕು ಅಂತ, ಹಾಗೆ ನಾವೂ ಕೂಡ ಪಬ್ಲಿಕ್ ಟಿವಿಯಲ್ಲಿ ಮಾಡೋಕೆ ರೆಡಿ ಇದ್ದೀವಿ. ಹಾಗಾಗಿ ಯಾವತ್ತು ಬರ್ತೀರಿ, ಯಾವಾಗ ಬರ್ತೀರಿ ಅಂತ ನೀವು ತಿಳಿಸಬೇಕು.

ವಿಶಿಷ್ಟ ಚರ್ಚೆ ನಡೆಯಲಿ: ಯಶ್

ಯಶ್: ಈಗ ನಾನು ಕೇಳ್ತಾ ಇರೋ ಪ್ರಶ್ನೆ ಏನಪ್ಪಾ ಅಂದ್ರೆ, ಎಲ್ಲರೂ ಚರ್ಚೆ ಮಾಡೋಣ ಅದು ಬಿಡಿ. ಈ ಎಲ್ಲಾ ಚರ್ಚೆಗಳ ನಡುವೆ ಒಂದು ವಿಶಿಷ್ಟ ಚರ್ಚೆ ನಡೆಯಲಿ. ಜನ ಬೇರೆ ಏನನ್ನೋ ಅಪೇಕ್ಷೆ ಮಾಡ್ತಾ ಇದ್ದಾರೆ ಅನ್ನೋದನ್ನ ನಾನು ನಿಮಗೆ ವ್ಯಕ್ತಪಡಿಸ್ತಾ ಇದ್ದೀನಿ ಅಷ್ಟೇ.

ಯಶ್-ಪಬ್ಲಿಕ್ ಟಿವಿ ಜಟಾಪಟಿ ಆಗಬಾರದು

ಯಶ್: ಈ ವಿಚಾರ ಬೇರೆ ಕಡೆ ಸಾಗಬಾರದು, ಒಂದೇ ಕಡೆ ಫೋಕಸ್ ಇರಬೇಕು. ನೀವೇ ಮುಂದೆ ಬಂದು ಸ್ವೀಕರಿಸಿದ್ರಿ ಅಂದ ಮಾತ್ರಕ್ಕೆ, ಅದು ಯಶ್ ಮತ್ತು ಪಬ್ಲಿಕ್ ಟಿವಿ ಜಟಾಪಟಿ ಅಂತ ಆಗಬಾರದು. ನಾನು ಹೇಳಿದ ಬಗ್ಗೆ ತುಂಬಾ ಕ್ಲೀಯರ್ ಆಗಿ ಇದ್ದೀನಿ. ಆಮೇಲೆ ನಾನು ಯಾರ ಮೇಲೂ ಬೆರಳು ತೋರಿಸೋಕೆ ಬಂದಿಲ್ಲ. ನೀವು ಸರಿ ಇಲ್ಲ ಅಂತಲ್ಲ. ನಾನು ಕೇಳ್ತಾ ಇರೋದು, ಇಲ್ಲಿ ಏನೋ ಸರಿ ಇಲ್ಲ, ಸರಿಪಡಿಸಿಕೊಳ್ಳೋಣ ಬನ್ನಿ ಅಂತ.

ಒಂದೇ ವೇದಿಕೆಯಲ್ಲಿ ಎಲ್ಲಾ ಚಾನೆಲ್

ಮೆಟ್ರೋ ಬ್ಯೂರೋ ಮುಖ್ಯಸ್ಥ: ಸರಿ ಆಯ್ತು ಸರ್ ಯಾವಾಗ ಬರ್ತಿರಿ ಅಂತ ಹೇಳಿ ಸರ್
ಯಶ್: ಈಗ ನಾನು ಏನು ಹೇಳ್ತೀನಿ ಅಂದ್ರೆ, ಇವಾಗ ನಾನು ಒಂದು ಚಾನೆಲ್ ಗೆ ಬಂದು ಕುತ್ಕೋಳ್ಳೋದ್ರಿಂದ ಈ ಸಮಸ್ಯೆ ಮತ್ತೆ ಜಾಸ್ತಿ ಆಗುತ್ತೆ, ಇಷ್ಟು ದಿನ ಏನು ನಡೀತು ಅದೇ ಅಲ್ಲಿ ಕೂಡ ನಡೆಯುತ್ತೆ. ನಾನಿವಾಗ ನೀವು ರೆಡಿ ಇದ್ದೀರಾ ಅಂತ ಪ್ರತಿಯೊಂದು ಚಾನೆಲ್ ನವರಿಗೂ ಕೇಳ್ತಾ ಇದ್ದೀನಿ, ಜೊತೆಗೆ ನಾನೇ ಒಂದು ವೇದಿಕೆ ಕಲ್ಪಿಸುತ್ತೇನೆ ಸರ್. ರಂಗನಾಥ್ ಸರ್ ಕೂಡ ಬರ್ಲಿ. ಮಿಕ್ಕಿದ ಎಲ್ಲಾ ಚಾನೆಲ್ ಗಳ ಹೆಡ್ ಗಳು ಕೂಡ ಬರ್ಲಿ.

ಒಂದೇ ವೇದಿಕೆಗೆ ರಂಗನಾಥ್ ಬರಲ್ಲ

ಮೆಟ್ರೋ ಬ್ಯೂರೋ ಮುಖ್ಯಸ್ಥ: ಹೌದು ಸರ್ ಅದಕ್ಕೆ ಎಲ್ಲರೂ ಬರ್ತಾರೆ. ಪಬ್ಲಿಕ್ ಟಿವಿಯವರು ಬರ್ತಾರೆ ಆದ್ರೆ ರಂಗನಾಥ್ ಸರ್ ಅವರೇ ಬರ್ತಾರಾ ಅಂತ ನಾವು ಖಚಿತವಾಗಿ ಹೇಳೋಕೆ ಆಗಲ್ಲ.

ಯಶ್: ಯಾಕೆ ಸರ್ ಬರಲ್ಲ.
ಮೆಟ್ರೋ ಬ್ಯೂರೋ ಮುಖ್ಯಸ್ಥ: ನನಗೆ ಸಂಪಾದಕೀಯ ಪರವಾಗಿ ಒಂದಷ್ಟು ಮಾತಾಡೋಕೆ ಹೇಳಿದ್ದಾರೆ ಅದಕ್ಕೆ ಹೇಳ್ತಾ ಇದ್ದೀನಿ. ನೀವು ರಂಗನಾಥ್ ಸರ್ ಅವರ ಹತ್ರಾನೇ ಮಾತಾಡ್ತೀನಿ ಅಂದ್ರೆ, ರಾತ್ರಿ 9 ಗಂಟೆಗೆ ಬಿಗ್ ಬುಲೆಟಿನ್ ನಲ್ಲಿ ರಂಗನಾಥ್ ಸರ್ ಅವರೇ ಇರ್ತಾರೆ. ಅವಾಗ ಮಾತಾಡಿ.

ಯಶ್ ನನ್ನು ತಪ್ಪು ತಿಳಿಯಬೇಡಿ

ಯಶ್: ಆಯ್ತು ನಾನು ರಂಗನಾಥ್ ಸರ್ ಅವರ ಬಳಿಯೇ ಮಾತಾಡ್ತೀನಿ. ರಾತ್ರಿ 9 ಗಂಟೆಗೆ ಪೋನ್ ತಗೊಳ್ಳಿ ಸರ್. ಸುಮ್ನೆ ಟೈಂ ವೇಸ್ಟ್ ಮಾಡೋದು ಬೇಡ ಸರ್. ನಾನು ನೇರವಾಗಿ ಅವರ ಬಳಿಯೇ ಮಾತಾಡ್ತೀನಿ. ದಯವಿಟ್ಟು ನನ್ನನ್ನು ಯಾರೋ ಒಬ್ಬ ಸುಮ್ನೆ ಮಾತಾಡ್ತಾ ಇದ್ದಾನೆ ಅಂತ ತಗೋಬೇಡಿ. ಗಮನ ಇಟ್ಟು ಕೇಳಿ, ತಪ್ಪಿದ್ರೆ ತಪ್ಪು ಯಶ್ ಅಂತ ಹೇಳಿ.

ಯಶ್ ಅವರೇ ಸ್ಪಷ್ಟನೆ ಕೊಡಿ

ನಿರೂಪಕಿ: ಓಕೆ ಯಶ್ ಅವರೇ ನೀವು ಲೈವ್ ಆಗಿ ಬರೋದಿಕ್ಕು ಮೊದಲು, ನಿಮ್ಮ ಬೇಡಿಕೆ ಏನಿದೆ ಅಂತ ಪರ್ಸನಲ್ ಆಗಿ ಸರ್ ಜೊತೆ ಮಾತಾಡಿ.
ಯಶ್: ಅದೆಲ್ಲಾ ನಾನು ಮಾತಾಡ್ತೀನಿ. ಈಗ ನಾನು ಹೇಳೋದೇನೆಂದರೆ, ಒಂದು ವೇದಿಕೆಯಲ್ಲಿ ಮಾತಾಡ್ತೀವಿ ಅಂದ್ರೆ ಅದು ಲೈವ್ ಕಾರ್ಯಕ್ರಮ ಆಗಬೇಕು. ಯಾಕೆ ಅಂದ್ರೆ ಕೆಲವು ವಿಚಾರಗಳು, ಚರ್ಚೆಗಳು ಆಯಾ ಜಾಗದಲ್ಲಿ ಆದಾಗಲೇ ಅದಕ್ಕೆ ವ್ಯಾಲ್ಯೂ. ನೀವೆಲ್ಲರೂ ಕೇಳ್ತಾ ಇದ್ದೀರಿ ಏನಪ್ಪಾ, ನೀವು ಏನು ಮಾಡಬೇಕು ಅಂತ ಇದ್ದೀರಿ ಅಂತ. ಅದನ್ನು ನಾನು ಈಗ್ಲೇ ಯಾಕೆ ಹೇಳಬೇಕು.

ನಿರೂಪಕಿ: ನಾವು ಹಾಗೆ ಹೇಳ್ತಾ ಇಲ್ಲ. ಸರಿ ಸರ್ ನೀವು ರಾತ್ರಿ ಮಾತಾಡ್ತೀನಿ ಅಂದ್ರಿ, ಆಯ್ತು ನೀವು ಫೋನಲ್ಲಿ ಮಾತಾಡ್ತೀರಾ ಅಥವಾ ಲೈವ್ ನಲ್ಲಿ ಮಾತಾಡ್ತೀರಾ, ಅಥವಾ ಪರ್ಸನಲ್ ಆಗಿ ರಂಗನಾಥ್ ಸರ್ ಜೊತೆ ಮಾತಾಡ್ತೀರಾ ನಮಗೆ ಸ್ಪಷ್ಟನೆ ಬೇಕು.

ಕೈ-ಕಾಲು ಹಿಡಿದು ಬೇಡಿ ಎಲ್ಲರನ್ನೂ ಕರೆ ತರುತ್ತೇನೆ: ಯಶ್

ಯಶ್: ನಾನು ಯಾವ ತರ ಮಾತಾಡೋಕು ರೆಡಿ. ಎಲ್ಲರೂ ಬಂದು ಕುಳಿತು ಮಾತಾಡಬೇಕು. ಸದ್ಯಕ್ಕೆ ಎಲ್ಲಾ ಕಡೆಯಿಂದ ಕಾಂಪಿಟೇಶನ್ ನಡೀತಾ ಇದೆ ನಾವು ರೆಡಿ ಇದ್ದೀವಿ ಅಂತ. ಅದಕ್ಕೆ ನಾನು ಹೇಳ್ತೀನಿ, ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಚಾನೆಲ್ ನ ಮುಖ್ಯಸ್ಥರು ಮತ್ತು ನಿರ್ಧಾರ ತೆಗೆದುಕೊಳ್ಳುವವರು ಒಂದೇ ವೇದಿಕೆಯಲ್ಲಿ ಬಂದು ಕುಳಿತುಕೊಳ್ಳಲಿ. ಎಲ್ಲರೂ ಒಟ್ಟಿಗೆ ಕುಳಿತು ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ನಾನೇ ಬೇಕಾದ್ರೂ ಎಲ್ಲರನ್ನೂ ಕರೆದುಕೊಂಡು ಬರುತ್ತೇನೆ. ಕೈ-ಕಾಲು ಹಿಡಿದು ಬೇಕಾದ್ರೂ ಕರೆತಂದು ಕೂರಿಸುತ್ತೇನೆ.

ರಾತ್ರಿ 9 ಗಂಟೆಯ ಬಿಗ್ ಬುಲೆಟಿನ್ ನಲ್ಲಿ ಯಶ್

ಮೆಟ್ರೋ ಬ್ಯೂರೋ ಮುಖ್ಯಸ್ಥ: ರಾತ್ರಿ 9 ಗಂಟೆಗೆ ರಂಗನಾಥ್ ಸರ್ ಹತ್ರ ಮಾತಾಡಿ ಎಲ್ಲವನ್ನೂ ಕ್ಲೀಯರ್ ಮಾಡಿ.

ಯಶ್: ಖಂಡಿತ ಸರ್. ನಾನು ಇದನ್ನು ಪರ್ಸನಲ್ ಆಗಿ ತಗೋತಾ ಇಲ್ಲ. ಮತ್ತೆ ಇದು ಯಶ್ ಯಾರು ಅನ್ನೋದನ್ನು ಪ್ರೂವ್ ಮಾಡೋಕು ಮಾಡ್ತಾ ಇಲ್ಲ. ಕೆಲಸ ಮಾಡೋಕೆ ರೆಡಿ ಇದ್ದೀನಿ ಮಾಡೋಣ ಬನ್ನಿ ಅಂತಿದ್ದೇವೆ ಅಷ್ಟೇ. ಒಟ್ನಲ್ಲಿ ಸಮಸ್ಯೆ ಪರಿಹಾರ ಕಾರ್ಯದ ಕಡೆ ಮಾಧ್ಯಮದ ಜೊತೆಗೆ ನಾನು ಕೂಡ ನಿಲ್ಲೋಣ ಅನ್ನೋದು ನನ್ನ ಆಸೆ. ನಾನು ರಾತ್ರಿ ರಂಗನಾಥ್ ಸರ್ ಜೊತೆ ಫೋನ್ ನಲ್ಲಿ ಮಾತಾಡ್ತೀನಿ.

English summary
Kannada Actor Yash speaks to Public TV on Phone. Here is the details check it

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada