»   » ಕಸ್ತೂರಿ ವಾಹಿನಿಯಲ್ಲಿ ವಿನೂತನ ಕಾರ್ಯಕ್ರಮ

ಕಸ್ತೂರಿ ವಾಹಿನಿಯಲ್ಲಿ ವಿನೂತನ ಕಾರ್ಯಕ್ರಮ

Posted By:
Subscribe to Filmibeat Kannada
Kasthuri channel
ಕಸ್ತೂರಿ ವಾಹಿನಿ ಹೊಸ ಹೊಸ ಕಾರ್ಯಕ್ರಮಗಳಿಗೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದೆ. ಈಗಾಗಲೆ ವಾಹಿನಿ ನಾಲ್ಕು ಹೊಸ ಧಾರಾವಾಹಿಗಳನ್ನು ಆರಂಭಿಸುವ ಮೂಲಕ ತನ್ನ ವೀಕ್ಷಕರ ಬಳಗಕ್ಕೆ ಭರ್ಜರಿ ಕೊಡುಗೆಯನ್ನೇ ನೀಡಿತ್ತು.

ಈಗ ಮತ್ತೊಂದು ವಿನೂತನ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಮುಂದಾಗಿದೆ. ಈ ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳ ಸಂಕಷ್ಟಗಳಿಗೆ ಸಾಂತ್ವನ ನೀಡಲಿದೆ. ಕಾರ್ಯಕ್ರಮದ ಹೆಸರು 'ಮೌನ ಮಾತಾದಾಗ'. ಇದೇ ಜನವರಿ 28ರಿಂದ ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 10 ರಿಂದ 11 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

ತಮ್ಮದಲ್ಲದ ತಪ್ಪಿಗೆ ಹಲವಾರು ಹೆಣ್ಣುಮಕ್ಕಳು ನಿರಂತರ ಕಣ್ಣೀರು ಹಾಕುತ್ತಿರುತ್ತಾರೆ. ತಮ್ಮ ಸಮಸ್ಯೆಗಳನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಕೊರಗುತ್ತಿರುವ ಇಂಥಹವರ ಮನದಾಳದ ಮಾತುಗಳಿಗೆ ಮೌನ ಮಾತಾದಾಗ ಕಾರ್ಯಕ್ರಮ ವೇದಿಕೆಯಾಗಲಿದೆ.

ದೃಶ್ಯರೂಪದೊಂದಿಗೆ ನಿರೂಪಿಸಲಾಗುವ ಈ ಕಾರ್ಯಕ್ರಮದಲ್ಲಿ ನೊಂದವರ ಹೆಸರು, ವಿಳಾಸಗಳನ್ನು ಬಹಿರಂಗಪಡಿಸದೆ ಗೌಪ್ಯವಾಗಿ ಇಡಲಾಗುತ್ತದೆ. ಈ ಮೂಲಕ ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುವ ಪುಟ್ಟ ಪ್ರಯತ್ನ ನಮ್ಮದು ಎನ್ನುತ್ತಾರೆ ಕಸ್ತೂರಿ ವಾಹಿನಿಯ ಕ್ರಿಯೇಟಿವ್ ಹೆಡ್ ರಾಜೇಶ್. (ಒನ್ಇಂಡಿಯಾ ಕನ್ನಡ)

English summary
Mouna Maataadaaga, a special show by Kasthuri Channel brings stories of people who have faced dire situations and have won the battle; stories of broken hearts and homes; stories of families that need solace. The show will be telecast from Monday to Friday between 10 pm and 11 pm from 28th January, 2013.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada