»   » ಹೇಮಶ್ರೀ ಮರಣೋತ್ತರ ಪರೀಕ್ಷೆ ಏನು ಹೇಳುತ್ತದೆ?

ಹೇಮಶ್ರೀ ಮರಣೋತ್ತರ ಪರೀಕ್ಷೆ ಏನು ಹೇಳುತ್ತದೆ?

Posted By:
Subscribe to Filmibeat Kannada
ಕಿರುತೆರೆ ಹಾಗೂ ಸಿನೆಮಾ ತಾರೆ ಹೇಮಶ್ರೀ (38) ಅವರ ಮರಣೋತ್ತರ ಪರೀಕ್ಷೆ ಬುಧವಾರ ಮಧ್ಯಾಹ್ನ (ಅ.10) ಹೊರಬಿದ್ದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯನ್ನು ವೈದ್ಯರಾದ ಡಾ.ಸುಮಂಗಲಾ, ಡಾ.ವೆಂಕಟರಾಘವ ರಾವ್ ಹಾಗೂ ಡಾ. ಕೆ.ವಿ ಸತೀಶ್ ಅವರು ನಡೆಸಿದರು.

ಹೇಮಶ್ರೀ ದೇಹದಲ್ಲಿ ಮೂರು ಕಡೆ ಗಾಯದ ಗುರುತುಗಳಾಗಿದ್ದು, ಹೊಟ್ಟೆಯಲ್ಲಿ ರಸಾಯನಿಕವೂ ಪತ್ತೆಯಾಗಿದೆ. ಬಹುಶಃ ವಿಷಪ್ರಾಶನವಾಗಿರುವ ಸಾಧ್ಯತೆಗಳಿವೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗುತ್ತದೆ. ಆ ಬಳಿಕವಷ್ಟೇ ಸತ್ಯಾಸತ್ಯತೆಗಳು ಹೊರಬೀಳಬಹುದು.

ಏತನ್ಮಧ್ಯೆ ಹೇಮಶ್ರೀ ಅವರ ಪತಿ ಸುರೇಂದ್ರಬಾಬು ಅವರನ್ನೂ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅವರಿಂದ ಸಾಕಷ್ಟು ಮಾಹಿತಿಯನ್ನೂ ಪಡೆದಿದ್ದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ವಿವರಗಳು ಇನ್ನಷ್ಟೇ ಪೊಲೀಸರು ಬಹಿರಂಗಪಡಿಸಬೇಕಾಗಿದೆ.

ಹೊಟ್ಟೆಯ ಮೇಲೆ ಎರಡು ಹಾಗೂ ತಲೆಯ ಮೇಲೆ ಒಂದು ಗಾಯದ ಗುರುತುಗಳಾಗಿವೆ ಎನ್ನುತ್ತದೆ ಮರಣೋತ್ತರ ಪರೀಕ್ಷೆ ವರದಿ. ಹೇಮಶ್ರೀ ಅವರ ಮರಣೋತ್ತರ ಪರೀಕ್ಷೆ ಬಳಿಕ ಆಕೆಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬೆಂಗಳೂರಿನಲ್ಲಿ ಹೇಮಶ್ರೀ ಅವರ ಅಂತ್ಯಕ್ರಿಯೆ ಬುಧವಾರ (ಅ.10) ನೆರವೇರಲಿದೆ.

"ವೀರಪರಂಪರೆ", "ವಿಷ್ಣುಸೇನೆ", "ವರ್ಷಾ", "ಜಿಂದಗಿ", "ಕೀರ್ತಿ" ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ್ದ ಹೇಮಶ್ರೀ ಅವರ ಅಕಾಲ ಸಾವಿಗೆ ಕನ್ನಡ ಚಿತ್ರರಂಗ ದಿಗ್ಭ್ರಮೆ ವ್ಯಕ್ತಪಡಿಸಿದೆ. (ಒನ್ಇಂಡಿಯಾ ಕನ್ನಡ)

English summary
Kannada small screen and big screen Popular actress Hemashree (38) died under mysterious circumstances on Tuesday evening. What her postmortem report says? It is said that, some black chemicals are found in her abdomen and there were three wounds on her body.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada