For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆಗೆ ಬಲಗಾಲಿಟ್ಟು ಬಂದ 'ಲೇಡಿ ಟೈಗರ್' ಮಾಲಾಶ್ರೀ.!

  By Harshitha
  |

  ನಟಿ ಮಾಲಾಶ್ರೀ ನಟನೆ ವಿಷಯವಾಗಿ ಮೊನ್ನೆಮೊನ್ನೆಯಷ್ಟೇ ಗಾಂಧಿನಗರದಲ್ಲಿ ಆದ ದೊಡ್ಡ ರಾದ್ಧಾಂತ ಹೇಗೆ ತಾನೆ ಮರೆಯಲು ಸಾಧ್ಯ.!

  ಮೂರ್ನಾಲ್ಕು ಪ್ರೆಸ್ ಮೀಟ್ ಮಾಡಿ, ಸ್ಯಾಂಡಲ್ ವುಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ನಂತರ 'ಉಪ್ಪು ಹುಳಿ ಖಾರ' ಚಿತ್ರ ಸದ್ಯ ಸಪ್ಪೆ ಆಗಿದೆ. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

  ಹೀಗಿರುವಾಗಲೇ, ನಟಿ ಮಾಲಾಶ್ರೀ ಕಿರುತೆರೆ ಕಡೆಗೆ ಮುಖ ಮಾಡಿದ್ದಾರೆ. ಅರೇ..!! ಅಂತ 'ಕನಸಿನ ರಾಣಿ' ಅಭಿಮಾನಿಗಳು ಗಾಬರಿ ಆಗುವ ಮುನ್ನ ಕೆಳಗಿರುವ ಸ್ಲೈಡ್ ಗಳಲ್ಲಿ ಸಂಪೂರ್ಣ ಮಾಹಿತಿ ಓದಿರಿ....

  ಸಣ್ಣ ಪರದೆ ಮೇಲೆ ನಟಿ ಮಾಲಾಶ್ರೀ.!

  ಸಣ್ಣ ಪರದೆ ಮೇಲೆ ನಟಿ ಮಾಲಾಶ್ರೀ.!

  ಬೆಳ್ಳಿ ಪರದೆ ಮೇಲೆ 25 ವರ್ಷಗಳ ಕಾಲ ಮೆರೆದ ನಟಿ ಮಾಲಾಶ್ರೀ ಇದೀಗ ಕಿರುತೆರೆ ಕಡೆಗೆ ಮುಖ ಮಾಡಿದ್ದಾರೆ. ಹಾಗಂತ ನಟಿ ಮಾಲಾಶ್ರೀ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಅಂದುಕೊಳ್ಳಬೇಡಿ. 'ಲೇಡಿ ಟೈಗರ್' ಮಾಲಾಶ್ರೀ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. [2015 ರಾಜ್ಯ ಪ್ರಶಸ್ತಿ; ವಿಜಯ್ ರಾಘವೇಂದ್ರ ಮತ್ತು ಮಾಲಾಶ್ರೀ 'ಬೆಸ್ಟ್'.!]

  ಯಾವುದು ಆ ರಿಯಾಲಿಟಿ ಶೋ?

  ಯಾವುದು ಆ ರಿಯಾಲಿಟಿ ಶೋ?

  ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ತೀರ್ಪುಗಾರರ ಕುರ್ಚಿ ಮೇಲೆ ನಟಿ ಮಾಲಾಶ್ರೀ ಕೂರಲಿದ್ದಾರೆ.

  ದಿಗಂತ್ ಕೂಡ ಜಡ್ಜ್.?

  ದಿಗಂತ್ ಕೂಡ ಜಡ್ಜ್.?

  ದೂದ್ ಪೇಡ ದಿಗಂತ್ ಕೂಡ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ತೀರ್ಪುಗಾರರಾಗಲಿದ್ದಾರೆ.

  ನಟಿ ಭಾವನಾ ಕೂಡ ಇರುತ್ತಾರೆ.!

  ನಟಿ ಭಾವನಾ ಕೂಡ ಇರುತ್ತಾರೆ.!

  ದಿಗಂತ್, ಮಾಲಾಶ್ರೀ ಜೊತೆ ನಟಿ ಭಾವನಾ ಕೂಡ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಜಡ್ಜ್ ಆಗಲಿದ್ದಾರೆ.

  'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಕುರಿತು..

  'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಕುರಿತು..

  ಇದುವರೆಗೆ ಸೋಲೋ ಮತ್ತು ಡ್ಯುಯೆಟ್ ಡ್ಯಾನ್ಸ್ ಶೋಗಳನ್ನ ನೀವೆಲ್ಲಾ ನೋಡಿರಬಹುದು. ಆದ್ರೆ, ಕರ್ನಾಟಕದಲ್ಲಿ ಹಲವಾರು ನೃತ್ಯ ತಂಡಗಳಿವೆ. ಅಂತಹ ಪ್ರತಿಭಾವಂತ ನೃತ್ಯ ತಂಡದವರಿಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ವೇದಿಕೆಯಾಗಲಿದೆ.

  ಆಡಿಷನ್ ಮುಗಿದಿದೆ.!

  ಆಡಿಷನ್ ಮುಗಿದಿದೆ.!

  ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಮೊದಲಾದ ನಗರಗಳಲ್ಲಿ ಆಡಿಷನ್ ನಡೆಸಿ 54 ತಂಡಗಳನ್ನು ಆಯ್ಕೆ ಮಾಡಿ, ಅದರಲ್ಲಿ 14 ಉತ್ತಮ ತಂಡಗಳಿಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ವೇದಿಕೆ ಸಜ್ಜಾಗಿದೆ.

  ಕಾರ್ಯಕ್ರಮದ ಉದ್ದೇಶ.?

  ಕಾರ್ಯಕ್ರಮದ ಉದ್ದೇಶ.?

  ''ಕನ್ನಡ ಜನತೆಗೆ ಹೊಸದನ್ನು ಕೊಡುವ ನಿಟ್ಟಿನಲ್ಲಿ ಹಾಗೂ ಅವಕಾಶ ವಂಚಿತ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ನೀಡುವುದು ನಮ್ಮ ಆಶಯವಾಗಿದೆ'' ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್.

  ಅನುಶ್ರೀ ನಿರೂಪಣೆ

  ಅನುಶ್ರೀ ನಿರೂಪಣೆ

  'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ನಿರೂಪಣೆ ಹೊಣೆ ನಟಿ ಅನುಶ್ರೀ ಯವರದ್ದು.

  ಕಾರ್ಯಕ್ರಮ ಪ್ರಸಾರ ಯಾವಾಗ?

  ಕಾರ್ಯಕ್ರಮ ಪ್ರಸಾರ ಯಾವಾಗ?

  ಮೇ 21 ರಿಂದ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಒಟ್ಟು 30 ಕಂತುಗಳಲ್ಲಿ ಪ್ರಸಾರವಾಗಲಿದೆ.

  English summary
  Kannada Actress Malashri, Bhavana and Kannada Actor Diganth to judge 'Dance Karnataka Dance' reality show in Zee Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X