»   » ಬಿಗ್ ಬಾಸ್ 'ಸಖತ್ ಸಂಡೆ' ವಿತ್ ಪ್ರೇಮ್, ಅಮೂಲ್ಯಾ

ಬಿಗ್ ಬಾಸ್ 'ಸಖತ್ ಸಂಡೆ' ವಿತ್ ಪ್ರೇಮ್, ಅಮೂಲ್ಯಾ

Posted By:
Subscribe to Filmibeat Kannada

ಬಿಗ್ ಬಾಸ್ ಕಾರ್ಯಕ್ರಮದ ಈ ವಾರದ ವಿಶೇಷ ಅತಿಥಿಗಳು ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಕ್ಯೂಟ್ ಬೆಡಗಿ ಅಮೂಲ್ಯಾ. ಇವರಿಬ್ಬರು ಸುದೀಪ್ ನಡೆಸಿಕೊಡುವ 'ಸಖತ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಈ ಭಾನುವಾರ (ಜು.27) ಭಾಗವಹಿಸುತ್ತಿದ್ದಾರೆ.

2013ನೇ ಸಾಲಿನ ಶ್ರೇಷ್ಠ ನಟ ನಟಿ ಪ್ರಶಸ್ತಿಗೆ ಈ ಇಬ್ಬರು ತಾರೆಗಳು ಭಾಜನರಾಗಿರುವುದು ಗೊತ್ತೇ ಇದೆ. ಸದ್ಯಕ್ಕೆ ಇವರಿಬ್ಬರೂ 'ಮಳೆ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಿಚ್ಚ ಸುದೀಪ್ ಜೊತೆ ಇವರಿಬ್ಬರೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.


ಚಾರ್ಮಿನಾರ್ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಪ್ರೇಮ್ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾದರೆ, ಅಮೂಲ್ಯಾ ಅವರು ಶ್ರಾವಣಿ ಸುಬ್ರಹ್ಮಣ್ಯ ಚಿತ್ರದಲ್ಲಿನ ನಟನೆಗೆ ಪ್ರಶಸ್ತಿ ಪಡೆದರು. ಈಗ ಇಬ್ಬರೂ ಬಿಗ್ ಬಾಸ್ ವೇದಿಕೆಗೆ ಇದೇ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ.

ಕಿಚ್ಚನ ಜೊತೆ ಮಾತುಕತೆ ಎಂದರೆ ಕೇಳಬೇಕೆ. ಕಿಕ್ಕೂ ಇರುತ್ತದೆ ಮಜಾನೂ ಇರುತ್ತದೆ. ಸಖತ್ ಸಂಡೆ ವಿತ್ ಸುದೀಪ್ ಕಾರ್ಯಕ್ರಮ ಸಖತ್ ಆಗಿರುತ್ತದೆ ಎಂಬುದರಲ್ಲಿ ಡೌಟೇ ಇಲ್ಲ. 'ಮಳೆ' ಜೋಡಿಯ ನೆನಪುಗಳ ವರ್ಷಧಾರೆಯಲ್ಲಿ ಅಭಿಮಾನಿಗಳು ಕೊಚ್ಚಿಹೋಗುವುದಂತೂ ಗ್ಯಾರಂಟಿ.

ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್, ರವಿಶಂಕರ್, ವಿಜಯ್ ಪ್ರಕಾಶ್, ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಬಿಗ್ ಬಾಸ್ ವೇದಿಕೆ ಹಂಚಿಕೊಂಡವರು. ಇದೀಗ ಪ್ರೇಮ್ ಮತ್ತು ಅಮೂಲ್ಯಾ ಸರದಿ. (ಒನ್ಇಂಡಿಯಾ ಕನ್ನಡ)

English summary
Sandalwood Lovely Star Prem and cute actress Amoolya will be seen in Bigg Boss Kannda 2 on Sunday (27th July), both are the celebrity guest of second week. The celebrities share the stage with host Sudeep on 'Sakkat Sunday with Sudeep'.
Please Wait while comments are loading...