ವೀಲ್‌ಚೇರ್‌ನಲ್ಲಿ ಬಂದ ಕಪಿಲ್ ಶರ್ಮಾ: ಕಾಮಿಡಿಯನ್‌ಗೆ ಏನಾಯ್ತು?

ಟಿವಿ ನಿರೂಪಕ ಹಾಗೂ ಹಾಸ್ಯ ಕಲಾವಿದ ಕಪಿಲ್ ಶರ್ಮಾ ವೀಲ್‌ಚೇರ್‌ನಲ್ಲಿ ಕುಳಿತು ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ವೀಲ್‌ಚೇರ್‌ನಲ್ಲಿ ಕಪಿಲ್ ಶರ್ಮಾ ಅವರನ್ನು ನೋಡಿದ ನೆಟ್ಟಿಗರು ಅರೇ ಕಾಮಿಡಿಯನ್‌ಗೆ ಏನಾಯ್ತು? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಪಿಲ್ ಶರ್ಮಾಗೆ ಏನಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮುಂಬೈ ಏರ್‌ಪೋರ್ಟ್‌ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಪಿಲ್ ಶರ್ಮಾ ವೀಲ್‌ಚೇರ್‌ನಲ್ಲಿ ಸಾಗಿದ್ದು ಕಂಡು ಬಂತು.

ವೀಲ್‌ಚೇರ್‌ನಲ್ಲಿ ಕಪಿಲ್ ಶರ್ಮಾ ಅವರನ್ನು ನೋಡಿದ ಛಾಯಾಗ್ರಾಹಕರು ''ಸರ್ ಏನಾಯ್ತು, ಏನಾಯ್ತು'' ಎಂದು ಕೇಳುತ್ತಲೇ ಹಿಂದೆ ಸಾಗಿದರು. ಹಿಂದೆಯೇ ಬಂದ ಕ್ಯಾಮೆರಾಮ್ಯಾನ್‌ಗಳನ್ನು ಕಪಿಲ್ ಅವಾಚ್ಯ ಶಬ್ದದಿಂದ ನಿಂದಿಸಿದರು.

kapil-sharma-on-wheelchair-spotted-at-airport-today

ಮತ್ತೊಂದೆಡೆ ಕಪಿಲ್ ಶರ್ಮಾ ಅವರ ಏರ್‌ಪೋರ್ಟ್ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿ ಅಚ್ಚರಿಯಾದ ನೆಟ್ಟಿಗರು ಕಪಿಲ್ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ.

ಬೇಗ ಗುಣಮುಖರಾಗಿ,,,,ನಿಮ್ಮ ಆರೋಗ್ಯ ನೋಡಿಕೊಳ್ಳು,,, ಎಂದು ಹಾರೈಸುತ್ತಿದ್ದಾರೆ.

ಅಂದ್ಹಾಗೆ, ಕಪಿಲ್ ಶರ್ಮಾ ಮತ್ತು ಪತ್ನಿ ಗಿನ್ನಿ ಇತ್ತೀಚಿಗಷ್ಟೆ (ಫೆಬ್ರವರಿ 1) ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಕಪಿಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಅದಕ್ಕೂ ಮುಂಚೆ ಕಪಿಲ್ ಶರ್ಮಾ ಕಾರ್ಯಕ್ರಮ ನಿಲ್ಲಿಸಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿತ್ತು. ಕೊರೊನಾ ವೈರಸ್ ಕಾಟ, ಸಿನಿಮಾಗಳು ರಿಲೀಸ್ ಇಲ್ಲದೇ ಪ್ರಚಾರವೂ ಇಲ್ಲ ಎಂಬ ಕಾರಣಕ್ಕೆ ಶೋ ರದ್ದುಗೊಳಿಸಲು ತೀರ್ಮಾನಿಸಲಾಗಿತ್ತು.

More from Filmibeat

English summary
Famous tv host Kapil Sharma on wheelchair spotted at airport today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X