»   » ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಪ್ರತಿಭೆಗಳು

ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಪ್ರತಿಭೆಗಳು

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಗಳಾಗಿ ಮೆರೆಯುತ್ತಿರುವ ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಒದಗಿಸಿದ್ದು ಟೆಲಿವಿಷನ್ ಇಂಡಸ್ಟ್ರೀ ಎಂಬುದನ್ನು ಮರೆಯುವಂತಿಲ್ಲ. ದಕ್ಷಿಣ ಭಾರತದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಒಂದು ನಾಟಕ ರಂಗ ಇಲ್ಲವೇ ಟೆಲಿವಿಷನ್ ರಂಗ ಸೂಕ್ತ ವೇದಿಕೆ ಒದಗಿಸುತ್ತಾ ಬಂದಿದೆ.

  ಈಗೆಲ್ಲ ರಿಯಾಲಿಟಿ ಶೋ, ಟಿವಿ ನಿರೂಪಕರಾದರೆ ಸಾಕು ತಕ್ಷಣವೇ ಸಿನಿಮಾಗೆ ಛಾನ್ಸ್ ಗಾಗಿ ಹುಡುಕಾಟ ನಡೆಸುವ ಉದಾಹರಣೆಗಳು ಕಣ್ಮುಂದೆ ಇದೆ. ಆದರೆ, ರಾತ್ರಿ ಕಳೆದು ಬೆಳಕು ಹರಿಯುವುದರಲ್ಲೇ 'ಸ್ಟಾರ್' ಆದಲು ಸಾಧ್ಯವೇ? ಆದರೂ, ಎಷ್ಟೋ ಪ್ರತಿಭೆಗಳಿಗೆ ಅಂದಿನಿಂದ ಇಂದಿನವರೆಗೂ ಕಿರುತೆರೆ ಒಳ್ಳೆ ವೇದಿಕೆ ಒದಗಿಸಿದೆ ಎಂದರೆ ತಪ್ಪಾಗಲಾರದು.

  ಆದರೆ, ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಮುಖ್ಯ. ವಜ್ರದ ಹೊಳಪು ಹೇಗೆ ಮುಚ್ಚಿಡಲು ಸಾಧ್ಯವಿಲ್ಲವೋ ಹಾಗೆ ಪ್ರತಿಭೆಗಳನ್ನು ಬಚ್ಚಿಡಲು ಸಾಧ್ಯವಿಲ್ಲ. ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಇರಬಹುದು ಪ್ರಕಾಶ್ ರೈ ಇರಬಹುದು ಎಲ್ಲರೂ ಕಿರುತೆರೆಯ ಮೂಲಕ ಪಾಠ ಕಲಿತವರೇ ಶಾರುಖ್ ಅವರು ಸರ್ಕಸ್, ಫೌಜಿ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿ ನಂತರ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದರು.

  ನಟನೆ ಅಷ್ಟೇ ಅಲ್ಲದೆ, ಹಲವಾರು ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು, ಸಾಹಿತಿಗಳಿಗೆ ಕಿರುತೆರೆ ವೇದಿಕೆ ಒದಗಿಸಿದೆ. ಹಾಗೂ ಕಿರುತೆರೆಯಿಂದ ಬೆಳ್ಳಿತೆರೆಗೆ ಅವರನ್ನು ಕರೆದೊಯ್ದಿದೆ. ಕಿರುತೆರೆಯಿಂದ ಚಿತ್ರರಂಗಕ್ಕೆ ಹೋಗಿ ಅಲ್ಲೂ ಹೆಸರೂ ಮಾಡಿದ ಕಲಾವಿದರ ಪಟ್ಟಿ ಇಲ್ಲಿ ನೋಡಿ

  ಪ್ರಕಾಶ್ ರೈ

  ಕನ್ನಡಿಗರ ಪಾಲಿಗೆ ಪ್ರಕಾಶ್ ರೈ ಆಗಿರುವ ಪ್ರಕಾಶ್ ರಾಜ್ ಸ್ಟಾರ್ ಆದ ಕಥೆ ಸಿನಿಮಾಗೆ ಅದ್ಭುತ ಕಥೆ ಒದಗಿಸಬಲ್ಲದು. ಗುಡ್ಡದ ಭೂತ, ಬಿಸಿಲು ಕುದುರೆ ಸೀರಿಯಲ್, ನಿರ್ದೇಶಕ ಬಿ.ಸುರೇಶ ಅವರ ಒಡನಾಟ, ನಾಟಕಗಳ ಗೀಳು ಎಲ್ಲವೂ ಕೆ. ಬಾಲಚಂದರ್ ಕಣ್ಣಿಗೆ ಬಿತ್ತು, ಮುಂದೆ ಮಣಿರತ್ನಂ ಸೇರಿದಂತೆ ಎಲ್ಲಾ ಯಶಸ್ವಿ ನಿರ್ದೇಶಕರ ನೆಚ್ಚಿನ ನಟನಾಗಿ ಬೆಳೆದರು. ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠ ಖಳ ನಟನಾಗಿ ಮೆಚ್ಚುಗೆ ಗಳಿಸಿರುವ ಪ್ರಕಾಶ್, ಬಾಲಿವುಡ್ ನಲ್ಲೂ ಸದ್ದು ಮಾಡುತ್ತಿದ್ದಾರೆ.

  ರಮೇಶ್ ಅರವಿಂದ್

  ದೂರದರ್ಶನ ಪರಿಚಯ ಮುಂತಾದ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದ ರಮೇಶ್ ಅರವಿಂದ್ ಅವರ ಪ್ರತಿಭೆಯನ್ನು ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಗುರುತಿಸಿ ಅವಕಾಶ ನೀಡಿದರು. ಸುಂದರ ಸ್ವಪ್ನಗಳು ಚಿತ್ರದ ನಂತರ ರಮೇಶ್ ಖ್ಯಾತಿ ಗಳಿಸಿದರು.

  ದರ್ಶನ್ ತೂಗುದೀಪ

  ಅಪ್ಪ ತೂಗುದೀಪ ಶ್ರೀನಿವಾಸ್ ಖ್ಯಾತ ಖಳ ನಟರಾಗಿದ್ದರೂ ಕೂಡಾ ಅವಕಾಶ ಇಲ್ಲದೆ ತನ್ನ ಪ್ರತಿಭೆಯನ್ನು ತೋರಿಸಲು ಕಿರುತೆರೆಗೆ ದರ್ಶನ್ ಎಂಟ್ರಿ ಕೊಟ್ಟರು. ಅಂಬಿಕಾ, ಶ್ರೀಮತಿ, ವೈಷ್ಣವಿ ಮುಂತಾದ ಸೀರಿಯಲ್ ನಂತರ ಕೆಲವು ಚಿತ್ರಗಳಲ್ಲಿ ನಟಿಸಿದರೂ ಸ್ಟಾರ್ ಎನಿಸಿದ್ದು ಮೆಜೆಸ್ಟಿಕ್ ಚಿತ್ರದ ನಂತರ ಈಗ ದರ್ಶನ್ ಅಭಿಮಾನಿಗಳ ಪಾಲಿನ ಚಾಲೆಂಜಿಗ್ ಸ್ಟಾರ್

  ಗಣೇಶ್

  ಉದಯ ಟಿವಿ ಕಾಮಿಡಿ ಟೈಂ ನಿಂದ ಜನಪ್ರಿಯತೆ ಗಳಿಸಿದ್ದ ಗಣೇಶ್ ಅವರು ಪಾಪ ಪಾಂಡು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಲ್ಲದೆ ನಿರ್ದೇಶಕ ಬಿ. ಸುರೇಶ ಅವರಿಗೆ ಸಹಾಯಕರಾಗಿ ದುಡಿದಿದ್ದರು. ಮುಂಗಾರು ಮಳೆ ಚಿತ್ರ ಮೂಲಕ ಸ್ಟಾರ್ ಗಿರಿ ಪಡೆದರು.

  ಯಶ್

  ನಂದಗೋಕುಲ, ಉತ್ತರಾಯಣ, ಪ್ರೀತಿ ಇಲ್ಲದ ಮೇಲೆ ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದ ಯಶ್ ಈಗ ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎನಿಸಿದ್ದಾರೆ.

  ರಾಧಿಕಾ ಪಂಡಿತ್

  ಅಶೋಕ್ ಕಶ್ಯಪ್ ಅವರ 'ನಂದಗೋಕುಲ', ಸುಮಂಗಲಿ ಮುಂತಾದ ಸಿರೀಯಲ್ ಗಳಲ್ಲಿ ಕಾಣಿಸಿಕೊಂಡ ರಾಧಿಕಾ ಪಂಡಿತ್ ಅವರು ಇಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ. ಮೂರು ಫಿಲಂಫೇರ್ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದ್ದಾರೆ.

  ದುನಿಯಾ ವಿಜಯ್

  ದುನಿಯಾ ವಿಜಯ್ ಅವರು ಪಾಪ ಪಾಂಡು ಸೇರಿದಂತೆ ಹಲವಾರು ಸಿರೀಯಲ್ ಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ದುನಿಯಾ ವಿಜಯ್, ಚಿತ್ರರಂಗದಲ್ಲಿ ಫೈಟರ್ ಆಗಿ ಖಳ ನಟನಾಗಿ ಕಾಣಿಸಿಕೊಂಡು ನಂತರ ಪೂರ್ಣ ಪ್ರಮಾಣದ ಹೀರೋ ಆದವರು.

  ಮೇಘನಾ ಗಾಂವ್ ಕರ್

  ಕುಣಿಯೋಣಾ ಬಾರಾ, ಡಿಶುಂ ಡಿಶುಂ, ಪ್ರೀತಿಯ ಕನ್ನಡಿಗ ಮುಂತಾದ ಕಾರ್ಯಕ್ರಮಗಳ ನಿರೂಪಕಿಯಾಗಿದ್ದ ಮೇಘನಾ ಗಾಂವ್ ಕರ್ ಅವರು ಚಾರ್ಮಿನಾರ್ ಚಿತ್ರದ ಮೂಲಕ ಮನೆ ಮಾತಾಗಿದ್ದಾರೆ.

  ಹರ್ಷಿಕಾ ಪೂಣಚ್ಚ

  ನಿಮ್ಮಿಂದ ನಿಮಗಾಗಿ, ಹೃದಯದಿಂದ ಹಾಗೂ ಸರಿಗಮಪ ಮುಂತಾದ ಟಿವಿ ಕಾರ್ಯಕ್ರಮದ ನಿರೂಪಕಿಯಾಗಿದ್ದ ಹರ್ಷಿಕಾ ಪೂಣಚ್ಚ ಅವರು ಪಿಯೂಸಿ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಈಗ ಕನ್ನಡ ಚಿತ್ರರಂಗದ ಭರವಸೆಯ ಕಲಾವಿದೆ ಎನಿಸಿದ್ದಾರೆ.

  ಪಾರ್ವತಿ ಮೆನನ್

  ಮಲೆಯಾಳಿ ಹುಡುಗಿ ಪಾರ್ವತಿ ಮೆನನ್ ಅವರು ಸಂಗೀತ ಆಧಾರಿತ ಕಿರಣ್ ಟಿವಿಯಲ್ಲಿ ಯಶಸ್ವಿ ನಿರೂಪಕಿಯಾಗಿದ್ದವರ. ಫೋನ್ ಇನ್ ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಪಾರ್ವತಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಮಿಲನ ಚಿತ್ರದ ಮೂಲಕ, ನಂತರ ಪೃಥ್ವಿ, ಅಂದರ್ ಬಾಹರ್, ಮಳೆ ಇರಲಿ ಮಂಜೂ ಬರಲಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ನಂದಿತಾ ಶ್ವೇತಾ

  ಸನ್ ನೆಟ್ವರ್ಕ್ ನ ಉದಯ, ಯೂ2 ವಾಹಿನಿಗಳಲ್ಲಿ ನಿರೂಪಕಿಯಾಗಿದ್ದ ನಂದಿತಾ ಶ್ವೇತಾ ಅವರು ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ನಾಯಕಿಯಾಗಿ ಜಿಂಕೆ ಮರೀನಾ ಹಾಡಿನಲ್ಲಿ ಕುಣಿದ ಮೇಲೆ ತಮಿಳು ಚಿತ್ರರಂಗಕ್ಕೆ ಲಗ್ಗೆ ಇಟ್ಟರು.

  ಧನುಷ್ ಬ್ಯಾನರ್ ನಲ್ಲಿ ಬಂದ ಎಧಿರ್ ನೀಚಲ್ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಉತ್ತಮ ಅಭಿನಯ ನೀಡಿದ ಶ್ವೇತಾ ನಂತರ ಅಟ್ಟಕಥಿ, ಕುಕ್ಕೂ, ನಲಾಯುಂ ನಂದಿನಿಯುಂ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಯೋಗರಾಜ್ ಭಟ್

  ಬಿ.ಸುರೇಶ ಅವರ 'ಸಾಧನೆ' ಮುಂತಾದ ಸಿರಿಯಲ್ ಗಳಲ್ಲಿ ಸಂಭಾಷಣೆ ಬರೆದುಕೊಂಡಿದ್ದ ಯೋಗರಾಜ್ ಭಟ್ಟರು ಈಗ ಕನ್ನಡದ ಅಗ್ರಗಣ್ಯ ನಿರ್ದೇಶಕ ಕಮ್ ಸಾಹಿತಿ, ಈಗ ಬಾಲಿವುಡ್ ಗೂ ಲಗ್ಗೆ ಇಟ್ಟಿರುವ ದೈತ್ಯ ಪ್ರತಿಭೆ

  ಶ್ರೀನಗರ ಕಿಟ್ಟಿ

  ಚಿಕ್ಕಂದಿನಲ್ಲಿ ಮಲೆನಾಡಿನ ಚಿತ್ರಗಳು, ದೊಡ್ಡಮನೆ, ಕಂದನ ಕಾವ್ಯ ಟೆಲಿ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಮೇಲೆ ಚಂದ್ರಿಕಾ, ಪ್ರೀತಿಗಾಗಿ, ಆನಂದ ಸಾಗರ, ಮನೆ ಮನೆ ಕಥೆ, ಭೂಮಿ ಹಾಗೂ ಎಸ್ ನಾರಾಯಣ್ ಅವರ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದ ಶ್ರೀನಗರ ಕಿಟ್ಟಿ ಅವರು ಬೆಳ್ಳಿತೆರೆಯಲ್ಲಿ ಖಳನಟನಾಗಿ ಪ್ರವೇಶ ಪಡೆದರು. ಈಗ ಪೂರ್ಣ ಪ್ರಮಾಣದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ.

  ಕಿಚ್ಚ ಸುದೀಪ್

  ಉದಯ ಟಿವಿಯಲ್ಲಿ ಪ್ರಸಾರ ಕಂಡ ಸುಧಾಕರ್ ಭಂಡಾರಿ ನಿರ್ದೇಶನದ ಪ್ರೇಮದ ಕಾದಂಬರಿ ಸೀರಿಯಲ್ ನಲ್ಲಿ ಮೊದಲಿಗೆ ಸುದೀಪ್ ಕಾಣಿಸಿಕೊಂಡರು. ನಂತರ ತಾಯವ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ. ಪ್ರತ್ಯರ್ಥದಲ್ಲಿ ಸಹನಟನಾಗಿದ್ದವರು ಸ್ಪರ್ಶ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದರು.

  ಇಂದು ನಟ, ನಿರ್ದೇಶಕರಾಗಿ ಯಶಸ್ವಿಯಾಗಿದ್ದು, ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಹಿಂದಿ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

  English summary
  Television industry might be considered a smaller industry compared to films, but it has proved time and again that it has a wider-reach. Not to forget, small screen gives popularity to talents in a very short time and makes an actor, a star overnight.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more