For Quick Alerts
  ALLOW NOTIFICATIONS  
  For Daily Alerts

  ಶನಿವಾರ-ಭಾನುವಾರ ಟಿವಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ

  |

  ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಟೈಂ ಪಾಸ್ ಮಾಡಲು ಕಷ್ಟ ಆಗ್ತಿರಬಹುದು. ಟಿವಿಯಲ್ಲೂ ಹೇಳಿಕೊಳ್ಳುವಂತಹ ಒಳ್ಳೆಯ ಚಿತ್ರಗಳು ಹಾಕ್ತಿಲ್ಲ ಎಂಬ ನಿರಾಸೆಯೂ ಕಾಡುತ್ತಿರಬಹುದು. ಇದೀಗ, ಟಿವಿ ಪ್ರೇಕ್ಷಕರನ್ನು ರಂಜಿಸಲು ಜೀ ಕನ್ನಡ ವಾಹಿನಿ ಭರ್ಜರಿ ಪ್ಲಾನ್ ಮಾಡಿದ್ದು, ಸ್ಟಾರ್ ನಟರ ಹಿಟ್ ಚಿತ್ರಗಳನ್ನು ವಾರಾಂತ್ಯದಲ್ಲಿ ಪ್ರಸಾರ ಮಾಡುತ್ತಿದೆ.

  ವಾರಾಂತ್ಯದಲ್ಲಿ ಎರಡೂ ದಿನವೂ ಜೀ ಕನ್ನಡದಲ್ಲಿ ಸ್ಟಾರ್ ನಟರ ಹಿಟ್ ಸಿನಿಮಾಗಳು ಹಾಗೂ ವಿಭಿನ್ನ ಕಥಾಹಂದರ ಮೂಲಕ ಗಮನ ಸೆಳೆದ ಚಿತ್ರಗಳು ಪ್ರಸಾರವಾಗಲಿದೆ. ಶನಿವಾರ ಮೂರು ಸಿನಿಮಾ ಹಾಗೂ ಭಾನುವಾರ ಮೂರು ಸಿನಿಮಾ ಪ್ರಸಾರವಾಗಲಿದೆ. ಅಷ್ಟಕ್ಕೂ, ವಾರಾಂತ್ಯದಲ್ಲಿ ಟಿವಿ ಪ್ರೇಕ್ಷಕರನ್ನು ರಂಜಿಸಲು ಬರ್ತಿರುವ ಸಿನಿಮಾಗಳು ಯಾವುದು? ಮುಂದೆ ಓದಿ...

  ಶನಿವಾರ ಬೆಳಗ್ಗೆ Rambo-2

  ಶನಿವಾರ ಬೆಳಗ್ಗೆ Rambo-2

  ಶರಣ್, ಆಶಿಕಾ ರಂಗನಾಥ್ ಅಭಿನಯಿಸಿರುವ Rambo-2 ಸಿನಿಮಾ ಶನಿವಾರ ಬೆಳಗ್ಗೆ 9.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನ್‌ಮೆಂಟ್ ಸಿನಿಮಾ ಇದಾಗಿದ್ದು, ಭರ್ಜರಿ ಮನರಂಜನೆ ನೀಡಲಿದೆ.

  ಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಕೃಷ್ಣ ಸುಂದರಿ' ಪ್ರಾರಂಭಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಕೃಷ್ಣ ಸುಂದರಿ' ಪ್ರಾರಂಭ

  ಮಧ್ಯಾಹ್ನ ಸೀತಾರಾಮ ಕಲ್ಯಾಣ

  ಮಧ್ಯಾಹ್ನ ಸೀತಾರಾಮ ಕಲ್ಯಾಣ

  ನಿಖಿಲ್ ಕುಮಾರ್, ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾ ಶನಿವಾರ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ. ಹರ್ಷ ನಿರ್ದೇಶನದ ಈ ಚಿತ್ರ ಕುಟುಂಬ ಸಮೇತ ನೋಡಬಹುದು.

  ರಾತ್ರಿ 'ಕುರುಕ್ಷೇತ್ರ'

  ರಾತ್ರಿ 'ಕುರುಕ್ಷೇತ್ರ'

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ನಿಖಿಲ್ ಕುಮಾರ್, ಅಂಬರೀಶ್‌ ಹೀಗೆ ಕನ್ನಡದ ಪ್ರತಿಭಾನ್ವಿತ ಕಲಾವಿದರ ಅಭಿನಯದಲ್ಲಿ ತಯಾರಾಗಿರುವ ಕುರುಕ್ಷೇತ್ರ ಸಿನಿಮಾ ಶನಿವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

  ವೀಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬರ್ತಿದೆ 'ಮಹಾಭಾರತ' ಧಾರಾವಾಹಿವೀಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬರ್ತಿದೆ 'ಮಹಾಭಾರತ' ಧಾರಾವಾಹಿ

  ಭಾನುವಾರ 'ಭಜರಂಗಿ'

  ಭಾನುವಾರ 'ಭಜರಂಗಿ'

  ಭಾನುವಾರ ಮೇ 23ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದೆ. ಭಾನುವಾರ ಬೆಳಗ್ಗೆ 9.30ಕ್ಕೆ ಭಜರಂಗಿಯನ್ನು ನೋಡಿ ಎಂಜಾಯ್ ಮಾಡಬಹುದು.

  ಮಧ್ಯಾಹ್ನ 'ಹೀರೋ'

  ಮಧ್ಯಾಹ್ನ 'ಹೀರೋ'

  ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಅಭಿನಯದಲ್ಲಿ ಇತ್ತೀಚಿಗಷ್ಟೆ ತೆರೆಕಂಡಿದ್ದ ಹೀರೋ ಸಿನಿಮಾ ಭಾನುವಾರ ಮಧ್ಯಾಹ್ನ 3 ಗಂಟೆಗೆ ಟೆಲಿಕಾಸ್ಟ್ ಆಗಲಿದೆ. ಇಡೀ ಸಿನಿಮಾ ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಚಿತ್ರೀಕರಣವಾಗಿದ್ದು ವಿಶೇಷ.

  ರಾತ್ರಿ 'ಪೈಲ್ವಾನ್' ಎಂಟ್ರಿ

  ರಾತ್ರಿ 'ಪೈಲ್ವಾನ್' ಎಂಟ್ರಿ

  ಭಾನುವಾರ ರಾತ್ರಿ 7.30ಕ್ಕೆ ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಅಭಿನಯದ ಪೈಲ್ವಾನ್ ಸಿನಿಮಾ ಮೂಡಿ ಬರಲಿದೆ. ಹೆಬ್ಬುಲಿ ಕೃಷ್ಣ ಈ ಚಿತ್ರ ನಿರ್ದೇಶಿಸಿದ್ದರು. ಹೀಗೆ, ವಾರಾಂತ್ಯದಲ್ಲಿ ಎರಡೂ ದಿನವೂ ಸ್ಟಾರ್ ನಟರ ಹಿಟ್ ಚಿತ್ರಗಳು ಜೀ ವಾಹಿನಿಯಲ್ಲಿ ನಿಮ್ಮನ್ನು ರಂಜಿಸಲು ಬರ್ತಿದೆ.

  English summary
  Darshan starrer Kurukshetra, Sudeep's Pailwaan, Nikhil kumar Seetharama kalyana, Rambo, Hero, Bhajarangi movies are telicasting in Zee Kannada this Weekend.
  Friday, May 21, 2021, 11:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X