»   » ದೇವೇಗೌಡರ ಗೂಡು ಸೇರಿದ ಟಿವಿ ನಟ ರವಿಕಿರಣ್

ದೇವೇಗೌಡರ ಗೂಡು ಸೇರಿದ ಟಿವಿ ನಟ ರವಿಕಿರಣ್

Posted By:
Subscribe to Filmibeat Kannada
TV artist Ravikiran
ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷಕ್ಕೆ ಹೊಸ ನೀರು ಸೇರ್ಪಡೆಯಾಗುತ್ತಿದೆ. ಅದರಲ್ಲೂ ಸಿನೆಮಾ ತಾರೆಗಳು ಒಬ್ಬೊಬ್ಬರಾಗಿ ತೆನೆಹೊತ್ತ ಮಹಿಳೆಯ ಕೈಹಿಡಿಯುತ್ತಿದ್ದಾರೆ. ಪೂಜಾಗಾಂಧಿ, ಮಾಳವಿಕಾ, ಎಸ್. ನಾರಾಯಣ್ ಜೆಡಿಎಸ್ ಗೆ ಧುಮಿಕಿದ್ದಾಯಿತು. ಈಗ ಕಿರುತೆರೆ ಕಲಾವಿದ ರವಿಕಿರಣ್ ಅವರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಗೂಡು ಸೇರಿದ್ದಾರೆ.

ಆದರೆ ಅವರು ಜೆಡಿಎಸ್ ಪಕ್ಷಕ್ಕೆ ಇನ್ನೂ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಅವರು ದೇವೇಗೌಡರನ್ನು ಔಪಚಾರಿಕವಾಗಿ ಮಾತನಾಡಿಸಿಕೊಂಡು ಅವರ ಆಶೀರ್ವಾದ ಪಡೆದಿದ್ದಾರೆ ಅಷ್ಟೇ. ಇನ್ನೇನು ಆರು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಅವರ ಇಂದಿನ ಭೇಟಿ ರಾಜಕೀಯ ಸೇರ್ಪಡೆಗೆ ಸೂಚನೆಯೇ?

ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೋ ಅಥವಾ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿ ತಮ್ಮ ಕೈಲಾದ ಸಹಾಯ ಮಾಡುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ದಿಢೀರ್ ಭೇಟಿ ಕಿರುತೆರೆ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಅವರು ಕಿರುತೆರೆ ಕ್ಷೇತ್ರಕ್ಕೆ ತಮ್ಮದೇ ಆದಂತಹ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮೂಲಕ ಜೆಡಿಎಸ್ ಗೆ ಅವರ ಅಳಿಲು ಸೇವೆ ಸಿಗುತ್ತಾ? ಕಾದುನೋಡೋಣ.

ರವಿಕಿರಣ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಹಳೆಯ ಗೆಳೆಯ. ತೆಲುಗಿನ ಖ್ಯಾತ ನಟ ಎಸ್ ವಿ ರಂಗಾರಾವ್ ಅವರ ಮೊಮ್ಮಗ. ಕಿರುತೆರೆಯ ರವಿಚಂದ್ರನ್ ಎಂದೇ ಖ್ಯಾತರಾದವರು. ಕಿರುತೆರೆಯ ಕನಸುಗಾರ ಎಂದರೂ ತಪ್ಪಿಲ್ಲ. (ಒನ್ಇಂಡಿಯಾ ಕನ್ನಡ)

English summary
Kannada small screen dream merchant Ravikiran recently met JD(s) supremo HD Deve Gowda. Is he too joining Politics? Earlier Pooja Gandhi, Malavika, S Narayan have joined the JDs brigade
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada