»   » ಮಹಾ ಶಿವರಾತ್ರಿ ಹಬ್ಬ, ಸ್ಟಾರ್ ಸುವರ್ಣ ವಾಹಿನಿ ಹಾಗೂ 'ಮಹಾಯಾಗ'

ಮಹಾ ಶಿವರಾತ್ರಿ ಹಬ್ಬ, ಸ್ಟಾರ್ ಸುವರ್ಣ ವಾಹಿನಿ ಹಾಗೂ 'ಮಹಾಯಾಗ'

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯು ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಇದೇ ಫೆಬ್ರವರಿ 18 ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಕಮಲಮ್ಮನಗುಂಡಿ (ಇಸ್ಕಾನ್ ಎದುರು) ಮೈದಾನದಲ್ಲಿ 'ಮಹಾಯಾಗ' ಹಮ್ಮಿಕೊಂಡಿದೆ.

ಬೆಳಗ್ಗೆ 9ಕ್ಕೆ ಭಕ್ತರಿಂದ 11 ಲಕ್ಷ ಶಿವನಾಮ ಜಪ, 1008 ಮೃತ್ತಿಕಾ ಶಿವಲಿಂಗ ಸ್ಥಾಪನೆ ಹಾಗೂ ಡಾ.ವಿದ್ವಾನ್ ಗೋಪಾಲಕೃಷ್ಣ ಗುರೂಜಿಯವರಿಂದ 'ಮಹಾ ರುದ್ರಯಾಗ' ನಡೆಯಲಿದೆ.[ಫೆಬ್ರವರಿ 13 ರಿಂದ ಕರುನಾಡ ಮನೆ ಮನೆಯಲ್ಲೂ ಗಣೇಶೋತ್ಸವ.!]

Maha Shivaratri Special: Maha Yaga by Star Suvarna Channel

ಮಧ್ಯಾಹ್ನ 2ಕ್ಕೆ ಬೆಂಗಳೂರಿನ ವಿವಿಧ ಭಜನಾ ಮಂಡಳಿಗಳಿಂದ ಶಿವ, ಪಾರ್ವತಿ ಹಾಗೂ ಗಣೇಶನ ಕುರಿತು ಭಜನೆ ನಡೆಯಲಿದೆ. ಸಂಜೆ 4ಕ್ಕೆ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕರಿಂದ ಸಂಕಲ್ಪ ಮತ್ತು ಮಹಾ ಪೂಜೆ ನೆರವೇರಲಿದೆ. ಹಾಗೇ ಸಂಜೆ 6ಕ್ಕೆ ಸುವರ್ಣ ಲೇಡೀಸ್ ಕ್ಲಬ್ ಸದಸ್ಯರು ನಟರಾಜನಿಗೆ ನಾಟ್ಯ ನಮನ ಸಲ್ಲಿಸಲಿದ್ದಾರೆ.[ಮಹಾದೇವ 'ವಿಷಕಂಠ'ನಾದ ರೋಚಕ ಕಥೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ.!]

ಈ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರಹರ ಮಹಾದೇವ' ಧಾರಾವಾಹಿಯ ನಟ-ನಟಿಯರು ಭಾಗವಹಿಸಲಿದ್ದಾರೆ. ಜೊತೆಗೆ ಸ್ಟಾರ್ ಸುವರ್ಣ ಪರಿವಾರದ ಸದಸ್ಯರು, ನರೇಂದ್ರ ಬಾಬು ಶರ್ಮಾ ಗುರೂಜಿ ಹಾಗೂ ಸಂತೋಷ್ ಗುರೂಜಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಉಚಿತ ಪ್ರವೇಶ ಇದೆ.

English summary
Maha Shivaratri Special: Maha Yaga by Star Suvarna Channel on 18th February in Mahalakshmi Layout, Bengaluru
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada