»   » 'ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!

'ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರ ನೋವು-ನಲಿವಿನ ಜೀವನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಿತ್ತು.

ಹಾಗೇ, 'ವೀಕೆಂಡ್ ವಿತ್ ರಮೇಶ್ ಸುದೀಪ್ ವಿಶೇಷ' ಯಾವಾಗ ಬರುತ್ತೋ ಅಂತ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯ್ತಿದ್ರು. ಈಗ ಆ ಸಮಯ ಬಂದಿದೆ.

ಅಂತೂ 'ಅಭಿನಯ ಚಕ್ರವರ್ತಿ' ಸುದೀಪ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿದೆ. ಕಿಚ್ಚನ ಭಕ್ತರು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ.

ಅರ್ಥಾತ್...ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಸಾಧಕರ ಕುರ್ಚಿಯಲ್ಲಿ ಕಿಚ್ಚ ಸುದೀಪ್ ಕೂರಲಿದ್ದಾರೆ. ಮುಂದೆ ಓದಿ.....

ಸಾಧಕರ ಸೀಟ್ ನಲ್ಲಿ ಕಿಚ್ಚ ಸುದೀಪ್!

'ಬಿಗ್ ಬಾಸ್' ಕಾರ್ಯಕ್ರಮದ ಹೋಸ್ಟ್ ಆಗಿರುವ ಕಿಚ್ಚ ಸುದೀಪ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಫೈನಲ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್!

ಮೂಲಗಳ ಪ್ರಕಾರ, 'ವೀಕೆಂಡ್ ವಿತ್ ರಮೇಶ್ ಸೀಸನ್ 2' ಫೈನಲ್ ಎಪಿಸೋಡ್ ಸುದೀಪ್ ರದ್ದು.

ಸುದೀಪ್ ಮುಖಾಂತರ 'ವೀಕೆಂಡ್ ವಿತ್ ರಮೇಶ್-2' ಶುಭಂ!

ರಕ್ಷಿತಾ-ಪ್ರೇಮ್ ರವರಿಂದ 'ವೀಕೆಂಡ್ ವಿತ್ ರಮೇಶ್-2' ಪ್ರಾರಂಭವಾಗಿತ್ತು. ಈಗ ಸುದೀಪ್ ರವರ ಜೀವನ ಚರಿತ್ರೆ ಅನಾವರಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭಂ ಹಾಡಲು ಮನಸ್ಸು ಮಾಡಿದ್ದಾರೆ ವಾಹಿನಿ ಮುಖ್ಯಸ್ಥರು.

ಈಗಾಗಲೇ ಚಿತ್ರೀಕರಣ ಮುಗಿದಿದೆ!

ಮೂಲಗಳ ಪ್ರಕಾರ, ಈಗಾಗಲೇ 'ವೀಕೆಂಡ್ ವಿತ್ ರಮೇಶ್ - ಸುದೀಪ್ ವಿಶೇಷ' ಕಾರ್ಯಕ್ರಮದ ಚಿತ್ರೀಕರಣ ಮುಗಿದಿದೆ.

ಪ್ರಸಾರ ಯಾವಾಗ?

ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಆಗಿರುವ 'ಸುದೀಪ್ ವಿಶೇಷ - ವೀಕೆಂಡ್ ವಿತ್ ರಮೇಶ್' ಎಡಿಟಿಂಗ್ ಟೇಬಲ್ ಮೇಲಿದೆ. ಈ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಲಿದೆ ಅಂತ ಜೀ ಕನ್ನಡ ಮೂಲಗಳು ತಿಳಿಸಿವೆ.

ಪ್ರೋಮೋ ಪ್ರಸಾರ ಆಗಿಲ್ಲ!

ಈ ಶನಿವಾರ ಹಾಗೂ ಭಾನುವಾರ 'ಸುದೀಪ್ ವಿಶೇಷ - ವೀಕೆಂಡ್ ವಿತ್ ರಮೇಶ್' ಪ್ರಸಾರವಾಗುತ್ತಿದ್ದರೆ, ಇಷ್ಟೊತ್ತಿಗಾಗಲೇ ಕಾರ್ಯಕ್ರಮದ ಪ್ರೋಮೋ ಪ್ರಸಾರವಾಗ್ಬೇಕಿತ್ತು. ಆದ್ರೆ, ಜೀ ಕನ್ನಡ ವಾಹಿನಿಯಲ್ಲಿ ಅಂತಹ ಯಾವುದೇ ಸುಳುಹು ಸಿಕ್ಕಿಲ್ಲ.

ಅಭಿಮಾನಿಗಳಿಗೆ ಒಂದು ಸ್ಪರ್ಧೆ

ಸುದೀಪ್ ಭಾಗವಹಿಸುತ್ತಿರುವ 'ವೀಕೆಂಡ್ ವಿತ್ ರಮೇಶ್' ಫೈನಲ್ ಎಪಿಸೋಡ್ ಪ್ರಯುಕ್ತ ಸುದೀಪ್ ಅಭಿಮಾನಿಗಳಿಗೆ ಜೀ ಕನ್ನಡ ಒಂದು ಸ್ಪರ್ಧೆ ಆಯೋಜಿಸಿದೆ. ಸುದೀಪ್ ಕುರಿತ ಕೆಲ ಪ್ರಶ್ನೆಗಳಿಗೆ ಅಭಿಮಾನಿಗಳು ಸರಿಯಾದ ಉತ್ತರ ನೀಡಿದ್ರೆ, ಕಿಚ್ಚನ ಭೇಟಿಯಾಗುವ ಸುವರ್ಣಾವಕಾಶ ಇದೆ.

ಹೆಚ್ಚಿನ ಅಪ್ ಡೇಟ್ ಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ

ಸುದೀಪ್ ಭಾಗವಹಿಸುತ್ತಿರುವ 'ವೀಕೆಂಡ್ ವಿತ್ ರಮೇಶ್' ಫೈನಲ್ ಎಪಿಸೋಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actor Sudeep to take part in Zee Kannada Channel's popular show Weekend With Ramesh season 2 final episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada