Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ಬಾರಿಯೂ 'ವೀಕೆಂಡ್' ಕಾರ್ಯಕ್ರಮಕ್ಕೆ ಇವರೆಲ್ಲ ಬರಲೇ ಇಲ್ಲ
Recommended Video
'ವೀಕೆಂಡ್ ವಿತ್ ರಮೇಶ್' ನಾಲ್ಕನೇ ಆವೃತ್ತಿ ಮುಗಿದಿದೆ. ಒಬ್ಬರೇ ಅತಿಥಿಯನ್ನು ಕರೆಸದೆ, ವಿನೂತನವಾಗಿ ಕೊನೆಯ ಸಂಚಿಕೆಗೆ ವಾಹಿನಿ ವಿದಾಯ ಹೇಳಿದೆ. ಮುಂದಿನ ಸೀಸನ್ ಬರುವವರೆಗೆ ರಮೇಶ್ ಅಂಡ್ ಟೀಮ್ ಸಣ್ಣ ಬ್ರೇಕ್ ತೆಗೆದುಕೊಂಡಿದೆ.
ಪ್ರತಿ ಬಾರಿ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕೆಲವು ಅತಿಥಿಗಳು ಬರಬೇಕು ಎನ್ನುವ ಆಸೆ ವೀಕ್ಷಕರಲ್ಲಿ ಇರುತ್ತದೆ. ಅದೇ ರೀತಿ ಈ ಬಾರಿಯೂ ಅಂತಹ ಕೆಲವು ಅತಿಥಿಗಳು ಕಾರ್ಯಕ್ರಮಕ್ಕೆ ಬರಬೇಕು ಎನ್ನುವ ಅಪೇಕ್ಷೆ ಜನರಲ್ಲಿ ಇತ್ತು.
ವೀಕೆಂಡ್
ವಿತ್
ರಮೇಶ್
ಫಿನಾಲೆಯಲ್ಲಿ
ಅಣ್ಣಾಮಲೈ
ಮತ್ತು
ವಿಲಾಸ್
ನಾಯಕ್.!
ವೀರೇಂದ್ರ ಹೆಗ್ಗಡೆ, ಇನ್ಫೋಸಿಸ್ ನಾರಾಯಣ ಮೂರ್ತಿ ಹೀಗೆ ಕೆಲವು ಸಾಧಕರನ್ನು ಕರೆಸುವ ಮೂಲಕ ವಾಹಿನಿ ವೀಕ್ಷಕರ ಕನಸನ್ನು ಈಡೇರಿಸಿದೆ. ಆದರೆ, ಇನ್ನಷ್ಟು ಬೇರೆ ಬೇರೆ ಅತಿಥಿಗಳ ಬರುವಿಕೆಯಲ್ಲಿ ಇದ್ದ ವೀಕ್ಷಕರಿಗೆ ನಿರಾಸೆಯಾಗಿದೆ.

ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡುವ ಆಸೆ ಎಲ್ಲರಿಗೂ ಇದೆ. ಆದರೆ, ಅದು ಈವರೆಗೆ ಈಡೇರಿಲ್ಲ. ಈ ಬಾರಿ ಜೀ ವಾಹಿನಿಯೂ ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಿತ್ತು. ಆದರೆ, ಅದು ಸಹಕಾರ ಆಗಲಿಲ್ಲ.

ಅರುಂಧತಿ ನಾಗ್
ನಟ ಶಂಕರ್ ನಾಗ್ ಪತ್ನಿ, ನಟಿ ಹಾಗೂ ರಂಗಭೂಮಿಯಲ್ಲಿ ತಮ್ಮದೆ ಆದ ಸಾಧನೆ ಮಾಡಿರುವ ಅರುಂಧತಿ ನಾಗ್ ಕೂಡ ಈ ಬಾರಿಯ ಕಾರ್ಯಕ್ರಮದಲ್ಲಿ ಕಾರಣಲಿಲ್ಲ. ಜೀ ವಾಹಿನಿಯ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರುಂಧತಿ ನಾಗ್ 'ವೀಕೆಂಡ್ ವಿತ್ ರಮೇಶ್' ಗೆ ಬರುವ ಸೂಚನೆ ನೀಡಿದ್ದರು.
ಕೊನೆಗೂ
'ವೀಕೆಂಡ್
ವಿತ್
ರಮೇಶ್-3'ಗೆ
'ಇವರೆಲ್ಲ'
ಬರಲೇ
ಇಲ್ಲ.!

ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ
ಈ ಬಾರಿ ನಟಿ ಸುಮಲತಾ, ಪ್ರೇಮಾ, ವಿನಯ ಪ್ರಸಾದ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿ ಮೇಲೆ ಕುಳಿತ್ತಿದ್ದರು. ಹಾಗಾಗಿ ಮಾಲಾಶ್ರೀ ಕೂಡ ಕಾರ್ಯಕ್ರಮಕ್ಕೆ ಬರಬಹುದು ಎಂಬ ಕುತೂಹಲ ಇತ್ತು. ಅಲ್ಲದೆ, ಲೇಡಿ ಸೂಪರ್ ಸ್ಟಾರ್ ಆಗಿರುವ ಅವರು ಸಾಧಕರ ಸೀಟ್ ಮೇಲೆ ಕೂರುವ ಅರ್ಹತೆ ಹೊಂದಿದ್ದರು. ಆದರೆ, ಕೊನೆಗೂ ಆ ಭಾಗ್ಯ ಸಿಗಲಿಲ್ಲ.

ರಜನಿಕಾಂತ್ ಮತ್ತು ಐಶ್ವರ್ಯ ರೈ
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ಸೀಸನ್ ಪ್ರಾರಂಭ ಆಗುವಾಗ ಪ್ರೆಸ್ ಮೀಟ್ ನಡೆದಿತ್ತು. ಅಲ್ಲಿ ಜೀ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಒಂದು ವಿಷಯ ಹಂಚಿಕೊಂಡಿದ್ದರು. ಈ ಬಾರಿ ಕಾರ್ಯಕ್ರಮಕ್ಕೆ ರಜನಿಕಾಂತ್ ಮತ್ತು ಐಶ್ವರ್ಯ ರೈ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದರು. ಆದರೆ, ಆ ಪ್ರಯತ್ನವೂ ವಿಫಲವಾಗಿವೆ.

ಉಳಿದ ಹಿರಿಯ ಸಾಧಕರು
ಹಿರಿಯ ನಿರ್ದೇಶಕ ಭಗವಾನ್, ಭಾರ್ಗವ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ನಟ ಹೊನ್ನಾವಳಿ ಕೃಷ್ಣ, ದತ್ತಣ್ಣ ಸೇರಿದಂತೆ ಸಾಕಷ್ಟು ರಿಯಲ್ ಸಾಧಕರು ಕಾರ್ಯಕ್ರಮಕ್ಕೆ ಬರಬೇಕು ಎನ್ನುವ ಒತ್ತಾಯ ಹೆಚ್ಚಾಗಿತ್ತು. ಸಾಲು ಮರದ ತಿಮ್ಮಕ್ಕ ಸಾಧಕರ ಸೀಟ್ ಮೇಲೆ ಕೂರಬೇಕು ಎಂಬ ಕೂಗು ಇತ್ತು. ಆದರೆ, ಅದು ಯಾವುದೂ ಕಾರ್ಯ ರೂಪಕ್ಕೆ ಬರಲಿಲ್ಲ.