»   » ಕನ್ನಡದ ಕೋಟ್ಯಾಧಿಪತಿ ಸೀಸನ್ -2 ನೋಂದಣಿ ಆರಂಭ

ಕನ್ನಡದ ಕೋಟ್ಯಾಧಿಪತಿ ಸೀಸನ್ -2 ನೋಂದಣಿ ಆರಂಭ

Posted By:
Subscribe to Filmibeat Kannada
 Registration open for season two of Kannadada Kotyadhipathi
ಕಿರುತೆರೆಯಲ್ಲಿ ಅಭೂತಪೂರ್ವ ಯಶಸ್ಸುಗಳಿಸಿದ್ದ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ದ್ವಿತೀಯ ಸರಣಿಯ ಆರಂಭವನ್ನು ಸ್ಟಾರ್ ನೆಟ್ ವರ್ಕ್ ಸುವರ್ಣ ವಾಹಿನಿಯು ಘೊಷಿಸಿದೆ.

ಕಾರ್ಯಕ್ರಮದ ಮೊದಲ ಸರಣಿಯನ್ನು ನಿರೂಪಿಸಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದ್ವಿತೀಯ ಸರಣಿಯನ್ನೂ ನಿರೂಪಿಸಲಿದ್ದಾರೆ.

ಕಾರ್ಯಕ್ರಮದ ಮೊದಲ ಸರಣಿಯಲ್ಲಿದ್ದ ರೂಪು ರೇಷೆಗಳು ಈ ಸರಣಿಗೂ ಅನ್ವಯಿಸುತ್ತದೆ ಮತ್ತು ಒಂದು ಕೋಟಿ ರೂಪಾಯಿಯನ್ನು ಪ್ರಶಸ್ತಿಯಾಗಿ ವಾಹಿನಿ ನೀಡುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಮಾಡಬೇಕಾಗಿರುವುದು ಇಷ್ಟೇ. ಇದೇ ಡಿಸೆಂಬರ್ 15 ರಿಂದ (ಶನಿವಾರ) ಸುವರ್ಣ ವಾಹಿನಿಯಲ್ಲಿ ನೊಂದಣಿ ಪ್ರಾರಂಭವಾಗಲಿದೆ, ಸಂಜೆ 7 ಗಂಟೆಗೆ ಕಾರ್ಯಕ್ರಮದ ನಿರೂಪಕ ಪುನೀತ್ ರಾಜಕುಮಾರ್ ಕೇಳುವ ಪ್ರಶ್ನೆಗೆ ಸೂಕ್ತ ಉತ್ತರ ನೀಡಿ ತಮ್ಮ ಪ್ರವೇಶ ನೊಂದಾಯಿಸಿಕೊಳ್ಳಬಹುದು.

ಕರ್ನಾಟಕದ ಬೃಹತ್ ರಿಯಾಲಿಟಿ ಶೋವನ್ನು ಪುನಃ ಪ್ರಾರಂಭಿಸುತ್ತಿರುವುದಕ್ಕೆ ನಮಗೆ ಸಂತಸವಾಗಿದೆ. ಪ್ರಥಮ ಸರಣಿಯಲ್ಲಿ ನಮಗೆ ಅತ್ಯದ್ಭುತ ಪ್ರತಿಕ್ರಿಯೆ ದೊರೆತಿದ್ದು ದ್ವಿತೀಯ ಸರಣಿಯನ್ನು ಮತ್ತಷ್ಟು ಉತ್ತಮವಾಗಿಸಲು ಸಾಕಷ್ಟು ಯೋಜನೆಗಳನ್ನು ನಿರೂಪಿಸಿದ್ದೇವೆ.

ಪುನೀತ್ ಮತ್ತು ಬಿಗ್ ಸಿನರ್ಜಿ ಪ್ರೊಡಕ್ಷನ್ಸ್ ಟೀಮ್ ಜೊತೆಗೆ ಕೆಲಸ ಮಾಡುವುದು ಒಂದು ಅತ್ಯತ್ತಮ ಅನುಭವ ಎಂದು ಸುವರ್ಣ ವಾಹಿನಿಯ ಬ್ಯೂಸಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳಿದ್ದಾರೆ.

ಕನ್ನಡದ ಕೋಟ್ಯಾಧಿಪತಿ ಸೀಸನ್ -2 ಕಾರ್ಯಕ್ರಮ ಇನ್ನೆರಡು ತಿಂಗಳೊಳಗೆ ಆರಂಭವಾಗುವ ಸಾಧ್ಯತೆಯಿದೆ.

English summary
Registration lines to participate in Kannadada Kotyadhipathi will open from 15th December, 2012 at 7PM in Star Network's Kannada Entertainment Channel Suvarna.
Please Wait while comments are loading...