For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಬಿಗ್‌ಬಾಸ್ ಆರಂಭ: ಇಲ್ಲಿದೆ ಸ್ಪರ್ಧಿಗಳ ಪಟ್ಟಿ

  |

  ಮಲಯಾಳಂ ಬಿಗ್‌ಬಾಸ್ ಅದ್ಧೂರಿಯಾಗಿ ನಿನ್ನೆ (ಫೆಬ್ರವರಿ 15) ರಂದು ಆರಂಭವಾಗಿದೆ. ನಟ ಮೋಹನ್‌ಲಾಲ್ ಅವರು ನಿರೂಪಕರಾಗಿ ಒಬ್ಬೊಬ್ಬರೇ ಸ್ಪರ್ಧಾಳುಗಳನ್ನು ಬಿಗ್‌ಬಾಸ್ ಮನೆಗೆ ಆಹ್ವಾನಿಸಿದ್ದಾರೆ.

  ಒಟ್ಟು 14 ಮಂದಿ ಸ್ಪರ್ಧಿಗಳನ್ನು ಮೋಹನ್‌ಲಾಲ್ ಮನೆಗೆ ಆಹ್ವಾನಿಸಿದ್ದಾರೆ. ಈ 14 ಸ್ಪರ್ಧಿಗಳನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಬಾಕ್ಸರ್, ಸಿನಿಮಾ ನಟ-ನಟಿ, ಡಬ್ಬಿಂಗ್ ಕಲಾವಿದೆ. ಟಿವಿ ಕಲಾವಿದರು, ಸಾಮಾಜಿಕ ಜಾಲತಾಣ ಸ್ಟಾರ್‌ಗಳು ಹೀಗೆ ಹಲವು ಭಿನ್ನ ಕ್ಷೇತ್ರದ, ಭಿನ್ನ ವ್ಯಕ್ತಿತ್ವದ ಜನರನ್ನು ಒಂದೆಡೆ ಕೂಡಿ ಹಾಕಲಾಗಿದೆ.

  ಕೊರೊನಾ ಲಾಕ್‌ಡೌನ್ ಕಾರಣದಿಂದ ಅರ್ಧಕ್ಕೆ ಅಂತ್ಯವಾಗಿದ್ದ ಬಿಗ್‌ಬಾಸ್ 2 ನ ಸ್ಪರ್ಧಿಗಳನ್ನು ಮರಳಿ ಕರೆಸಲಾಗುತ್ತದೆ ಎನ್ನಲಾಗಿತ್ತು. ಆದರೆ ಅದಾಗಿಲ್ಲ. ಎಲ್ಲ ಹೊಸ ಸ್ಪರ್ಧಿಗಳನ್ನು ಕರೆತಂದಿದ್ದಾರೆ ಆಯೋಜಕರು.

  ಮೊದಲ ಸ್ಪರ್ಧಿ ನೋಬಿ ಮಾರ್ಕೋಸ್

  ಮೊದಲ ಸ್ಪರ್ಧಿ ನೋಬಿ ಮಾರ್ಕೋಸ್

  ಸ್ಟ್ಯಾಂಡಪ್ ಕಮಿಡಿಯನ್ ಮತ್ತು ನಟ ನೋಬಿ ಮಾರ್ಕೊಸ್ ಮಲಯಾಳಂ ಬಿಗ್‌ಬಾಸ್ 3 ನೇ ಮೊದಲ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ಇತಿಹಾಸ ತಜ್ಞ ಮತ್ತು ವಾಗ್ಮಿ ಅಡೋನಿ ಜಾನ್ ಸಹ ಸ್ಪರ್ಧಿಯಾಗಿದ್ದಾರೆ.

  ಉದ್ಯಮಿ, ಕ್ಯಾನ್ಸರ್ ಗೆದ್ದಿರುವ ಡಿಂಪಲ್ ಬಾಲ್

  ಉದ್ಯಮಿ, ಕ್ಯಾನ್ಸರ್ ಗೆದ್ದಿರುವ ಡಿಂಪಲ್ ಬಾಲ್

  ಉದ್ಯಮಿ, ಫ್ಯಾಷನ್ ಸಲಹೆಗಾರ್ತಿ, ಮನೋತಜ್ಞೆ ಡಿಂಪಲ್ ಭಾಲ್ ಸ್ಪರ್ಧಿಯಾಗಿ ಬಂದಿದ್ದಾರೆ. ಕ್ಯಾನ್ಸರ್ ಗೆದ್ದಿರುವ ಈಕೆ ಈ ಬಾರಿಯ ಪ್ರಮುಖ ಸ್ಪರ್ಧಿ. ಸತತವಾಗಿ ರೆಡಿಯೋ ಕಾರ್ಯಕ್ರಮ ನಡೆಸಿಕೊಟ್ಟ ಆರ್‌ಜೆ ಫಿರೋಜ್ ಬಿಗ್‌ಬಾಸ್ ಸ್ಪರ್ಧಿಯಾಗಿದ್ದಾರೆ.

  ವೇಯ್ಟ್ ಲಿಫ್ಟರ್ ಮಜಿಝಿಯಾ ಬಾನು

  ವೇಯ್ಟ್ ಲಿಫ್ಟರ್ ಮಜಿಝಿಯಾ ಬಾನು

  ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಮಣಿಕುಟ್ಟನ್. ಮೆಡಿಕಲ್ ವಿದ್ಯಾರ್ಥಿ ಹಾಗೂ ವೇಟ್‌ಲಿಫ್ಟರ್ ಆಗಿರುವ ಮಜಿಝಿಯಾ ಬಾನು ಸಹ ಸ್ಪರ್ಧಿ ಆಗಿದ್ದಾರೆ. ಈಕೆ ಬಾಕ್ಸರ್ ಆಗುವ ಕನಸು ಕಂಡಿದ್ದಾರೆ.

  ಐಶ್ವರ್ಯಾ ರೈ ಹೋಲುವ ಸೂರ್ಯಾ ಜೆ ಮೆನನ್

  ಐಶ್ವರ್ಯಾ ರೈ ಹೋಲುವ ಸೂರ್ಯಾ ಜೆ ಮೆನನ್

  ಐಶ್ವರ್ಯಾ ರೈ ಅನ್ನು ತುಸು ಹೋಲುವ ನಟಿ ಸೂರ್ಯಾ ಜೆ ಮೆನನ್ ಸಹ ಬಿಗ್‌ಬಾಸ್ ಗೆ ಬಂದಿದ್ದಾರೆ. ಡಿಸ್ಕೋ ಜಾಕಿ ಸಹ ಆಗಿರುವ ಈಕೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಗೀತಗಾರ್ತಿ ಲಕ್ಷ್ಮಿ ಜಯನ್ ಸಹ ಬಿಗ್‌ಬಾಸ್‌ ಮನೆಯಲ್ಲಿದ್ದಾರೆ.

  ನಟನಾಗುವ ಆಸೆ ಹೊಂದಿರುವ ಸಾಯಿ ವಿಷ್ಣು

  ನಟನಾಗುವ ಆಸೆ ಹೊಂದಿರುವ ಸಾಯಿ ವಿಷ್ಣು

  ವಿಜೆ ಸಾಯಿ ವಿಷ್ಣು ನಟನಾಗುವ ಆಸೆ ಹೊಂದಿದ್ದು, ಅದಕ್ಕೆ ಬಿಗ್‌ಬಾಸ್ ಸಹಾಯ ಮಾಡಲಿದೆ ಎಂದು ಬಿಗ್‌ಬಾಸ್‌ ಗೆ ಬಂದಿದ್ದಾರೆ. ಹಲವು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿರುವ ಅನೂಪ್ ಕೃಷ್ಣನ್ ಸಹ ಬಿಗ್‌ಬಾಸ್‌ಗೆ ಬಂದಿದ್ದಾರೆ.

  ಮೊಹಮ್ಮದ್ ರಂಜಾನ್ ಮತ್ತು ರಿತು ಮಂತ್ರಾ

  ಮೊಹಮ್ಮದ್ ರಂಜಾನ್ ಮತ್ತು ರಿತು ಮಂತ್ರಾ

  ಡಿ4 ಡಾನ್ಸರ್ ಶೋ ನ ವಿಜೇತ ಮೊಹಮ್ಮದ್ ರಂಜಾನ್ ಬಿಗ್‌ಬಾಸ್‌ನಲ್ಲಿದ್ದಾರೆ. ಈ ಬಾರಿಯ ಅತ್ಯಂತ ಕಿರಿಯ ಸ್ಪರ್ಧಿ ಈತ. ಮಾಡೆಲ್ ಮತ್ತು ಗಾಯಕಿ ಆಗಿರುವ ರಿತು ಮಂತ್ರಾ ಬಿಗ್‌ಬಾಸ್ ನಲ್ಲಿದ್ದಾರೆ. ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

  ಯೋಗ ತರಬೇತಿಗಾರ್ತಿ ಮತ್ತು ಡಬ್ಬಿಂಗ್ ಕಲಾವಿದೆ

  ಯೋಗ ತರಬೇತಿಗಾರ್ತಿ ಮತ್ತು ಡಬ್ಬಿಂಗ್ ಕಲಾವಿದೆ

  ಮಲೇಶ್ಯಾದಲ್ಲಿ ಜನಿಸಿದ ಸಂಧ್ಯಾ ಮನೋಜ್ ಬಿಗ್‌ಬಾಸ್‌ನಲ್ಲಿದ್ದಾರೆ. ಆಕೆ ಡಾನ್ಸರ್ ಹಾಗೂ ಯೋಗ ತರಬೇತುಗಾರ್ತಿ ಆಗಿದ್ದಾರೆ. ಕೊನೆಯದಾಗಿ ಬರಹಗಾರ್ತಿ, ಡಬ್ಬಿಂಗ್ ಕಲಾವಿದೆ ಆಗಿರುವ ಭಾಗ್ಯಲಕ್ಷ್ಮಿ ಸಹ ಸ್ಪರ್ಧೆಯಲ್ಲಿದ್ದಾರೆ.

  English summary
  Malayalam Bigg Boss season 03 started yesterday. Here is the 14 contestants list.
  Monday, February 15, 2021, 11:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X