»   » ನಟಿ ಪೂಜಾ ಗಾಂಧಿಗೆ ಇರುವ ಅತ್ಯಂತ ದೊಡ್ಡ ಕನಸು ಅಂದ್ರೆ ಇದೇ.!

ನಟಿ ಪೂಜಾ ಗಾಂಧಿಗೆ ಇರುವ ಅತ್ಯಂತ ದೊಡ್ಡ ಕನಸು ಅಂದ್ರೆ ಇದೇ.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ 'ಕಲಾವಿದ' ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ..? ವಿಭಿನ್ನ ಶೈಲಿಯ ಪ್ರಯೋಗಾತ್ಮಕ ಚಿತ್ರಗಳನ್ನ ಮಾಡುವ ರವಿಚಂದ್ರನ್ ಅಂದ್ರೆ 'ಮಳೆ ಹುಡುಗಿ' ಪೂಜಾ ಗಾಂಧಿ ರವರಿಗೆ ಪಂಚಪ್ರಾಣ ಅಂತೆ.!

ಹಾಗಂತ ಸ್ವತಃ ನಟಿ ಪೂಜಾ ಗಾಂಧಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಜೊತೆಗೆ ರವಿಚಂದ್ರನ್ ಆಕ್ಷನ್ ಕಟ್ ಹೇಳುವ ಸಿನಿಮಾದಲ್ಲಿ ನಟಿಸುವ ಬಯಕೆಯನ್ನೂ ಹೊರಹಾಕಿದ್ದಾರೆ.

Kannada Actress Pooja Gandhi wants to work with V.Ravichandran

''ರವಿಚಂದ್ರನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಆಸೆ. ಅವರು ಕನ್ನಡ ಚಿತ್ರರಂಗದ 'ಗ್ಲಾಮರ್ ಮ್ಯಾನ್'. ಎಲ್ಲಾ ಚಿತ್ರಗಳಲ್ಲೂ ಅವರ ಹೀರೋಯಿನ್ ಗಳನ್ನ ಚೆನ್ನಾಗಿ ಪ್ರೆಸೆಂಟ್ ಮಾಡುತ್ತಾರೆ. ಅವರೊಂದಿಗೆ ಕೆಲಸ ಮಾಡುವುದೇ ನನ್ನ ದೊಡ್ಡ ಕನಸು'' ಎಂದು ನಟಿ ಪೂಜಾ ಗಾಂಧಿ ಹೇಳಿಕೊಂಡಿದ್ದಾರೆ.

ಪೂಜಾ ಗಾಂಧಿಯಂತೂ ತಮ್ಮ ಬಯಕೆಯನ್ನ ಹೊರಹಾಕಿದ್ದಾಗಿದೆ. ಅದು ರವಿಚಂದ್ರನ್ ರವರ ಕಿವಿಗೆ ಬಿದ್ದು, ಅವರು ಮನಸ್ಸು ಮಾಡಬೇಕಷ್ಟೆ..!

English summary
Kannada Actress Pooja Gandhi expressed her desire to work with V.Ravichandran in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada