For Quick Alerts
  ALLOW NOTIFICATIONS  
  For Daily Alerts

  ಜೂನ್ 26ರಿಂದ ಕರುನಾಡಿನ ಮನೆ-ಮನೆಗೆ ಬರಲಿದ್ದಾಳೆ 'ಕಾವೇರಿ'

  By Bharath Kumar
  |

  ಸುಮಾರು 23 ವರ್ಷಗಳಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಾ ಬಂದಿರುವ ಉದಯ ಟಿವಿ ಮತ್ತೊಂದು ಹೊಸ ಧಾರವಾಹಿಯನ್ನ ಪ್ರಸಾರ ಮಾಡುತ್ತಿದೆ. ಕಾಮಿಡಿ, ಫ್ಯಾಮಿಲಿ, ರೊಮ್ಯಾಂಟಿಕ್, ಹಾರರ್ ಹೀಗೆ ಎಲ್ಲ ಬಗೆಯ ಧಾರವಾಹಿಗಳನ್ನ ಕಿರುತೆರೆ ಪ್ರೇಕ್ಷಕರಿಗಾಗಿ ನೀಡುತ್ತಿರುವ ಉದಯ ಟಿವಿ ಈಗ 'ಕಾವೇರಿ' ಎಂಬ ಕಥೆಯೊಂದಿಗೆ ಬರುತ್ತಿದೆ.

  ಉದಯ ಟಿವಿ ಅಲ್ಲದೇ, ಬೇರೆ ವಾಹಿನಿಗಳಲ್ಲೂ ಕೂಡ ಹೆಚ್ಚು ಹೆಚ್ಚು ಧಾರವಾಹಿಗಳು ಮೂಡಿ ಬರುತ್ತಿದೆ. ಆದ್ರೆ, ಈ 'ಕಾವೇರಿ' ತುಂಬಾನೇ ವಿಶೇಷ ಮತ್ತು ಪ್ರೇಕ್ಷಕರಿಗೆ ಇಷ್ಟವಾಗುತ್ತಾಳಂತೆ.

  ಹಾಗಿದ್ರೆ, 'ಕಾವೇರಿ' ಯಾವಾಗ ಮತ್ತು ಎಷ್ಟು ಗಂಟೆಗೆ ಪ್ರಸಾರ ಆಗುತ್ತೆ, ಯಾವೆಲ್ಲಾ ಕಲಾವಿದರು ಅಭಿನಯಿಸಿದ್ದಾರೆ ಎಂಬುದನ್ನ ಮುಂದೆ ಓದಿ.......

  'ಕಾವೇರಿ' ನೂತನ ಧಾರವಾಹಿ

  'ಕಾವೇರಿ' ನೂತನ ಧಾರವಾಹಿ

  ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ 'ಕಾವೇರಿ' ಎಂಬ ಹೊಸ ಧಾರವಾಹಿ ಆರಂಭವಾಗುತ್ತಿದೆ. ತ್ಯಾಗಮಯಿ, ಸ್ನೇಹಮಯಿ ಹುಡುಗಿಯ ಕಥೆ 'ಕಾವೇರಿ'. ಬೆಂಕಿಯಲ್ಲಿ ಅರಳಿದ ಹೂ, ತಾನು ನೊಂದರೂ ಮನೆಯವರಿಗೆ ನೆರಳನ್ನು ನೀಡುವಾಕೆ ಈ 'ಕಾವೇರಿ'.

  'ಕಾವೇರಿ' ಪಾತ್ರದಲ್ಲಿ ಪ್ರಿನ್ಸಿ ಕೃಷ್ಣನ್

  'ಕಾವೇರಿ' ಪಾತ್ರದಲ್ಲಿ ಪ್ರಿನ್ಸಿ ಕೃಷ್ಣನ್

  'ಕಾವೇರಿ' ಧಾರವಾಹಿಯಲ್ಲಿ ನಟಿ ಪ್ರಿನ್ಸಿ ಕೃಷ್ಣನ್ ನಾಯಕಿ ಆಗಿ ಅಭಿನಯಿಸುತ್ತಿದ್ದು, ಶೀರ್ಷಿಕೆ ಪಾತ್ರವನ್ನ ನಿರ್ವಹಿಸಲಿದ್ದಾರೆ. ನಾಯಕನಾಗಿ ಶ್ರೀಧರ ನಟಿಸುತ್ತಿದ್ದಾರೆ. ಉಳಿದಂತೆ ಪ್ರಧಾನ ಪಾತ್ರಗಳಲ್ಲಿ ಜನಪ್ರಿಯ ನಟರಾದ ಅಶ್ವಿನಿ ಗೌಡ, ಸುರೇಶ್ ರೈ, ಶ್ರೀಕಾಂತ ಹೆಬ್ಳಿಕರ್ ಮತ್ತು ಇತರರು ಕಾಣಿಸಿಕೊಳ್ಳುತ್ತಿದ್ದಾರೆ.

  ನಿರ್ಮಾಣ ಮತ್ತು ನಿರ್ದೇಶನ

  ನಿರ್ಮಾಣ ಮತ್ತು ನಿರ್ದೇಶನ

  'ಕಾವೇರಿ' ನ್ಯೂ ಡಿ-ಟು ಮಿಡಿಯಾ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ನಿರ್ದೇಶನದ ಜವಾಬ್ದಾರಿಯನ್ನು ವಿನೋದ ಫೀಲ್ಸ್ ವಹಿಸಿಕೊಂಡಿದ್ದಾರೆ. 'ಕಾವೇರಿ' ಕೇವಲ ಪಾತ್ರವಲ್ಲದೇ ಅದು ಸಮಸ್ತ ಹೆಣ್ತನದ ರಾಯಭಾರಿ ಎನ್ನುವುದು ನಿರ್ದೇಶಕ ವಿನೋದ ಅವರ ಮಾತು.

  ಚಿನ್ನ ಗೆಲ್ಲುವ ಅವಕಾಶ

  ಚಿನ್ನ ಗೆಲ್ಲುವ ಅವಕಾಶ

  'ಕಾವೇರಿ' ಧಾರಾವಾಹಿಯನ್ನು ನೋಡಿ ಚಿನ್ನ ಗೆಲ್ಲಿ ಎಂಬುದರ ಮೂಲಕ ಉದಯ ವೀಕ್ಷಕರಿಗೆ ಚಿನ್ನದ ಸುರಿಮಳೆ ಹರಿಸಲಿದೆ. ಜೂನ್ 26 ರಿಂದ ಜೂಲೈ 07 ರವರೆಗೆ ಧಾರಾವಾಹಿಯಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿದ ವಿನ್ನರ್ ಗಳಿಗೆ 100 ಗ್ರಾಮ್ ವರೆಗೂ ಬಂಗಾರವನ್ನು ಗೆಲ್ಲುವ ಅವಕಾಶವಿದೆ.

  ಯಾವಾಗನಿಂದ ಶುರು

  ಯಾವಾಗನಿಂದ ಶುರು

  ಇದೇ ಜೂನ್ 26 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ 'ಕಾವೇರಿ' ಧಾರವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Actress Princy Krishanan Playing lead in 'Kaveri' Serial which will be telecasted in Udaya Tv. 'Kaveri' Serial Starts From June 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X