»   » ಸುವರ್ಣ ವಾಹಿನಿಯಲ್ಲಿ ಜಗ್ಗೇಶ್ ಸೂಪರ್ ಹಿಟ್ ಚಿತ್ರ

ಸುವರ್ಣ ವಾಹಿನಿಯಲ್ಲಿ ಜಗ್ಗೇಶ್ ಸೂಪರ್ ಹಿಟ್ ಚಿತ್ರ

Posted By:
Subscribe to Filmibeat Kannada

ನವರಸನಾಯಕ ಜಗ್ಗೇಶ್ ಅಭಿನಯದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ 'ಬಾಡಿಗಾರ್ಡ್' ಚಿತ್ರ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಭಾನುವಾರ (ಆ.26) ಸಂಜೆ 6 ಗಂಟೆಗೆ ಟ್ವೆಂಟಿಫೋರ್ ಕ್ಯಾರೆಟ್ ಮನರಂಜನೆಯ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು.

2011ರಲ್ಲಿ ಬಿಡುಗಡೆಯಾದ ಈ ಚಿತ್ರ ಮಲಯಾಳಂನ ಸೂಪರ್ ಹಿಟ್ ಚಿತ್ರ 'ಬಾಡಿಗಾರ್ಡ್' ರೀಮೇಕ್. ಮೂಲ ಚಿತ್ರದಲ್ಲಿ ದಿಲೀಪ್ ಹಾಗೂ ನಯನತಾರಾ ಮುಖ್ಯಪಾತ್ರಗಳನ್ನು ಪೋಷಿಸಿದ್ದರು. ಕನ್ನಡದಲ್ಲಿ ಜಗ್ಗೇಶ್ ಗೆ ಜೊತೆಯಾಗಿ ಡೈಸಿ ಶಾ ಅಭಿನಯಿಸಿದ್ದಾರೆ.

ಇದೇ ಚಿತ್ರ ತಮಿಳಿನಲ್ಲಿ 'ಕಾವಲನ್' ಎಂದಾಗಿತ್ತು. ವಿಜಯ್ ಹಾಗೂ ಅಸಿನ್ ಮುಖ್ಯಭೂಮಿಕೆಯಲ್ಲಿದ್ದರು. ಇನ್ನು ಹಿಂದಿ 'ಬಾಡಿಗಾರ್ಡ್' ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ಎಲ್ಲ ಪ್ರಮುಖ ಭಾಷೆಗಳಲ್ಲೂ ರೀಮೇಕ್ ಆದಂತಹ ಚಿತ್ರ ಇದು.

ಕನ್ನಡದ 'ಬಾಡಿಗಾರ್ಡ್' ಚಿತ್ರ ವಿಮರ್ಶಕರ ಮೆಚ್ಚುಗೆಗೆಗೂ ಪಾತ್ರವಾಗಿದೆ. ಒಂದು ವೇಳೆ ನೀವು ಚಿತ್ರವನ್ನು ಥಿಯೇಟರ್ ನಲ್ಲಿ ಮಿಸ್ ಆಗಿದ್ದರೆ ಈಗ ಕುಟುಂಬ ಸಮೇತ ಕಿರುತೆರೆಯಲ್ಲಿ ಸುವರ್ಣಾವಕಾಶ ನಿಮ್ಮದಾಗಲಿ. ಬಾಡಿಗಾರ್ಡ್ ಚಿತ್ರವಿಮರ್ಶೆ ಓದಿ.

ಟಿ.ಎ. ಆನಂದ್ ಆಕ್ಷನ್ ಕಟ್ ಹೇಳಿರುವ ಚಿತ್ರದಲಿ ಸ್ಫೂರ್ತಿ, ಗುರುದತ್, ಸಾಧುಕೋಕಿಲ, ಬ್ಯಾಂಕ್ ಜನಾರ್ಧನ, ಜೀವನ್ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಅಶೋಕ್ ವಿ ರಾಮನ್, ಸಂಗೀತ ವಿನಯ್ ಚಂದ್ರ. ಜಗ್ಗೇಶ್ ಸ್ವಂತ ಬ್ಯಾನರ್ ಚಿತ್ರವಾಗಿದ್ದು ಅವರ ಪತ್ನಿ ಪರಿಮಳ ಜಗ್ಗೇಶ್ ಚಿತ್ರದ ನಿರ್ಮಾಪಕಿ. (ಒನ್ ಇಂಡಿಯಾ ಕನ್ನಡ)

English summary
Kannada film starring Jaggesh and Daisy Shah in the lead roles Bodyguard is playing on Asianet Suvarna channel on 26th August at 6pm. Parimala Jaggesh, wife of Jaggesh is producing this film jointly with him under Gururaja films banner.
Please Wait while comments are loading...