»   » ಜೀ ಕನ್ನಡದಲ್ಲಿ ಹೊಸ ಭವಿಷ್ಯವಾಣಿ 'ಮಹರ್ಷಿವಾಣಿ'

ಜೀ ಕನ್ನಡದಲ್ಲಿ ಹೊಸ ಭವಿಷ್ಯವಾಣಿ 'ಮಹರ್ಷಿವಾಣಿ'

Posted By:
Subscribe to Filmibeat Kannada

ಜಗತ್ತು ಅವಸರದ ಗೂಡು. ಈ ಅವಸರವೇ ಆಧುನಿಕತೆ ಇರಬಹುದು. ಆಧುನಿಕತೆ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದೇ ರೀತಿ ಸಾವಧಾನ, ಸಮಾಧಾನಗಳನ್ನೂ ನಮ್ಮಿಂದ ದೂರ ಮಾಡುತ್ತಿದೆ. ಬೆಳಗ್ಗೆ ಏಳುವ ಗೃಹಿಣಿಯ ಧಾರ್ಮಿಕ ಸಮಸ್ಯೆಗಳಿಗೆ ಸಾಂತ್ವನ ಬೇಕಿದೆ. ಇಹ ಜೀವನದಲ್ಲಿ ನೊಂದವರಿಗೆ ನೆಮ್ಮದಿ ಬೇಕಿದೆ. ಆಫೀಸಿನ ಗಡಿಬಿಡಿಯಲ್ಲಿರುವ ಗಂಡನಿಗೆ, ಓದುವ ಮಕ್ಕಳಿಗೆ, ವಯಸ್ಸಾದವರ ಧಾರ್ಮಿಕ ಜಿಜ್ಞಾಸೆಗೆ ಪರಿಹಾರ ಬೇಕಿದೆ.

ಟಿ.ವಿ ಮಾಧ್ಯಮದ ಮೂಲಕ ಸರಳ ಉಪದೇಶಗಳಿಗೆ ಮೊರೆ ಹೋಗಿರುವ ಕಾಲವಿದು. ಸಾಂತ್ವನಕ್ಕಾಗಿ ಹಪಹಪಿಸುತ್ತಿರುವ, ಒತ್ತಡಗಳಿಗೆ ಸಿಲುಕಿರುವ ಸಂದರ್ಭಗಳಿವು. ಆಪ್ತ ಸಲಹೆ, ವಿಶ್ವಾಸ ತುಂಬಿದ ಮಾರ್ಗದರ್ಶನ ಪ್ರತೀ ಸಾಮಾನ್ಯನಿಗೂ ಬೇಕಿದೆ. ಜೀ ಕನ್ನಡ ಇದೀಗ ಇಂತಹ ಸಾಮಾನ್ಯರ ಸಮಸ್ಯೆಗಳಿಗೆ ಆಪ್ತ ಧ್ವನಿಯಾಗುತ್ತಿದೆ. [ವೃಷಭದಿಂದ ಕರ್ಕ ರಾಶಿಯವರಿಗೆ 2014ರ ಸಂಕ್ರಮಣ ಫಲ]


ಜೀ ಕನ್ನಡ ತನ್ನ ವೀಕ್ಷಕರಿಗಾಗಿ ಮಹರ್ಷಿ ಆನಂದ ಗುರೂಜಿಯವರನ್ನು ಹೊಸ ಬಗೆಯಲ್ಲಿ ಪರಿಚಯಿಸಲಿದೆ. ಜೀ ಕನ್ನಡ ವಾಹಿನಿ ಮತ್ತೆ ಡಾ.ಆನಂದ ಗುರೂಜಿಯವರನ್ನು ಜನರ ಮನೆ ಮನಗಳಿಗೆ ವಾಪಸ್ಸು ತರುತ್ತಿದೆ. ತನ್ಮುಖೇನ ಸಾಮಾನ್ಯರ ಸಮಸ್ಯೆಗಳಿಗೆ ಹೊಸ ಭರವಸೆಯನ್ನು ತುಂಬಲು ಮತ್ತೊಂದು ಹೆಜ್ಜೆಯನ್ನು ಮುಂದಿಡ್ತಾ ಇದೆ.

ಶ್ರೀ ಮಹರ್ಷಿಗಳು ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲೆಂದೇ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಇದುವರೆಗಿನ ಅನುಭವವನ್ನು ಜೀ ಕನ್ನಡ ಹೊಸಬಗೆಯಲ್ಲಿ ಜನತೆಗೆ ಸದುಪಯೋಗವಾಗುವಂತೆ ಶ್ರಮಿಸಲಿದೆ.

ಫೋನ್ ಮುಖೇನವಲ್ಲದೆ-ಗಂಭೀರ ಸಮಸ್ಯೆ ಇರುವವರಿಗೆ ಮುಖಾಮುಖಿ ಭೇಟಿ ಏರ್ಪಡಿಸಲಾಗುತ್ತದೆ. ಸಾಂತ್ವನದ ಮಹಾ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಹರ್ಷಿಗಳಿಗೆ ಗೊತ್ತಿರುವ ಹಸ್ತ ಸಾಮುದ್ರಿಕೆ, ದರ್ಪಣಾಂಜನ, ಚಕ್ಷುರ್ಮತಿ ಜ್ಞಾನ, ಯೋಗಸಿದ್ಧಿ ಮೊದಲಾದ ಮಹಾನ್ ಧಾರ್ಮಿಕ ವಿಜ್ಞಾನವನ್ನು ಜನಾಧರಣೀಯವಾಗಿ ಜೀ ಕನ್ನಡ ಪ್ರಸ್ತುತಪಡಿಸಲಿದೆ.

Dr Ananda Guruji

ಅಗತ್ಯವಿರುವ ಪ್ರತೀ ಕನ್ನಡಿಗನಿಗೂ ಮಹರ್ಷಿಯ ಮಾರ್ಗದರ್ಶನವನ್ನು ಮುಟ್ಟಿಸಲು ಜೀ ವಾಹಿನಿ ಸಂಕಲ್ಪಿಸಿದೆ. ಜೀ ಕನ್ನಡದ ಸಂಕಲ್ಪದ ಫಲವೇ-ಮಹರ್ಷಿ ವಾಣಿ. ಈ ಕಾರ್ಯಕ್ರಮದ ಮೂಲಕ ಜೀ ಕನ್ನಡದಲ್ಲಿ ಗುರೂಜಿಯವರು ಕಾಣಿಸಿಕೊಳ್ಳಲಿದ್ದಾರೆ.

"ಒಂದು ವಿಶ್ವಸನೀಯ, ಒಂದು ಪ್ರಾಮಾಣಿಕ ಆಪ್ತ ಧ್ವನಿಯೇ-ಮಹರ್ಷಿ ವಾಣಿ. ಮಹರ್ಷಿಯ ಮಹಾ ಸಂದೇಶಗಳಿಗೆ ಮಹರ್ಷಿ ವಾಣಿ ವಿನೂತನ ವೇದಿಕೆಯಾಗಲಿದೆ"- ಎಂದು ಜೀ ಕನ್ನಡದ ಬಿಸಿನೆಸ್ ಹೆಡ್ ಸೀಜು ಪ್ರಭಾಕರನ್ ಅಭಿಪ್ರಾಯಪಡುತ್ತಾರೆ.

ಮಹರ್ಷಿಗಳು ಸಾಮಾನ್ಯರ ನಾಡಿ ಮಿಡಿತ ಬಲ್ಲವರು. ಸಮಸ್ಯೆಗಳಿಗೆ ಸರಳ ಪರಿಹಾರ ಕೊಡಬಲ್ಲವರು-ಮಹರ್ಷಿಗಳ ಈ ಶಕ್ತಿಯನ್ನು ಪ್ರತೀ ಸಾಮಾನ್ಯ ವ್ಯಕ್ತಿಗೆ ತಲುಪಿಸುವ ವಿನಮ್ರ ಕೆಲಸ ನಮ್ಮದೆಂದು-ಜೀ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರ್ ಅಭಿಪ್ರಾಯಪಡುತ್ತಾರೆ.ಮಹರ್ಷಿ ವಾಣಿ-ಇದೇ ಜೂನ್ 16 ರಿಂದ ಪ್ರತಿ ಸೋಮವಾರದಿಂದ ಶನಿವಾರ ಬೆಳಗ್ಗೆ 8 ಗಂಟೆಗೆ ಪ್ರಸಾರವಾಗಲಿದೆ. (ಒನ್ಇಂಡಿಯಾ ಕನ್ನಡ)

English summary
Dr. Shri Maharshi Ananda Guruji is well known astrologer and a thinker from Karnataka. 'Maharshivani. is a devotional program featuring Shri Maharshi Ananda Guruji. This show involves exploring the spiritual realm with unique methods of predictions and discourse by Shri Maharshi Ananda Guruji. The program airs on Zee Kannada from 16th June at 8 am from Monday to Saturday. 
 
Please Wait while comments are loading...