Don't Miss!
- News
ಸಾಕ್ಷಿ ಸಂಗ್ರಹಕ್ಕಾಗಿ ಮುಹಮ್ಮದ್ ಜುಬೈರ್ನನ್ನು ಬೆಂಗಳೂರಿಗೆ ಕರೆತರಲಿರುವ ದೆಹಲಿ ಪೊಲೀಸರು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಕರ್ಕ, ಕುಂಭ, ಮೀನ ರಾಶಿಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಹೆಣ್ ಮಕ್ಕಳ ದಿಲ್ ಕದ್ದ ಅಭಿನವ್: ಹ್ಯಾಂಡ್‌ಸಮ್ ಹುಡುಗನ ಕಲರ್ ಫುಲ್ ಜಗತ್ತು ಹೇಗಿದೆ?
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ರಾಥೋಡ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಅಭಿನವ್ ವಿಶ್ವನಾಥನ್. ಮನೋಜ್ಞ ನಟನೆಯ ಮೂಲಕ ಸೀರಿಯಲ್ ಪ್ರಿಯರು, ಅದರಲ್ಲೂ ಹೆಣ್ಣು ಮಕ್ಕಳ ದಿಲ್ ಕದ್ದಿರುವ ಅಭಿನವ್ ಅವರಿಗೆ ನಾಟಕಗಳು ಎಂದರೆ ತುಂಬಾ ಇಷ್ಟ. ರಂಗಶಂಕರದಲ್ಲಿ ನಡೆಯುತ್ತಿದ್ದ ನಾಟಕಗಳನ್ನೆಲ್ಲಾ ಮಿಸ್ ಮಾಡದೇ ನೋಡುತ್ತಿದ್ದ ಅಭಿನವ್‌ಗೆ ನಟನೆಯ ಮೇಲೆ ಒಲವು ಮೂಡಿತು.
ನಟನೆಯ ಮೇಲೆ ಕ್ರೇಜ್ ಹೆಚ್ಚಾಗಿದ್ದೇ ಕೆಲಸಕ್ಕೆ ಬಾಯ್ ಹೇಳಿ ನಟನೆಗೆ ಹಾಯ್ ಹೇಳಿದರು. ಹೌದು, ಇಂಜಿನಿಯರಿಂಗ್ ಪದವೀಧರರಾಗಿರುವ ಅಭಿನವ್ ಮುಂದೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಟನೆಯ ಸಲುವಾಗಿ ಕೆಲಸವನ್ನು ಬಿಟ್ಟ ಅಭಿನವ್ ಇಂದು ಪ್ರೇಕ್ಷಕರ ಪಾಲಿನ ಪ್ರೀತಿಯ ಅಗಸ್ತ್ಯ. ಅಂದ ಹಾಗೇ ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅಭಿನವ್ ಒಂದಷ್ಟು ಶೋಗಳಲ್ಲಿ ಮಿಂಚಿದರು.
ಕುರಿ
ಜೊತೆ
ಬಂದ
ಪ್ರತಾಪನನ್ನು
ಕಂಡು
ನಗೆಗಡಲಲ್ಲಿ
ತೇಲಿದ
'ಕಾಮಿಡಿ
ಗ್ಯಾಂಗ್'
ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ನಟ
'ನನ್ನರಸಿ ರಾಧೆ' ಧಾರಾವಾಹಿ ಸಾಕಷ್ಟು ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಅಗಸ್ತ್ಯ-ಇಂಚರಾ ಕೋಳಿ ಜಗಳ, ಪ್ರೀತಿ, ಮುನಿಸು ಜನರಿಗೆ ಇಷ್ಟವಾಗುತ್ತಿದೆ. ಇದರ ಜೊತೆಯಲ್ಲಿ ಅಗಸ್ತ್ಯ ಪಾತ್ರ ಅನೇಕರ ಗಮನ ಸೆಳೆದಿದೆ. ಮುಂದೆ ರಂಗಭೂಮಿಯತ್ತ ಮುಖ ಮಾಡಿದ ಅಭಿನವ್ ಅಲ್ಲಿ ನಟನೆಯ ಆಗಿ ಹೋಗುಗಳು, ರೀತಿ ನೀತಿಗಳು ಹೀಗೆ ಎಲ್ಲಾ ವಿಚಾರಗಳನ್ನು ಆಳವಾಗಿ ಕಲಿತುಕೊಂಡರು. ಮಾತ್ರವಲ್ಲ ಇದರ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಅಭಿನವ್ ಅಲ್ಲಿನ ಮಕ್ಕಳಿಗೆ ನಾಟಕಗಳನ್ನು ಅಭ್ಯಾಸ ಮಾಡಿಸುತ್ತಿದ್ದರು. ಆ ರೀತಿಯಲ್ಲಿ ನಟನಾ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಅಭಿನವ್ ಮುಂದೆ ಬಣ್ಣದ ಕ್ಷೇತ್ರದಲ್ಲಿ ಮುಂದುವರೆಯುವ ಸಲುವಾಗಿ ಸಾಕಷ್ಟು ಆಡಿಶನ್ ನೀಡಲಾರಂಭಿಸಿದರು.
ಅಭಿನವ್, ಅಗಸ್ತ್ಯ ಆಗಿದ್ದು ಹೇಗೆ ಗೊತ್ತಾ?
ಆಡಿಶನ್ ನೀಡಿದರೂ ಆಯ್ಕೆಯಾಗದೇ ಇದ್ದಾಗ, ಅಭಿನವ್‌ಗೆ ಸಾಕಾಗಿ ಹೋಯಿತು. ಆ ಸಮಯದಲ್ಲಿ ಮುಂಬೈಗೆ ಹೋಗಿ ಅಲ್ಲಿ ಅದೃಷ್ಟ ಪರೀಕ್ಷೆ ಮಾಡುವ ನಿರ್ಧಾರ ಮಾಡಿದ್ದರು. ಇನ್ನೇನು ಹೋಗಲು ಅವರು ತಯಾರಾಗಿದ್ದರು. ಆಗ ಹಿರಿಯ ನಟ ಪ್ರಕಾಶ್ ಬೆಳವಾಡಿ ಆಡಿಶನ್ ಕುರಿತು ಹೇಳಿ, ಅದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ಅಂತೆಯೇ ಭಾಗವಹಿಸಿದ ಅಭಿನವ್ ಮುಂದೆ ಆಯ್ಕೆಯೂ ಆದರು. ಅಗಸ್ತ್ಯ ಆಗಿ ಬದಲಾಗಿ ಪ್ರೇಕ್ಷಕರ ಮುಂದೆ ಬಂದು ಸೈ ಎನಿಸಿಕೊಂಡರು. ಕನ್ನಡ ಕಿರುತೆರೆಯಲ್ಲಿ ಸದ್ಯ ಹ್ಯಾಂಡ್ಸಮ್ ಹೀರೊಗಳದ್ದೇ ಕಾರುಬಾರಾಗಿದ್ದು, 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಅಗಸ್ಥ್ಯ ರಾಥೋಡ್ ಪಾತ್ರದ ಮೂಲಕ ನಟ ಅಭಿನವ್ ವಿಶ್ವನಾಥನ್ ಜನಮನ ಗೆದ್ದಿದ್ದಾರೆ. ನಟನೆ ಮಾತ್ರವಲ್ಲದೇ ಹ್ಯಾಂಡ್ಸಮ್ ಹುಡುಗನ ಫಿಟ್ನೆಸ್ ನೋಡಿ ಹೆಣ್ಣು ಹೈಕಳು ಸಿಕ್ಕಾಪಟ್ಟೆ ಫ್ಯಾನ್ಸ್ ಆಗಿದ್ದಾರೆ ಅನ್ನೋ ಸುದ್ದಿಯೂ ಇದೆ.
ಮಾಡೆಲಿಂಗ್
ಮೂಲಕ
ಕಿರುತೆರೆಗೆ
ಎಂಟ್ರಿ
ಕೊಟ್ಟ
'ಕಮಲಿ'
ಧಾರಾವಾಹಿ
ನಟಿ
ರಚನಾ

ಬಣ್ಣದ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ ಅಭಿನವ್
'ನನ್ನರಸಿ ರಾಧೆ'ಯ ಅಗಸ್ತ್ಯ ಆಗಿ ಬಣ್ಣದ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಅಭಿನವ್ ಅವರ ಬದುಕೇ ಈಗ ಭಿನ್ನವಾಗಿದೆ. ಇಂದು ಅವರು ಎಲ್ಲೇ ಹೋದರೂ ಜನ ಅವರನ್ನು ಅಗಸ್ತ್ಯ ರಾಥೋಡ್ ಎಂದೇ ಗುರುತಿಸುತ್ತಾರೆ. ಹಲವರಿಗೆ ನನ್ನ ನಿಜವಾದ ಹೆಸರು ಅಭಿನವ್ ಎಂಬುದು ತಿಳಿದಿಲ್ಲ. ನಾನು ಇಂದು ಅಗಸ್ತ್ಯ ಎಂದೇ ಜನಪ್ರಿಯನಾಗಿದ್ದೇನೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನನಗೆ ಜನರ ಪ್ರೀತಿ ಸಿಕ್ಕಿದೆ ಎಂದು ಅಭಿನವ್ ಖುಷಿ ವ್ಯಕ್ತಿಪಡಿಸಿದ್ದರು.