ಕೆಬಿಸಿ ಶೋಗೆ ಸಿದ್ಧವಾಗಿರುವ ಬಿಗ್ ಬಿ ಹೇಳಿದ್ದೇನು?
ಈ ಸಂಬಂಧ ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತಾಬ್ "ನಮ್ಮ ಭಾರತದಲ್ಲಿ ಈಗಲೂ ಸಾಕಷ್ಟು ಮಂದಿ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಇದು ಸರ್ಕಾರಕ್ಕೂ ಗೊತ್ತಿರುವ ವಿಷಯವೇ. ಆದರೆ ಇಂಥ ವಿದ್ಯಾವಂತರು, ನಿರುದ್ಯೋಗಿಗಳು ನಾವು ಮಾಡುತ್ತಿರುವ ಈ ಕೆಬಿಸಿಯಲ್ಲಿ ಭಾಗವಹಿಸಬೇಕು. ಒಮ್ಮೆ ಅವರು ಸೆಲೆಕ್ಟ್ ಆದರೆ, ನಂತರ ಅವರು ತಮ್ಮ ಪ್ರತಿಭೆ ಹಾಗೂ ಅದೃಷ್ಟದ ಬಲದಿಂದ ಇಲ್ಲಿ ಹಣ ಗಳಿಸಬಹುದು.
ಮುಂದುವರಿದ ಅಮಿತಾಬ್, ನಿರುದ್ಯೋಗ ಮುಂತಾದ ಸಮಸ್ಯೆಗಳಿಗೆ ಕೇವಲ ಸರ್ಕಾರದ ಕಡೆಯಿಂದ ಮಾತ್ರ ಸಹಾಯ, ಪರಿಹಾರ ಅಪೇಕ್ಷಿಸಲಾಗದು. ಅದಕ್ಕೆ ಭಾರತದಲ್ಲಿರುವ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳೂ ಕೈಜೋಡಿಸಬೇಕು. ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಕೆಬಿಸಿ ಯಿಂದಲೇ ಪರಿಹಾರ ಸಿಗಬೇಕು ಎಂದು ನಿರೀಕ್ಷಿಸುವುದು ತಪ್ಪು. ಸರ್ಕಾರ ಹಾಗೂ ಕಾರ್ಪೋರೇಟ್ ಈ ಕೆಲಸ ಮಾಡುತ್ತಿವೆ, ಅದಿನ್ನೂ ಹೆಚ್ಚಾಗಿ ಮುಂದುವರಿಯಬೇಕಿದೆ ಎಂದಿದ್ದಾರೆ.
"ನನ್ನ ಮುಂದೆ ಸ್ಪರ್ಧಿ ಕುಳಿತಿರುವಾಗ ನಾನು ಅವರ ವೈಯಕ್ತಿಕ ಜೀವನದ ಹೋರಾಟದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುತ್ತೇನೆ. ನನಗೆ ಅವರ ಚಿಂತಾಕ್ರಾಂರ ಹಾಗೂ ಹೋರಾಟದ ಬದುಕಿನ ಕಥೆ ಕೇಳಿ ಸಾಕಷ್ಟು ತಳಮಳವಾಗುತ್ತದೆ. ಆದರೂ ಅದನ್ನು ಕ್ಯಾಮರಾ ಮುಂದೆ ತೋರಗೊಡದೇ ಹೃದಯದಲ್ಲೇ ಬಚ್ಚಿಟ್ಟುಕೊಳ್ಳುತ್ತೇನೆ. ಮೊಬೈಲ್ ಫೋನ್ ಕಾಣದ ಊರುಗಳಿಂದಲೂ ಜನರು ಈ ಶೋದಲ್ಲಿ ಭಾಗವಹಿಸಲು ಬರುತ್ತಾರೆಂಬ ಸಂಗತಿ ಸುಲಭವಾಗಿ ನಂಬಲಾಗದ ಸತ್ಯ" ಎಂದಿದ್ದಾರೆ ಬಿಗ್ ಬಿ. (ಏಜೆನ್ಸೀಸ್)


Click it and Unblock the Notifications












