For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ : ನಾಯಿ 'ನೀರು' ಕುಡಿದ ಕುಶಾಲ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೊಮ್ಮೆ ಚಿತ್ರ ವಿಚಿತ್ರ ಟಾಸ್ಕ್ ಗಳು ಕಾಣಿಸಿಕೊಂಡಿದೆ. ನಿರೂಪಕ ಸಲ್ಮಾನ್ ಖಾನ್ ಆಪ್ತವರ್ಗಕ್ಕೆ ಸೇರಿದ್ದ ವಿದೇಶಿ ಸ್ಪರ್ಧಿ ಎಲ್ಲಿ ಅವ್ರಾಯ್ ಮನೆಯಿಂದ ಹೊರ ಬಿದ್ದ ಮೇಲೆ ಕ್ಯಾಪ್ಟನ್ ಸೋಫಿಯಾ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

  ಸೋಫಿಯಾ ಕಂಡರೆ ಮೊದಲೇ ಉರಿದು ಬೀಳುವ ಅರ್ಮಾನ್ ಎಲ್ಲರನ್ನು ಒಟ್ಟುಗೂಡಿಸಿ ಇಂಥ ಕ್ಯಾಪ್ಟನ್ ನಮಗೆ ಬೇಕಾ ಎಂದು ಪ್ರಶ್ನಿಸಿದ್ದಾನೆ. ಕುಶಾಲ್ ಹಾಗೂ ಗೌಹರ್ ಕುಚು ಕುಚು ರಾತ್ರಿ ವೇಳೆ ಸಾಂಗವಾಗಿ ಸಾಗಿದ್ದು ಮೈಕ್ ತೆಗೆದು ಮಾತನಾಡಬೇಡಿ ಎಂದು ಬಿಗ್ ಬಾಸ್ ಹೇಳಿದ್ದು ಗಾಳಿಯಲ್ಲಿ ತೇಲಿ ಹೋಗಿದೆ.ಇದರ ನಡುವೆ ಕಭಿ ಹಾ, ಕಭಿ ನಾ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಚಿತ್ರ ವಿಚಿತ್ರ ಶಿಕ್ಷೆಗಳು ಸ್ಪರ್ಧಿಗಳಿದೆ ಕಾದಿದೆ.

  ಉಗ್ರ ಪ್ರತಾಪಿ ಅರ್ಮಾನ್ ಕೊಹ್ಲಿ ತಲೆ ಕೆಳಗಾಗಿ ಕಾಲು ಮೇಲೆ ಮಾಡಿ ನಡೆದಾಡಿ ಕೊನೆಗೆ ಕಣ್ಣೀರಿಟ್ಟರೆ, ಕಾಮ್ಯಾ ಹಾಗಲಕಾಯಿ ತಿಂದು ಮುಖ ಕಿವಿಚಿದ್ದಾಳೆ. ಇದಕ್ಕಿಂತ ಘೋರ ಎಂದರೆ ಕುಶಾಲ್ ನಾಯಿ(ಹೆವೆನ್) ಕುಡಿಯುವ ಪಾತ್ರೆಯಲ್ಲಿದ್ದ ನೀರು ಕುಡಿಯುವ ಶಿಕ್ಷೆ ಕುಶಾಲ್ ಗೆ ಸಿಗುತ್ತದೆ.

  ಒಂದು ಪಂಗಡ ಆರ್ಡರ್ ಮಾಡಿದರೆ ವಿರೋಧಿ ತಂಡ ಆದೇಶ ಪಾಲಿಸಬೇಕಾಗುತ್ತದೆ. ಹುಕುಮತ್ ತಂಡದಲ್ಲಿ ಏಜಾಜ್ ಆಂಡಿ ಸಂಗ್ರಾಮ್ ಸೋಫಿಯಾ ಹಾಗೂ ತನೀಶಾ ಇದ್ದರು. ವಿರೋಧಿ ತಂಡದಲ್ಲಿ ಅರ್ಮಾನ್, ಗೌಹರ್, ಕಾಮ್ಯಾ ಹಾಗೂ ಕುಶಾಲ್ ಇದ್ದರು. ಕೊನೆಯಲ್ಲಿ ಯಾರು ಗೆದ್ದರು ಮುಂದೆ ಓದಿ...

  ಕಭಿ ಹಾ ಕಭಿ ನಾ

  ಕಭಿ ಹಾ ಕಭಿ ನಾ

  ಹುಕುಮತ್ ತಂಡ ವಿರೋಧಿ ತಂಡಕ್ಕೆ ವಿವಿಧ ಟಾಸ್ಕ್ ನೀಡುತ್ತಾರೆ. ಟಾಸ್ಕ್ ಗೆ ನೋ ಎಂದರೆ ಹುಕುಮತ್ ಗೆ ಪಾಯಿಂಟ್ ಸಿಗುತ್ತದೆ. ಮೊದಲ ಟಾಸ್ಕ್ ಮಾಡಿದ್ದು ಅರ್ಮಾನ್, ತಲೆ ಕೆಳಗೆ ಮಾಡಿ ಬಿಸಿಲಿನಲ್ಲಿ ಒಂದು ಗಂಟೆ ಇರಲು ಹೇಳಲಾಯಿತು.

  ಆದರೆ, ಇದು ಅಸಾಧ್ಯ ಎಂದು ವಿರೋಧಿ ತಂಡ ವಾದಿಸಿತು. ಕೊನೆ ವಾದ ವಿವಾದ ಆಗಿ 12 ನಿಮಿಷ ಟಾಸ್ಕ್ ಮಾಡಲು ಹೇಳಲಾಯಿತು

  ಕುಶಾಲ್ ಕಥೆ

  ಕುಶಾಲ್ ಕಥೆ

  ಮುಂದಿನ ಸ್ಪರ್ಧಿ ಕುಶಾಲ್ ಗೆ ನಾಯಿ ಹೆವೆನ್ ಕುಡಿಯುವ ಪಾತ್ರೆಯಲ್ಲಿರುವ ನೀರು ಕುಡಿಯುವ ಟಾಸ್ಕ್ ನೀಡಲಾಯಿತು. ಆದರೆ,ಇದಕ್ಕೆ ಒಪ್ಪದ ಗೌಹರ್ ಕುಶಾಲ್ ಪರ ವಾದಿಸಿದಳು. ಅದರೆ, ಕುಶಾಲ್ ಧೈರ್ಯ ಮಾಡಿ ನೀರು ಬಾಯಿಗೆ ಹಾಕಿಕೊಂಡ. ತಕ್ಷಣವೇ ಬಾತ್ ರೂಮಿಗೆ ತೆರಳಿ ಬಾಯಿಯಲ್ಲಿದ್ದ ನೀರನ್ನು ಉಗುಳಿಬಿಟ್ಟ.

  ಟಾಸ್ಕ್ ನಂತರ ಹುಕುಮತ್ ತಂಡ ನೀಡುವ ಅಮಾನವೀಯ ಟಾಸ್ಕ್ ಬಗ್ಗೆ ಅರ್ಮಾನ್, ಕಾಮ್ಯ ಹಾಗೂ ಗೌಹರ್ ಬಿಸಿಬಿಸಿ ಚರ್ಚೆ ನಡೆಸಿದರು.

  ಕಾಮ್ಯಾ ಪುರಾಣ

  ಕಾಮ್ಯಾ ಪುರಾಣ

  15 ನಿಮಿಷದಲ್ಲಿ 5 ಕಹಿ ಹಾಗಲಕಾಯಿ ತಿನ್ನುವ ಟಾಸ್ಕ್ ನೀಡಲಾಯಿತು. ಎರಡು ಹಾಗಲಕಾಯಿ ಹಾಗೂ ಹೀಗೂ ತಿಂದ ಕಾಮ್ಯಾ ಟಾಸ್ಕ್ ಮಾಡದೆ ಸೋತೆ ಎಂದಳು.

  ಅರ್ಮಾನ್ -ಕುಶಾಲ್

  ಅರ್ಮಾನ್ -ಕುಶಾಲ್

  ನಂತರ ಅರ್ಮಾನ್ -ಕುಶಾಲ್ 10 ನಿಮಿಷ ಪುಷ್ ಅಪ್ ಮಾಡುವ ಸಮತೋಲನ ಟಾಸ್ಕ್ ನೀಡಲಾಯಿತು. ಆದರೆ, 2 ನಿಮಿಷದಲ್ಲೆ ಇಬ್ಬರು ಸೋತರು. ಇದು ಅಸಾಧ್ಯ ಎಂದರು

  ಕಣ್ಣೀರಿಟ್ಟ ಉಗ್ರ ಪ್ರತಾಪಿ

  ಕಣ್ಣೀರಿಟ್ಟ ಉಗ್ರ ಪ್ರತಾಪಿ

  ಸದಾ ಸಿಡಿಮಿಡಿಗೊಳ್ಳುವ ಅರ್ಮಾನ್ ಕೊಹ್ಲಿ ಎರಡು ಟಾಸ್ಕ್ ಮಾಡಲಾಗದೆ ಸೋತಿದ್ದಕ್ಕೆ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಹುಕುಮತ್ ತಂಡದಲ್ಲಿದ್ದ ತನೀಶಾ ಮೇಲೆ ತನ್ನ ಕೋಪ ತೋರಿಸಿ ಕೂದಲು ಎಳೆದಾಡಿದ. ಕೋಪಗೊಂಡ ತನೀಶಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಲ್ಲದೆ, ಅರ್ಮಾನ್ ಜತೆಗಿದ್ದ ಬೆಡ್ ಅನ್ನು ದೂರ ಸರಿಸಲು ನಿರ್ಧರಿಸಿದಳು

  ಅರ್ಮಾನ್ ಎಚ್ಚರಿಕೆ

  ಅರ್ಮಾನ್ ಎಚ್ಚರಿಕೆ

  ಟಾಸ್ಕ್ ಮಾಡದೆ ಸೋತ ಅರ್ಮಾನ್ ನನ್ನು ಏಜಾಜ್ ಹಾಗೂ ಸಂಗ್ರಾಮ್ ಗೇಲಿ ಮಾಡಿಕೊಂಡು ನಗೆಯಾಡುತ್ತಾರೆ. ಕುಶಾಲ್ ನನ್ನು ಕೂಡಾ ಕೀಚಾಯಿಸಿದ ಏಜಾಜ್ ..ಪಾಪ ಗೌಹರ್ ಗೆ ಇಂಥ ನಿಸ್ತೇಜ ಯುವಕ ಸಿಕ್ಕಿಬಿಟ್ಟ. ಗೌಹರ್ ಗಾಗಿ ವಾಪಸ್ ಬಂದ ಕುಶಾಲ್ ಎಂದುಬಿಟ್ಟ

  ಕೊನೆಗೆ ಹುಕುಮತ್ ತಂಡಕ್ಕೆ ಅರ್ಮಾನ್ ಹಾಗೂ ಕುಶಾಲ್ ಎಚ್ಚರಿಕೆ ನೀಡಿ ದ್ವೇಷ ತೀರಿಸಿಕೊಳ್ಳುತ್ತೇವೆ ಎಂದರು.

  English summary
  Bigg Boss 7's latest luxury budget task has got Armaan Kohli standing upside down for an hour in the sun, Kamya is made to eat three bitter guard, Kushal is made to drink water out of Heaven's (dog) water bowl, at the end of the task Armaan Kohli even breaks down and cries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X