Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡದ ಈ ನಟಿ ಜೊತೆಗೆ ಆರ್ಯ ಡೇಟಿಂಗ್ ಮಾಡ್ತಾರೆ
ಕಾಲಿವುಡ್ ನಟ ಆರ್ಯ ಅನೇಕ ಹುಡುಗಿಯರ ಹೃದಯ ಕದಿದ್ದಾರೆ. 'ರಾಜ ರಾಣಿ' ಸಿನಿಮಾ ಮಾಡಿರುವ ಈ ನಟ ಅನೇಕ ಹುಡುಗಿಯರ ಪಾಲಿಗೆ ಕನಸಿನ ರಾಜ ಆಗಿದ್ದಾರೆ. ಹೀಗಿರುವಾಗ ಕನ್ನಡದ ಒಬ್ಬ ನಟಿ ನೋಡಿ ಆರ್ಯ ಫಿದಾ ಆಗಿದ್ದಾರೆ. ಕಾಲಿವುಡ್ ಇಂಡಸ್ಟ್ರಿಯ ಸ್ಟಾರ್ ನಟನಾಗಿರುವ ಆರ್ಯಗೆ ಕನ್ನಡದಲ್ಲಿ ಯಾವ ನಟಿ ಇಷ್ಟ ಎಂಬುದು ಅನೇಕರಿಗೆ ಇರುವ ಕುತೂಹಲ. ಅಂದಹಾಗೆ, ಸದ್ಯ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಕನ್ನಡದಲ್ಲಿ ಆರ್ಯ ಇಷ್ಟ ಪಡುವ ನಟಿ ಯಾರು ಎಂಬುದು ತಿಳಿದಿದೆ.
ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟ ಆರ್ಯ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ಕೇಳಿದ ತಮಾಷೆಯ ಪ್ರಶ್ನೆಗಳಿಗೆ ನಗು ನಗುತ್ತಾ ಆರ್ಯ ಉತ್ತರಿಸಿದರು. ಸಾಮಾನ್ಯವಾಗಿ ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಡೇಟಿಂಗ್ ಬಗ್ಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ. ಅದೇ ರೀತಿ ಆರ್ಯ ಕಡೆಗೆ ಕೂಡ ಆ ಪ್ರಶ್ನೆ ತೇಲಿ ಬಂತು. ಅದೇ ರೀತಿ ಆರ್ಯ ಡೇಟಿಂಗ್ ಪ್ರಶ್ನೆಗೆ ಡೇರಿಂಗ್ ಆಗಿ ಉತ್ತರ ನೀಡಿದ್ದಾರೆ. ಮುಂದೆ ಓದಿ...
ಒಂದೇ ಹೀರೊಯಿನ್ ಗೆ ಸಾಹೇಬ, ಸಿದ್ಧಾರ್ಥ್ ಇಬ್ಬರು ಫಿಧಾ

ಕಿಸ್. ಹಗ್. ಡೇಟ್
ನಟ ಆರ್ಯ ಅವರಿಗೆ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ''ನೀವು ಶ್ರಿಯಾ, ಶ್ರದ್ಧಾ ಶ್ರೀನಾಥ್ ಮತ್ತು ರಮ್ಯಾ ಇವರಲ್ಲಿ ಯಾರಿಗೆ ಕಿಸ್ ಕೊಡುತ್ತೀರಾ?, ಯಾರ ಜೊತೆಗೆ ಡೇಟ್ ಹೋಗುತ್ತೀರಾ? ಹಾಗೂ ಯಾರಿಗೆ ಹಗ್ ಮಾಡುತ್ತೀರಾ? ಎಂದು ಕೇಳಿದರು.

ರಮ್ಯಾ ಜೊತೆಗೆ ಡೇಟಿಂಗ್
ಶಿವಣ್ಣನ 'ಕಿಸ್. ಹಗ್. ಡೇಟ್' ಪ್ರಶ್ನೆಗೆ ಉತ್ತರಿಸಿದ ಆರ್ಯ ''ನಾನು ಶ್ರಿಯಾಗೆ ಕಿಸ್ ಕೊಡುತ್ತೇನೆ, ಶ್ರದ್ಧಾ ಶ್ರೀನಾಥ್ ಅವರನ್ನು ಹಗ್ ಮಾಡಿಕೊಳ್ಳುತ್ತೇನೆ ಹಾಗೂ ರಮ್ಯಾ ಜೊತೆಗೆ ಡೇಟಿಂಗ್ ಹೋಗುತ್ತೇನೆ'' ಎಂದು ಹೇಳಿದರು.

ರಮ್ಯಾ ತುಂಬ ಹಾಟ್
ಕಾರ್ಯಕ್ರಮದಲ್ಲಿ ಆರ್ಯಗೆ ಶಿವಣ್ಣ ''ನಿಮಗೆ ಕನ್ನಡದಲ್ಲಿ ಫೇವರೇಟ್ ನಟಿ ಯಾರು?'' ಎಂದು ಮತ್ತೊಂದು ಪ್ರಶ್ನೆ ಕೇಳಿದರು. ಆಗ ಆರ್ಯ ರಮ್ಯಾ ಹೆಸರನ್ನು ತೆಗೆದುಕೊಂಡರು. ಜೊತೆಗೆ ''ರಮ್ಯಾ ಸಿನಿಮಾ ಮಾಡುವಾಗ ತುಂಬ ಹಾಟ್ ಆಗಿ ಇದ್ದರು. ಇದರೆ ಈಗ ಅವರು ಹೇಗಿದ್ದಾರೆ ಗೊತ್ತಿಲ್ಲ.'' ಎಂದು ಹೇಳಿ ನಕ್ಕರು. ಆಗ ಶಿವಣ್ಣ ರಮ್ಯಾ ಸದ್ಯ ಹಾಟ್ ಪೊಲಿಟಿಕ್ಸ್ ನಲ್ಲಿ ಇದ್ದಾರೆ ಎಂದರು.

'ರಮ್ಯಾ ಬಾಸ್' ಎಂದಿದ್ದ ಶ್ರದ್ಧಾ
ಇದೇ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಕೂಡ ರಮ್ಯಾ ಬಗ್ಗೆ ಮಾತನಾಡಿದ್ದರು. ರಮ್ಯಾಗೆ ಬಾಸ್ ಎಂಬ ಬಿರುದು ನೀಡಿದ್ದ ಅವರು ಕನ್ನಡದಲ್ಲಿ ರಮ್ಯಾ ಅವರ ಮಟ್ಟದ ಸ್ಟಾರ್ ಪಟ್ಟ ಹೊಂದಿರುವ ಬೇರೆ ನಟಿ ಇಲ್ಲ ಎಂದು ಹೇಳಿದ್ದರು.
ರಮ್ಯಾಗೆ ಹೊಸ ಬಿರುದು ಕೊಟ್ಟ ಶ್ರದ್ಧಾ ಶ್ರೀನಾಥ್

ಮನೋರಂಜನ್ ಮತ್ತು ವಿನಯ್ ರಾಜ್ ಕುಮಾರ್
ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದಲ್ಲಿ ಕೂಡ ನಟ ಮನೋರಂಜನ್ ಮತ್ತು ವಿನಯ್ ರಾಜ್ ಕುಮಾರ್ ಇಬ್ಬರು ರಮ್ಯಾ ಜೊತೆಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇದರ ಜೊತೆಗೆ ರಮ್ಯಾ ಮತ್ತೆ ಸಿನಿಮಾ ಮಾಡಬೇಕು, ಅವರ ನಟನೆ ತೆರೆ ಮೇಲೆ ನೋಡಬೇಕು ಎಂಬುದು ಕೂಡ ಅನೇಕ ಅಭಿಮಾನಿಗಳ ಆಸೆ ಆಗಿದೆ.