For Quick Alerts
  ALLOW NOTIFICATIONS  
  For Daily Alerts

  ಕೇಳುವ ಪ್ರಶ್ನೆಗಳಿಗೆ 'ಥಟ್ ಅಂತ' ಉತ್ತರ ಹೇಳ್ತಾರಾ ನಟಿ ಶ್ರುತಿ ಹರಿಹರನ್.?

  By Harshitha
  |

  ಟಿ.ಆರ್.ಪಿ ಬಗ್ಗೆ ತಲೆ ಕೆಡಿಸಿಕೊಳ್ಳದೇ, ವ್ಯಾಪಾರಿ ಧೋರಣೆ ಅನುಸರಿಸದೆ, ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯಿಂದ ಪ್ರಸಾರ ಆಗುತ್ತಿರುವ ಪ್ರಖ್ಯಾತ ರಸಪ್ರಶ್ನೆ ಕಾರ್ಯಕ್ರಮ ಅಂದ್ರೆ ಅದು ದೂರದರ್ಶನ ಚಂದನ ವಾಹಿನಿಯ 'ಥಟ್ ಅಂತ ಹೇಳಿ'.!

  'ಥಟ್ ಅಂತ ಹೇಳಿ' ಕಾರ್ಯಕ್ರಮ ಆರಂಭ ಆಗಿದ್ದು 04-02-2002 ರಂದು. ಜನಮನ್ನಣೆ ಗಳಿಸಿ ಹದಿನೈದು ವರ್ಷಗಳಿಂದ ಪ್ರಸಾರ ಆಗುತ್ತಿರುವ ಈ ಕಾರ್ಯಕ್ರಮದ 3500ನೇ ಸಂಚಿಕೆ ನಾಳೆ (24-07-2018, ಮಂಗಳವಾರ) ಪ್ರಸಾರ ಆಗಲಿದೆ.

  ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಕಾರ್ಯಕ್ರಮಗಳ ಪೈಕಿ 'ಥಟ್ ಅಂತ ಹೇಳಿ' ಕೂಡ ಒಂದು. ಈಗಾಗಲೇ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಪಾಲ್ಗೊಂಡು ರಸಪ್ರಶ್ನೆಗಳಿಗೆ ಉತ್ತರಿಸಿ, ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ.

  ಈಗ ಇದೇ ಸಾಲಿಗೆ ಸೇರಲು ನಟಿ ಶ್ರುತಿ ಹರಿಹರನ್ ಕೂಡ ಸಜ್ಜಾಗಿದ್ದಾರೆ. ಹೌದು, 'ಥಟ್ ಅಂತ ಹೇಳಿ' ಕಾರ್ಯಕ್ರಮದ 3501 ಹಾಗೂ 3501 ಸಂಚಿಕೆಗಳಲ್ಲಿ ಶ್ರುತಿ ಹರಿಹರನ್ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಬೇಕಾದ್ರೆ, ಫೋಟೋಗಳನ್ನು ನೀವೇ ನೋಡಿಕೊಂಡು ಬನ್ನಿ....

  'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಶ್ರುತಿ ಹರಿಹರನ್

  'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಶ್ರುತಿ ಹರಿಹರನ್

  'ಲೂಸಿಯಾ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಬ್ಯೂಟಿಫುಲ್ ಮನಸ್ಸುಗಳು', 'ತಾರಕ್' ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಶ್ರುತಿ ಹರಿಹರನ್ ದೂರದರ್ಶನ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಡಾ.ನಾ.ಸೋಮೇಶ್ವರ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

  ಥಟ್ ಅಂತ ಹೇಳಿ ರಸಪ್ರಶ್ನೆ ಶೋಗೆ ಮತ್ತೊಂದು ಗರಿಥಟ್ ಅಂತ ಹೇಳಿ ರಸಪ್ರಶ್ನೆ ಶೋಗೆ ಮತ್ತೊಂದು ಗರಿ

  ಶ್ರುತಿ ಜೊತೆಗೆ ನಿರ್ದೇಶಕ ಜಯತೀರ್ಥ

  ಶ್ರುತಿ ಜೊತೆಗೆ ನಿರ್ದೇಶಕ ಜಯತೀರ್ಥ

  'ಒಲವೇ ಮಂದಾರ', 'ಟೋನಿ', 'ಬ್ಯೂಟಿಫುಲ್ ಮನಸ್ಸುಗಳು', 'ವೆನ್ನಿಲ್ಲಾ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಜಯತೀರ್ಥ, ನಟಿ ಶ್ರುತಿ ಹರಿಹರನ್ ಎದುರು 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ.

  ಥಟ್ ಅಂತ ಹೇಳಿ ಶೋನ ವಿಶೇಷ ಸಂಚಿಕೆ ಪ್ರಸಾರ ಥಟ್ ಅಂತ ಹೇಳಿ ಶೋನ ವಿಶೇಷ ಸಂಚಿಕೆ ಪ್ರಸಾರ

  ಚಿತ್ರೀಕರಣ ಮುಗಿದಿದೆ.!

  ಚಿತ್ರೀಕರಣ ಮುಗಿದಿದೆ.!

  ಶ್ರುತಿ ಹರಿಹರನ್ ಹಾಗೂ ಜಯತೀರ್ಥ ಪಾಲ್ಗೊಂಡಿರುವ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಸಂಚಿಕೆಗಳ ಚಿತ್ರೀಕರಣ ಮುಕ್ತಾಯ ಆಗಿದೆ. ಈ ಬಗ್ಗೆ ಸ್ವತಃ ಡಾ.ನಾ.ಸೋಮೇಶ್ವರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ಹೊಸ ಮೈಲಿಗಲ್ಲು

  ಹೊಸ ಮೈಲಿಗಲ್ಲು

  3500 ಸಂಚಿಕೆಗಳನ್ನು ಪೂರೈಸುವ ಮೂಲಕ 'ಥಟ್ ಅಂತ ಹೇಳಿ' ಕಾರ್ಯಕ್ರಮ ಕಿರುತೆರೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. 3500ನೇ ಸಂಚಿಕೆಯಲ್ಲಿ ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರು ಭಾಗವಹಿಸಿದ್ದಾರೆ.

  English summary
  Kannada Actress Sruthi Hariharan has taken part in DD Chandana's Thatt antha heli quiz show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X