For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್': ಮುಂದಿನ ಸಂಚಿಕೆಗಳಲ್ಲಿ ಯಾರ್ಯಾರು ಬರ್ತಾರೆ.?

  By Harshitha
  |

  ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿ ಇನ್ನೇನು ಮುಗಿಯುವ ಹಂತ ತಲುಪಿದೆ. ಇನ್ನೆರಡು ವಾರಾಂತ್ಯಗಳಲ್ಲಿ 'ವೀಕೆಂಡ್ ವಿತ್ ರಮೇಶ್-3' ಮುಕ್ತಾಯವಾಗಲಿದೆ.

  ಇಲ್ಲಿಯವರೆಗೂ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಜಗ್ಗೇಶ್, ರಕ್ಷಿತ್ ಶೆಟ್ಟಿ, ಪ್ರಾಣೇಶ್, ಪ್ರೊ.ಕೃಷ್ಣೇಗೌಡ, ನ್ಯಾ.ಸಂತೋಷ್ ಹೆಗ್ಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಸಾಧಕರ ಸೀಟ್ ಮೇಲೆ ಕೂತಿದ್ದರು. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಹಾಗಾದ್ರೆ, ಇನ್ನುಳಿದ ಎರಡು ವಾರಾಂತ್ಯಗಳಲ್ಲಿ ಯಾವ ಸೆಲೆಬ್ರಿಟಿ ಭಾಗವಹಿಸಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದೆ. ಆ ಕುತೂಹಲಕ್ಕೆ ನಾವು ಬ್ರೇಕ್ ಹಾಕುತ್ತಿದ್ದೇವೆ. ಮುಂದೆ ಓದಿರಿ...

  ಸಾಧಕರ ಸೀಟ್ ಮೇಲೆ ಕೂರುತ್ತಾರಂತೆ ಗಣೇಶ್.!

  ಸಾಧಕರ ಸೀಟ್ ಮೇಲೆ ಕೂರುತ್ತಾರಂತೆ ಗಣೇಶ್.!

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸುತ್ತಾರಂತೆ. ಇನ್ನೆರಡು ವಾರಾಂತ್ಯಗಳ ಸಂಚಿಕೆಗಳ ಪೈಕಿ, ಗಣೇಶ್ ಭಾಗವಹಿಸುವ ಸಂಚಿಕೆಯೂ ಪ್ರಸಾರ ಆಗಲಿದೆ ಎಂದು ಜೀ ಕನ್ನಡ ವಾಹಿನಿಯ ಮೂಲಗಳು ತಿಳಿಸಿವೆ.

  ಮಾಲಾಶ್ರೀ ಮೇಡಂ ಬರ್ತಾರೆ.!

  ಮಾಲಾಶ್ರೀ ಮೇಡಂ ಬರ್ತಾರೆ.!

  ಮೂಲಗಳ ಪ್ರಕಾರ, ಕನ್ನಡ ಚಿತ್ರರಂಗದ ಕನಸಿನ ರಾಣಿ... ಲೇಡಿ ರ್ಯಾಂಬೋ... ಮಾಲಾಶ್ರೀ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಹಿರೇಮಗಳೂರು ಕಣ್ಣನ್

  ಹಿರೇಮಗಳೂರು ಕಣ್ಣನ್

  ಹಿರೇಮಗಳೂರು ಕಣ್ಣನ್ ಕೂಡ ಸಾಧಕರ ಸೀಟ್ ಮೇಲೆ ಕೂರುವ ಸಾಧ್ಯತೆ ಇದೆ.

  ನಟಿ ಶ್ರುತಿ

  ನಟಿ ಶ್ರುತಿ

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ನಟಿ ಶ್ರುತಿ ರವರ ಬಳಿ ಜೀ ಕನ್ನಡ ವಾಹಿನಿ ಮಾತುಕತೆ ನಡೆಸಿದೆ. ಶ್ರುತಿ ಗ್ರೀನ್ ಸಿಗ್ನಲ್ ಕೊಟ್ಟರೆ, ವಾರಾಂತ್ಯದಲ್ಲಿ ಶ್ರುತಿ ರವರ ಜೀವನ ಚರಿತ್ರೆ ಅನಾವರಣ ಆಗುವುದು ಖಚಿತ.

  English summary
  Kannada Actress Malashri, Golden Star Ganesh to participate in Zee Kannada Channel's popular show 'Weekend With Ramesh-3'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X