For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 23ರಿಂದ ಹೊಸ ಟಾಕ್ ಶೋ, ತೀರ್ಪುಗಾರರು ಸೂಪರ್

  |

  ವಾರ ಪೂರ್ತಿ ಧಾರಾವಾಹಿಗಳದ್ದೇ ಅಬ್ಬರ. ವಾರಾಂತ್ಯಕ್ಕೆ ರಿಯಾಲಿಟಿ ಶೋಗಳದ್ದೇ ಕಾರುಬಾರು. ಹೊಸ ಹೊಸ ಧಾರಾವಾಹಿಗಳು ಬರ್ತಾ ಇರುತ್ತೆ. ಅದೇ ರೀತಿ ಹೊಸ ಹೊಸ ರಿಯಾಲಿಟಿ ಶೋಗಳು ಆರಂಭವಾಗ್ತಿರುತ್ತೆ.

  ಸರಿಗಮಪ, ಕನ್ನಡ ಕೋಗಿಲೆ ಅಂತಹ ಸಿಂಗಿಂಗ್ ಶೋ ಹಾಗೂ ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗಳಿಸಿಕೊಂಡಿರುವ ಜೀ ಕನ್ನಡ ವಾಹಿನಿ ಮತ್ತೊಂದು ಹೊಸ ಶೋ ಪರಿಚಯ ಮಾಡ್ತಿದೆ.

  ಇದು ಕನ್ನಡ ಭಾಷಾಭಿಮಾನ ಹೆಚ್ಚಿಸುವಂತಹ ಕಾರ್ಯಕ್ರಮವಾಗಿದ್ದು, ಇದರಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳು ಮಕ್ಕಳೇ ಎನ್ನುವುದು ವಿಶೇಷ. ಈ ಶೋಗೆ ಮೂರು ತೀರ್ಪುಗಾರರಿದ್ದು, ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ ನಿರೂಪಕರಾಗಿದ್ದಾರೆ. ಅಷ್ಟಕ್ಕೂ, ಆ ಶೋ ಯಾವುದು, ಯಾವಾಗ ಆರಂಭ? ಮುಂದೆ ಓದಿ.....

  ಫೆಬ್ರವರಿ 23ರಿಂದ ಕನ್ನಡದ ಕಣ್ಮಣಿ

  ಫೆಬ್ರವರಿ 23ರಿಂದ ಕನ್ನಡದ ಕಣ್ಮಣಿ

  ಇದು ಕನ್ನಡದ ಧ್ವನಿ, ನಮ್ಮ ಭಾಷಾಭಿಮಾನದ ಧ್ವನಿ! ಕನ್ನಡ ಕೀರ್ತಿ ಮೊಳಗಿಸೋ ಕಣ್ಮಣಿಗಳ ಪಾಂಚಜನ್ಯದ ಧ್ವನಿ! ಹೌದು, 'ಕನ್ನಡದ ಕಣ್ಮಣಿ' ಎಂಬ ಹೊಸ ರಿಯಾಲಿಟಿ ಶೋ ಫೆಬ್ರವರಿ 23ರಿಂದ ಆರಂಭವಾಗ್ತಿದ್ದು, ಶನಿವಾರ ಸಂಜೆ 5 ಗಂಟೆಗೆ ಚಾಲನೆ ದೊರೆಯಲಿದೆ.

  ತ್ರಿಮೂರ್ತಿಗಳು ತೀರ್ಪುಗಾರರು

  ತ್ರಿಮೂರ್ತಿಗಳು ತೀರ್ಪುಗಾರರು

  'ಕನ್ನಡದ ಕಣ್ಮಣಿ' ಟಾಕ್ ಶೋ ಆಗಿದ್ದು, ಅದಕ್ಕೆ ತಕ್ಕಂತೆ ತೀರ್ಪುಗಾರರನ್ನ ಆಯ್ಕೆ ಮಾಡಿ ಕರೆತರಲಾಗಿದೆ. ಮಾತಿನ ಮಲ್ಲ, ಹಾಸ್ಯದ ಚತುರ ಪ್ರಾಣೇಶ್ ಈ ಶೋಗೆ ಜಡ್ಜ್ ಆಗಿದ್ದಾರೆ. ಇವರ ಜೊತೆ ನವರಸ ನಾಯಕ ಜಗ್ಗೇಶ್ ಕೂಡ ಇದ್ದಾರೆ. ಇನ್ನು ಭಾಷಾಭಿಮಾನದ ಧ್ವನಿ ಅಂದ್ಮೇಲೆ ಅದಕ್ಕೊಬ್ಬರು ಸಾರಥಿ ಬೇಕು ಎಂದು ಖ್ಯಾತ ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಇರಲಿದ್ದಾರೆ.

  ಕಿರಿಕ್ ಕೀರ್ತಿ ಶೋ

  ಕಿರಿಕ್ ಕೀರ್ತಿ ಶೋ

  ಮಾತು....ಮಾತು....ಮಾತು....ಈ ಶೋನ ಮುಖ್ಯ ಅಂಶವೇ ಮಾತು. ಹಾಗಾಗಿ, ಫಟಾಫಟ್ ಅಂತ ಮಾತಾಡ್ಕೊಂಡು ಶೋ ಮಾಡೋಕೆ ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಕೂಡ ಈ ಶೋನಲ್ಲಿ ಇರಲಿದ್ದು, ನಿರೂಪಕರಾಗಿ ಕೆಲಸ ಮಾಡಲಿದ್ದಾರೆ.

  ವೀಕೆಂಡ್ ನಲ್ಲಿ ಫುಲ್ ಮಜಾ

  ವೀಕೆಂಡ್ ನಲ್ಲಿ ಫುಲ್ ಮಜಾ

  ಮುಂದಿನ ವಾರದಿಂದ ಜೀ ಕನ್ನಡದಲ್ಲಿ ಮನರಂಜನೆಯ ಮಜಾ ಹೆಚ್ಚಾಗುತ್ತಿದೆ. ಐದು ಗಂಟೆಯಿಂದಲೇ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಮೂಲಕ 'ಡ್ರಾಮಾ ಜೂನಿಯರ್ಸ್' ಮತ್ತು 'ಕನ್ನಡದ ಕಣ್ಮಣಿ' ಎರಡು ಮಕ್ಕಳ ಶೋ ನೋಡಬಹುದು.

  English summary
  Zee kannada entertainment channel launching a Kannadadha Kanmani children reality show on february 25th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X