For Quick Alerts
  ALLOW NOTIFICATIONS  
  For Daily Alerts

  ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಔಟ್?

  By Mahesh
  |

  ಬಿಗ್ ಬಾಸ್ ರಿಯಾಲಿಟಿ ಶೋ ಹಲವರಿಗೆ ಕಷ್ಟವಾದರೂ ಇಷ್ಟಪಟ್ಟು ನೋಡುತ್ತಿದ್ದಾರೆ. ವಾರದಿಂದ ವಾರಕ್ಕೆ ಮನೆಯಲ್ಲಿ ಬಿಸಿ ಏರುತ್ತಿದೆ. ಕನ್ನಡ ಸಂಸ್ಕೃತಿಗೆ ಇದು ಮಾರಕವಾಗಿದೆ ಎನ್ನುವವರೆಲ್ಲ ಒಟ್ಟಾಗಿ ಫೇಸ್ ಬುಕ್ ನಲ್ಲಿ ಬಿಗ್ ಬಾಸ್ ವಿರುದ್ಧ ಕತ್ತಿ ಮಸೆದಿದ್ದಾರೆ. ಆದರೆ, ಬಿಗ್ ಬಾಸ್ ಮಾತ್ರ ತನ್ನ ಜಾಡಿನಲ್ಲೇ ಸಾಗಿದೆ.

  ಮೊದಲ ವಾರ ಪ್ರೇಕ್ಷಕರ ಮತ ಗಳಿಸಿದರೆ ವೋಟ್ ಔಟ್ ಅದ ನರ್ಸ್ ಜಯಲಕ್ಷ್ಮಿ ಅವರು ಈಗ ರಿಯಲ್ ಎಲೆಕ್ಷನ್ ಗೆ ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಸೇರಿರುವುದು ಎಲ್ಲರಿಗೂ ತಿಳಿದ ವಿಷಯ. ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಹೋಗ್ತೀರಾ ಮೇಡಂ ಎಂದು ನಮ್ಮ ವರದಿಗಾರರ ಪ್ರಶ್ನಿಸಿದಾಗ ಮುಗುಳ್ನಗೆ ಬೀರಿದ್ದರು.

  ಕರ್ನಾಟಕ ಪ್ರಥಮ ಮಹಿಳಾ ಮುಖ್ಯಮಂತ್ರಿ ಆಗುವ ಬಯಕೆ ಹೊಂದಿರುವ ನರ್ಸ್ ಜಯಮ್ಮ ಅವರಿಗೆ ನಮ್ಮ ಶುಭ ಹಾರೈಕೆ. ಈಗ ಮ್ಯಾಟರ್ ಗೆ ಬರೋಣ. ಈ ವಾರ ಮನೆಯಿಂದ ಯಾರು ಹೊರ ಬೀಳುತ್ತಾರೆ ಎಂಬ ಪ್ರಶ್ನೆಗೆ ತಕ್ಷಣಕ್ಕೆ ನಮ್ಮ ಓದುಗರು ಬಾಡಿ ಬ್ರಹ್ಮಾಂಡ ನರೇಂದ್ರ ಶರ್ಮ ಎಂದು ಹೇಳಿದ್ದಾರೆ.

  ಆದರೆ, ಗುಟ್ಟಿನ ವಿಷಯ ಎಂದರೆ ಈ ವಾರ ಶರ್ಮಾಜೀ ಸೇಫ್ ಆಗಿದ್ದಾರೆ. ಅಂದ ಹಾಗೆ, ಗುರುವಾರ ಬಿಗ್ ಬಾಸ್ ಮನೆಯಲ್ಲಿ ಭಾರಿ ಗುಡುಗು ಸಿಡಿಲು ಆರ್ಭಟ ಕೇಳಿ ಬರಲಿದೆ. ಕದನ, ಕಿತ್ತಾಟಕ್ಕೆ ನಾಂದಿಯಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದರು ಏನಾಗುತ್ತೆ ಕಾದು ನೋಡಿ..

  ನಂತರ 13ನೇ ಅಭ್ಯರ್ಥಿ ಶುಕ್ರವಾರ ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಅದು ಕಾಳಿಮಠದ ಮಾಜಿ ಸ್ವಾಮೀಜಿನಾ? ಮತ್ತೆ ಯಾರು ಹೊರಬೀಳುತ್ತಿದ್ದಾರೆ ಮುಂದೆ ಓದಿ...

  ನರೇಂದ್ರ ಬಾಬು ಶರ್ಮ

  ನರೇಂದ್ರ ಬಾಬು ಶರ್ಮ

  ಮನೆಯವರ ಮತಗಳು ಸಿಗದಿದ್ದರೂ ಪ್ರೇಕ್ಷಕರ ಎಸ್ ಎಂಎಸ್ ಬಲ ಶರ್ಮ ಅವರಿಗೆ ಸಿಕ್ಕಿದೆ. ಶುಕ್ರವಾರ ಇವರ ಗ್ರಹ ಗತಿ ಅಲ್ಪ ಪ್ರಮಾಣದಲ್ಲಿ ಏರುಪೇರಾದರೂ ಈ ಬಾರಿ ಮನೆಯಲ್ಲೇ ಉಳಿಯುವುದು ಖಾತ್ರಿಯಾಗಿದೆ. ಅದು ಹೇಗೆ ಕೊನೆ ಸ್ಲೈಡ್ ನಲ್ಲಿ ಉತ್ತರ ಸಿಗಲಿದೆ.

  ವಿಜಯ್ ರಾಘವೇಂದ್ರ

  ವಿಜಯ್ ರಾಘವೇಂದ್ರ

  ಮನೆಯವರ ಅಚ್ಚುಮೆಚ್ಚಿನ ಸ್ಪರ್ಧಿ. ಸೀರೆಯುಟ್ಟು ಟಾಸ್ಕ್ ಮಾಡಿದ ರೀತಿ ನೋಡಿ ಹುಡುಗಿಯರೇ ನಾಚಿಕೊಂಡಿದ್ದಾರೆ. ಕಳೆದ ವಾರ ಸೇಫ್ ಜೋನ್ ನಲ್ಲಿದ್ದರು. ಈ ವಾರವೂ ಅದೇ ಜೋನ್ ನಲ್ಲೇ ಮುಂದುವರೆಯಲಿದ್ದಾರೆ. ಮನೆ ಮಂದಿ ನೆನೆದು ಕಣ್ಣೀರಿಟ್ಟಿದ್ದು ಪ್ರೇಕ್ಷಕರ ಎದೆಕಲುಕಿದ್ದು ನಿಜ. ರಾಘು ಈ ವಾರ ಸೇಫ್

  ಅರುಣ್ ಸಾಗರ್

  ಅರುಣ್ ಸಾಗರ್

  ತುಂಟ ಮಾತು, ಕುಹಕ, ಗುಂಪುಗಾರಿಕೆ ಎಲ್ಲದರ ಸಮ್ಮಿಶ್ರವಾಗಿರುವ ಅರುಣ್ ಅವರ ಕಲೆಗಾರಿಕೆ ನಿಜ ಬಣ್ಣ ಈಗ ಬಯಲಾಗುತ್ತಿದೆ. ಮನೆಯಲ್ಲಿರುವ ಕೆಲವರಿಗೆ ಅರುಣ್ ಮೇಲೆ ಕೋಪವಿದೆ ಅದು ವೋಟ್ ಔಟ್ ನಲ್ಲೂ ಕಂಡಿದೆ. ಪ್ರೇಕ್ಷಕರು ಸದ್ಯಕ್ಕೆ ಅರುಣ್ ಹೊರ ಹಾಕಲು ಮನಸ್ಸು ಮಾಡುತ್ತಿಲ್ಲ.

  ನಿಖಿತಾ ತುಕ್ರಲ್

  ನಿಖಿತಾ ತುಕ್ರಲ್

  ಮೊದಲ ವಾರ ಇದ್ದಂತೆ ಎರಡನೇ ವಾರ ಇಲ್ಲ. ಸಂಜನಾ ಜೊತೆ ಗುಂಪುಗಾರಿಕೆ ಆರಂಭಿಸಿದ ನಿಕ್ಕಿ, ಸ್ವಲ್ಪ ಡೇಂಜರ್ ಜೋನ್ ಗೆ ಹೋದರೂ ಕನ್ನಡ ಪ್ರೇಕ್ಷಕರಿಗೆ ಈಕೆಯ ಪೆದ್ದುತನ, ಜಾಣತನ ಇಷ್ಟವಾಗಿದೆ. ಸದ್ಯಕ್ಕೆ ಈ ವಾರವೂ ಸೇಫ್

  ವಿನಾಯಕ್ ಜೋಶಿ

  ವಿನಾಯಕ್ ಜೋಶಿ

  ಟಾಸ್ಕ್ ಪೂರೈಸುವಲ್ಲಿ ತೋರುವ ಜಾಣ್ಮೆ ಜೊತೆಗಾರರ ಜೊತೆ ಇರುವಾಗ ತೋರುತ್ತಿಲ್ಲ ಎಂಬ ದೂರಿದೆ. ಗುಂಪುಗಾರಿಕೆ ಡ್ರಾಮಾ ಮಾಡುವುದರಲ್ಲಿ ಎತ್ತಿದ ಕೈ. ಜಗಳವಾಡುವಾಗ ಸೈಲಂಟ್ ಆಗುವ ಜೋಶಿ ಇನ್ನೂ ವೈಲೆಂಟ್ ಆಗಿಲ್ಲದಿರುವುದು ಅವರನ್ನು ಮನೆಯಿಂದ ಹೊರಹಾಕದಂತೆ ಉಳಿಸಿದೆ

  ಅಪರ್ಣ

  ಅಪರ್ಣ

  ಮೊದಲವಾರ ಮನೆಯವರನ್ನು ನೆನೆದು ಕಣ್ಣೀರಿಟ್ಟ ಅಪರ್ಣ ಅವರಿಗೆ ನಾಟಕೀಯತೆ ಗೊತ್ತಿಲ್ಲ. ಕನ್ನಡ ಭಾಷಿಕರ ಜೊತೆ ಗುಂಪುಗಾರಿಕೆ ಇದ್ದರೂ ಮನೆಯಿಂದ ಹೊರ ಬೀಳುವಷ್ಟು ವೋಟ್ ಔಟ್ ಮನೆ ಮಂದಿಯೂ ಮಾಡಿಲ್ಲ. ಪ್ರೇಕ್ಷಕರ ಎಸ್ ಎಂಎಸ್ ಕೂಡಾ ಸಾಲುತ್ತಿಲ್ಲ. ಇನ್ನು ಮನೆಯಲ್ಲೇ ಇರಬೇಕಾಗುತ್ತೆ

  ತಿಲಕ್

  ತಿಲಕ್

  ಈತ ಹೇಗೆ ಏನು ಎಂಬುದು ಇನ್ನೂ ಸಹ ಸ್ಪರ್ಧಿಗಳಿಗೂ ತಿಳಿದಿಲ್ಲ. ಪ್ರೇಕ್ಷಕರಿಗೂ ಗೊತ್ತಾಗುತ್ತಿಲ್ಲ. ಸೈಲೆಂಟ್ ಆಗಿ ಆಟವಾಡುತ್ತಿರುವ ತಿಲಕ್ ಆಗಾಗ ಮಾತಿನ ಜಗಳದಲ್ಲಿ ಕಾಣಿಸಿಕೊಂಡರೂ ಅದರ ಕಾರಣ ಮಾತ್ರ ತಿಲಕ್ ಆಗಿರಲಿಲ್ಲ ಎಂಬುದು ಗಮನಾರ್ಹ. ವೋಟ್ ಔಟ್ ನಲ್ಲಿ ತಿಲಕ್ ಸೇಫ್

  ಅನುಶ್ರೀ

  ಅನುಶ್ರೀ

  ಪಟಪಟನೆ ಮಾತನಾಡುವ ಅನುಶ್ರೀ ಎಲ್ಲರೊಡನೆ ಬೆರೆಯುವ ವಿಫಲ ಯತ್ನ ನಡೆಸಿದರೂ ಅವರ ವಿರುದ್ಧ ಮತಗಳು ಬಿದ್ದಿದೆ. ವೋಟ್ ಔಟ್ ಆಗದಿದ್ದರೂ ಡೇಂಜರ್ ಜೋನ್ ನಲ್ಲಿದ್ದಾರೆ.

  ಶ್ವೇತಾ

  ಶ್ವೇತಾ

  ನಿಖಿತಾ, ಸಂಜನಾ ಜೊತೆ ಅಡುಗೆ ಮನೆ ಗಲಾಟೆ, ಚಂದ್ರಿಕಾ ಜೊತೆ ಮಾತ್ರ ಒಡನಾಟ, ತಿಲಕ್ ಜೊತೆ ಆಪ್ತತೆ ಎಲ್ಲವೂ ನಿಜ ಎಂದು ತೋರಿದರೂ ಅದು ಆಟದ ಒಂದು ಭಾಗವಷ್ಟೇ. ಆದರೂ ಅದು ತಿಳಿಯುವಷ್ಟರಲ್ಲಿ ವೋಟ್ ಔಟ್ ಮುಗಿದರೂ ಅಚ್ಚರಿಯೇನಿಲ್ಲ. ಸ್ಪರ್ಧಿಗಳ ಒಲವು ಸಿಗದಿದ್ದರೂ ಪ್ರೇಕ್ಷಕರು ಸದ್ಯಕ್ಕೆ ಡೇಂಜರ್ ಜೋನ್ ನಲ್ಲಿಟ್ಟಿದ್ದಾರೆ.

  ಚಂದ್ರಿಕಾ

  ಚಂದ್ರಿಕಾ

  ಡ್ಯಾನ್ಸ್ ಮಾಡುವಾಗ ಸಂಜನಾ ಜೊತೆ ಆದ ಗಲಾಟೆ, ಗುರೂಜಿ ಜೊತೆ ಆಪ್ತ ಮಾತುಕತೆ, ಬಿಗ್ ಬಾಸ್ ಕೊಟ್ಟ ಸೀಕ್ರೇಟ್ ಟಾಸ್ಕ್ ಪೂರೈಸುತ್ತಿರುವುದು ಎಲ್ಲವೂ ಚಂದ್ರಿಕಾರನ್ನು ಮನೆಯಿಂದ ಹೊರ ಹಾಕದಂತೆ ಉಳಿಸುವ ಸಾಧ್ಯತೆಯಿದೆ. ಪ್ರೇಕ್ಷಕರಿಗೂ ಇನ್ನೂ ಗೊಂದಲವಿದೆ. ಆದರೂ ಡೇಂಜರ್ ಜೋನ್ ನಲ್ಲಿದ್ದಾರೆ.

  ಸಂಜನಾ

  ಸಂಜನಾ

  ಬಿಗ್ ಬಾಸ್ ನಲ್ಲಿ ಹೇಗೆ ಆಡವಾಡಬೇಕು ಎಂಬುದನ್ನು ಚೆನ್ನಾಗಿ ಆರಿತಿರುವ ಸಂಜನಾ ಅವರ ವಿನಾಕರಣ ಕೋಳಿ ಜಗಳಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಮನೆ ಮಂದಿ ಕೂಡಾ ಹೆಚ್ಚಿನ ಮತ ನೀಡಿ ಮನೆಯಿಂದ ಹೊರ ದಬ್ಬುವ ಸನ್ನಾಹದಲ್ಲಿದ್ದಾರೆ. ಗುರುವಾರ ಸಂಜನಾ ಅವರ ಲೆಗೇಜ್ ಪ್ಯಾಕ್ ಆಪ್ ಆಗಿರುವ ಸುದ್ದಿ ಸಿಕ್ಕಿದೆ. ಈ ವಾರ ಮನೆಯಲ್ಲೇ ಉಳಿದರೆ ಅದು ಅಚ್ಚರಿ ಎಲ್ಲವೂ ಬಿಗ್ ಬಾಸ್ ಮಹಿಮೆ

  ಸುದೀಪಣ್ಣ ಏನ್ ಹೇಳ್ತಾರೆ?

  ಸುದೀಪಣ್ಣ ಏನ್ ಹೇಳ್ತಾರೆ?

  ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ ನಲ್ಲಿ ನೀಡಿದ ಸುಳಿವಿನ ಪ್ರಕಾರ ನರೇಂದ್ರ ಶರ್ಮ, ಅರುಣ್ ಸಾಗರ್ ಹಾಗೂ ವಿಜಯ ರಾಘವೇಂದ್ರ ಸೇಫ್ ಎಂದಿದ್ದಾರೆ. ಉಳಿದ ಸ್ಪರ್ಧಿಗಳಲ್ಲಿ ಡೇಂಜರ್ ಜೋನ್ ನಲ್ಲಿರುವುದು ಸಂಜನಾ ಮಾತ್ರ ಹೀಗಾಗಿ ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿ ಸಂಜನಾ ಎಂದು ತಿಳಿಯಬಹುದು. ಆದರೆ, ಈ ವಿಷ್ಯ ಸುದೀಪ್ ಗೂ ಗೊತ್ತಿಲ್ಲವಂತೆ

  English summary
  Etv Kannada Bigg Boss is gaining its popularity day by day and public are voting cleverly and eliminating the un wanted contestant from Bigg Boss house

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X