For Quick Alerts
  ALLOW NOTIFICATIONS  
  For Daily Alerts

  ಬಹುಭಾಷಾ ಧಾರಾವಾಹಿ 'ಸ್ವರ್ಣ ಖಡ್ಗಂ'ನಲ್ಲಿ ಕನ್ನಡ ಕುವರ

  By Harshitha
  |

  ಕಾರವಾರ, ಜುಲೈ.06: ಬಹುಭಾಷೆಯಲ್ಲಿ ತಯಾರಾಗುತ್ತಿರುವ 'ಸ್ವರ್ಣ ಖಡ್ಗಂ' ಧಾರವಾಹಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಲಕ್ಷ್ಮೀಶ್ ಭಟ್‌ ಕಾಣಿಸಿಕೊಂಡಿದ್ದಾರೆ. ಬಹುತೇಕ ಕನ್ನಡದ ಕಲಾವಿದರೇ ಇರುವ ಈ‌ ಧಾರವಾಹಿ ಸದ್ಯ ಈಟಿವಿ ತೆಲುಗು ವಾಹಿನಿಯಲ್ಲಿ ಇಂದಿನಿಂದ ಪ್ರಸಾರವಾಗಲಿದೆ. ಬಳಿಕ ನಾಲ್ಕೈದು ಭಾಷೆಗಳಿಗೆ ಭಾಷಾಂತರಗೊಂಡು ಪ್ರಸಾರಗೊಳ್ಳಲಿದೆ ಎನ್ನಲಾಗುತ್ತಿದೆ.

  'ಬಾಹುಬಲಿ' ಸಿನಿಮಾದಲ್ಲಿ ಪ್ರಭಾಸ್ ಮಾಡಿದ್ದ ಮಹೇಂದ್ರ ಬಾಹುಬಲಿಯಂತಹ ಪಾತ್ರದಲ್ಲಿ ಲಕ್ಷ್ಮೀಶ್ ಭಟ್‌ ಕಾಣಿಸಿಕೊಂಡಿದ್ದಾರೆ. ಈ ಧಾರವಾಹಿಯ ಪಾತ್ರಧಾರಿಗಳಿಗೆ 'ಬಾಹುಬಲಿ' ಸಿನಿಮಾ ಪಾತ್ರಧಾರಿಗಳಿಗೆ ಕೊಟ್ಟಂತೆ ಭರ್ಜರಿ ತರಬೇತಿ ಕೊಡಲಾಗಿದೆ.

  'ಸ್ವರ್ಣ ಖಡ್ಗಂ' ಧಾರವಾಹಿಯಲ್ಲಿ ಹೊನ್ನಾವರದ ಹುಡುಗ

  ಪ್ರಮುಖ ಪಾತ್ರ ನಿಭಾಯಿಸಿರುವ ಲಕ್ಷ್ಮೀಶ್ ಭಟ್‌ ಕುದುರೆ ಏರಿ, ಕತ್ತಿ ಹಿಡಿದು ಮಹಾರಾಜನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  ಸಿಕ್ಕಾಪಟ್ಟೆ ತರಬೇತಿ ಪಡೆದು ಸಾಹಸಗಳನ್ನು ಮಾಡಿರುವ ಲಕ್ಷ್ಮೀಶ್ ಭಟ್‌ ಗೆ ನಾಯಕಿಯಾಗಿ ಸಂಜನಾ ಗಲ್ರಾನಿ ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ಮೇಘನಾ, ಸುರೇಶ್‌ ರೈ, ರಾಜಶ್ರೀ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಬಾಲಿವುಡ್‌ನ ಪೂನಂ ಕೌರ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kannada Actor Lakshmeesh Bhat to play lead in Multilingual serial 'Swarna Khadgam'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X