For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲೂ ದಾಖಲೆ ಬರೆದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'

  By Harshitha
  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ ಚಲನಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಗಾಂಧಿನಗರದ ಗಲ್ಲಪೆಟ್ಟಿಗೆಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಕಲೆಕ್ಟ್ ಮಾಡಿ ಇತಿಹಾಸ ಸೃಷ್ಟಿಸಿದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಇದೀಗ ಕಿರುತೆರೆಯಲ್ಲೂ ಹಿಸ್ಟ್ರಿ ಕ್ರಿಯೇಟ್ ಮಾಡಿದೆ.

  ಮೂಲಗಳ ಪ್ರಕಾರ ಖಾಸಗಿ ವಾಹಿನಿಯೊಂದಕ್ಕೆ ದಾಖಲೆ ಮೊತ್ತಕ್ಕೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಪ್ರಸಾರ ಹಕ್ಕು ಸೇಲ್ ಆಗಿದೆ. ಮೊತ್ತ ಎಷ್ಟು ಅನ್ನೋದು ಬಹಿರಂಗವಾಗದೇ ಇದ್ದರೂ, ಯಶ್ ವೃತ್ತಿ ಬದುಕಿನಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಚಿತ್ರ ಅನ್ನುವ ಹೆಗ್ಗಳಿಕೆಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಪಾತ್ರವಾಗಿದೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]

  ಚಿತ್ರದ ಡಿವಿಡಿ ಹಕ್ಕುಗಳು ಕೂಡ 18 ಲಕ್ಷಕ್ಕೆ ಬಿಕರಿ ಆಗಿದೆ. ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಅಂದ್ರೆ, ವರಮಹಾಲಕ್ಷ್ಮಿ ಹಬ್ಬದಂದು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಹಾಗಂತ ಮೂಲಗಳು ತಿಳಿಸಿವೆ. [ಸೈಮಾ ಅವಾರ್ಡ್ಸ್ ನಲ್ಲೂ ದಾಖಲೆ ಬರೆದ ಯಶ್ 'ರಾಮಾಚಾರಿ']

  ಇದೇ ತಿಂಗಳ 28, ಅಂದ್ರೆ ವರಮಹಾಲಕ್ಷ್ಮಿ ಹಬ್ಬದಂದು 'RX ಸೂರಿ' ಮತ್ತು 'ಆಟಗಾರ' ಸಿನಿಮಾ ತೆರೆಗೆ ಬರಲಿದೆ. ಆ ಚಿತ್ರಗಳಿಗೆ ಕಿರುತೆರೆ ಮೂಲಕ ಬ್ರೇಕ್ ಹಾಕೋಕೆ 'ರಾಮಾಚಾರಿ' ಕೂಡ ಬರ್ತಿದ್ದಾನೆ. ರಾಮಾಚಾರಿಯನ್ನ ಬೆಳ್ಳಿತೆರೆ ಮೇಲೆ ಮಿಸ್ ಮಾಡಿಕೊಂಡಿದ್ರೆ, ಈ ಬಾರಿ ಕಿರುತೆರೆಯಲ್ಲಿ ತಪ್ಪದೇ ವೀಕ್ಷಿಸಿ. (ಏಜೆನ್ಸೀಸ್)

  English summary
  According to the reports, Yash and Radhika Pandit starrer Kannada Movie 'Mr and Mrs Ramachari' satellite rights is sold for record price. 'Mr and Mrs Ramachari' will be telecasted on TV on Varamahalakshmi Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X