For Quick Alerts
  ALLOW NOTIFICATIONS  
  For Daily Alerts

  ಹೊಸ ಮನೆ ಖರೀದಿಸಿದ ಚಂದನ್, ಕವಿತಾ!

  |

  ಸ್ಯಾಂಡಲ್‌ವುಡ್‌ನಲ್ಲಿ ರಿಯಲ್ ಕಪಲ್ ಅಂತಾನೇ ಫೇಮಸ್ ಕವಿತಾ ಗೌಡ ಮತ್ತು ಚಂದನ್ ಕುಮಾರ್. ಕವಿತಾ ಮಂತು ಚಂದನ್ ಇಬ್ಬರೂ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಬಂದವರು. ಇಬ್ಬರು ಪ್ರೀತಿಸಿ ಈಗ ಮದುವೆ ಆಗಿದ್ದಾರೆ. ಈ ಮುದ್ದು ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

  ಇತ್ತೀಚೆಗಷ್ಟೇ ಚಂದನ್ ಮತ್ತು ಕವಿತಾ ಧಾಮ್ ಧುಮ್ ಅಂತ ಮದುವೆ ಆಗಿದ್ಧರು. ಇವರಿಬ್ಬರ ಪ್ರೇಮ ಪ್ರಕರಣ ಮದುವೆಗೂ ಚಿತ್ರರಂಗದಲ್ಲಿ ಜೋರಾಗಿ ಹಬ್ಬಿತ್ತು. ಮದುವೆ ಮೂಲಕ ಈ ಜೋಡಿ ಆ ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದಿತ್ತು. ಇಬ್ಬರೂ ಸದಾ ತಮ್ಮ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಹತ್ತಿರವಾಗುತ್ತಿರುತ್ತಾರೆ.

  ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು ಪ್ಲಾನ್ ಸಕ್ಸಸ್: ಈಗೇನ್ ಮಾಡ್ತಾನೋ ಆರ್ಯವರ್ಧನ್?ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು ಪ್ಲಾನ್ ಸಕ್ಸಸ್: ಈಗೇನ್ ಮಾಡ್ತಾನೋ ಆರ್ಯವರ್ಧನ್?

  ಇದೀಗ ಈ ಜೋಡಿ ಹೊಸ ಸುದ್ದಿ ಒಂದನ್ನು ಹಂಚಿಕೊಂಡಿದೆ. ಹೊಸ ಮನೆಯನ್ನು ಖರೀದಿಸಿದ ಸಂತಸದಲ್ಲಿ ಇದೆ ಈ ಜೋಡಿ. ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಹೊಸ ಮನೆಯನ್ನು ಖರೀಸಿದ್ದಾರೆ. ಕಳೆದ ವರ್ಷ ಮದುವೆ ಆಗಿದ್ದ ಈ ಜೋಡಿ ಈಗ ಹೊಸ ಮನೆಗೆ ಹೆಜ್ಜೆ ಇಟ್ಟಿದೆ. ಈ ವಿಚಾರವನ್ನು ಫೋಟೊ ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದಾರೆ.

  ಹೊಸ ಮನೆಯ ಗೃಹಪ್ರವೇಶ ಕೂಡ ಮಾಡಿದ್ದಾರೆ. ಗೃಹ ಪ್ರವೇಶ ಸಂಭ್ರಮದ ಫೋಟೊಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಜೂ.18ರಂದು ಕವಿತಾ ಮತ್ತು ಚಂದನ್ ಗೃಹಪ್ರವೇಶ ಮಾಡಿದ್ದಾರೆ. ಇದೇ ಖುಷಿಯಲ್ಲಿ ಹೊಸ ಮನೆಯ, ಹೊಸ ಬದುಕಿನ ಹೊಸ್ತಿಲಲ್ಲಿ ಎಂದು ಅಡಿಬರಹ ನೀಡಿ ವಿಶೇಷ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ನೆಚ್ಚಿನ ಜೋಡಿಯ ಸಂತಸ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸುತ್ತಿದ್ದಾರೆ.

  ಹಿಟ್ಲರ್ ಕಲ್ಯಾಣ: ಏಜೆ ಪಾಲಿನ ವಿಲನ್ ಆಗುತ್ತಾನಾ ಕೃಷ್ಣ?ಹಿಟ್ಲರ್ ಕಲ್ಯಾಣ: ಏಜೆ ಪಾಲಿನ ವಿಲನ್ ಆಗುತ್ತಾನಾ ಕೃಷ್ಣ?

  ಈ ಜೋಡಿ ಕಿರುತೆರೆ ಮಾತ್ರ ಅಲ್ಲ, ಸಿನಿಮಾದಲ್ಲೂ ಕೂಡ ಅಭಿನಯಿಸಿದ್ದಾರೆ. ಆದರೆ ಇಬ್ಬರಿಗೂ ಬಿಗ್ ಸ್ಕ್ರೀನ್ ಕೈ ಹಿಡಿದಿಲ್ಲ. ಚಂದನ್ 'ಪ್ರೇಮ ಬರಹ' ಎನ್ನುವ ಸಿನಿಮಾದಲ್ಲಿ ನಟಿಸಿದ್ದರೂ, ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸದ್ಯ ಚಂದನ್ ಸೀರಿಯಲ್‌ನಲ್ಲಿ ನಟಿಸುತ್ತಿದ್ದು, ಕವಿತಾ ಮದುವೆಯ ಬಳಿಕ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಂಡಿಲ್ಲ.

  'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಮೂಲಕ ಕವಿತಾ ಹೆಸರು ಮಾಡಿದ್ದಾರೆ. ಚಂದನ್ ಸಾಕಷ್ಟು ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಮತ್ತೆ ವಿಭಿನ್ನ ಪಾತ್ರಗಳ ಮೂಲಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

  English summary
  Kavitha Gowda and Chandan Kumar Buys New House In Bengaluru, Know More Details,
  Sunday, June 19, 2022, 18:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X