For Quick Alerts
  ALLOW NOTIFICATIONS  
  For Daily Alerts

  TRPಯಲ್ಲಿ 'ಜೊತೆ ಜೊತೆಯಲಿ' ಹಿಂದಿಕ್ಕಿ ಮತ್ತೆ ನಂಬರ್ 1 ಆದ 'ಮಂಗಳ ಗೌರಿ ಮದುವೆ'

  |

  ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು ಬರುತ್ತವೆ. ವಾರಕ್ಕೊಂದು ಹೊಸ ಸೀರಿಯಲ್ ಶುರು ಆಗುತ್ತದೆ. ಆದರೆ, 'ಮಂಗಳಗೌರಿ ಮದುವೆ' ಧಾರಾವಾಹಿ ಮಾತ್ರ ತನ್ನ ಪ್ರೇಕ್ಷಕರ ವರ್ಗವನ್ನು ಬಿಟ್ಟುಕೊಡುತ್ತಿಲ್ಲ.

  ಈ ವಾರದ ಬಾರ್ಕ್ ರಿಪೋರ್ಟ್ ಟಿ ಆರ್ ಪಿ ರೇಟಿಂಗ್ ಹೊರಬಂದಿದೆ. ಈ ಪೈಕಿ 'ಮಂಗಳಗೌರಿ ಮದುವೆ' ನಂಬರ್ 1 ಸ್ಥಾನದಲ್ಲಿ ಇದೆ. ಪ್ರತಿವಾರವೂ ಬರುವ ಟಿ ಆರ್ ಪಿ ರೇಟಿಂಗ್ ನಲ್ಲಿ 'ಮಂಗಳ ಗೌರಿ ಮದುವೆ' ತನ್ನ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡು ಬಂದಿದೆ. ಎಷ್ಟೇ ಹೊಸ ಧಾರಾವಾಹಿ ಬಂದರೂ, ಈ ಸೀರಿಯಲ್ ಪೈಪೋಟಿ ನೀಡುತ್ತಿದೆ.

  ಮೆಟ್ರೋ ರೈಲಿನಲ್ಲಿ ಅನಿರುದ್ಧ್ - ಮೇಘ ಶೆಟ್ಟಿ 'ಜೊತೆ ಜೊತೆಯಲಿ'ಮೆಟ್ರೋ ರೈಲಿನಲ್ಲಿ ಅನಿರುದ್ಧ್ - ಮೇಘ ಶೆಟ್ಟಿ 'ಜೊತೆ ಜೊತೆಯಲಿ'

  ಇತ್ತೀಚಿಗೆ ಪ್ರಸಾರ ಆಗುತ್ತಿರುವ ಜೀ ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿ ದೊಡ್ಡ ಜನಪ್ರಿಯತೆ ಪಡೆದುಕೊಂಡಿದೆ. ಆದರೆ, ಈ ಧಾರಾವಾಹಿಯೂ ಟಿ ಆರ್ ಪಿ ಯಲ್ಲಿ ಕಲರ್ಸ್ ಕನ್ನಡದ 'ಮಂಗಳಗೌರಿ ಮದುವೆ'ಗಿಂತ ಹಿಂದೆ ಬಿದ್ದಿದೆ.

  ನಂಬರ್ 1 ಆದ 'ಮಂಗಳ ಗೌರಿ ಮದುವೆ'

  ನಂಬರ್ 1 ಆದ 'ಮಂಗಳ ಗೌರಿ ಮದುವೆ'

  'ಪುಟ್ಟಗೌರಿ ಮದುವೆ' ಧಾರಾವಾಹಿ ಕಿರುತೆರೆಯ ವೀಕ್ಷಕರಿಗೆ ಹುಚ್ಚು ಹಿಡಿಸಿದ್ದ ಧಾರಾವಾಹಿ. ಆ ಧಾರಾವಾಹಿ ಕೊನೆ ಆಗುತ್ತಿದ್ದಂತೆ ಅದೇ ಸಮಯಕ್ಕೆ 'ಮಂಗಳ ಗೌರಿ ಮದುವೆ' ಪ್ರಾರಂಭ ಆಯಿತು. ಕಥೆ, ಕಲಾವಿದರು ಎಲ್ಲ ಬದಲಾದರೂ, ವೀಕ್ಷಕ ಬಹಳ ಹಾಗೆಯೇ ಮುಂದುವರೆಯಿತು. ಪರಿಣಾಮ 'ಮಂಗಳಗೌರಿ ಮದುವೆ' ಟಿ ಆರ್ ಪಿ ಯಲ್ಲಿ ಅಗ್ರ ಸ್ಥಾನದಲ್ಲಿ ಇದೆ.

  'ವೀಕೆಂಡ್ ವಿತ್ ರಮೇಶ್'ನಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಬಂದಿದ್ದು ಇವರ ಸಂಚಿಕೆಗೆ.!'ವೀಕೆಂಡ್ ವಿತ್ ರಮೇಶ್'ನಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಬಂದಿದ್ದು ಇವರ ಸಂಚಿಕೆಗೆ.!

  3ನೇ ಸ್ಥಾನದಲ್ಲಿ 'ಜೊತೆ ಜೊತೆಯಲಿ'

  3ನೇ ಸ್ಥಾನದಲ್ಲಿ 'ಜೊತೆ ಜೊತೆಯಲಿ'

  ಹೊಸತನದ ನಿರೂಪಣೆ, ಮೇಕಿಂಗ್ ಶೈಲಿ ಮೂಲಕ ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡಿದ್ದ ಧಾರಾವಾಹಿ 'ಜೊತೆ ಜೊತೆಯಲಿ'. ಅದೇನೇ ಹವಾ ಮಾಡಿದರೂ 'ಜೊತೆ ಜೊತೆಯಲಿ' ಟಿ ಆರ್ ಪಿ ಯಲ್ಲಿ 'ಮಂಗಳಗೌರಿ ಮದುವೆ'ಗಿಂತ ಹಿಂದೆ ಇದೆ. 'ಮಂಗಳಗೌರಿ ಮದುವೆ' 6829 ಪಾಯಿಂಟ್ಸ್ ಪಡೆದಿದ್ದು, 'ಜೊತೆ ಜೊತೆಯಲಿ'ಗೆ 5361 ಪಾಯಿಂಟ್ಸ್ ಸಿಕ್ಕಿದೆ.

  ಟಾಪ್ ನಲ್ಲಿ ಜೀ ಕನ್ನಡದ ಕಾರ್ಯಕ್ರಮಗಳು

  ಟಾಪ್ ನಲ್ಲಿ ಜೀ ಕನ್ನಡದ ಕಾರ್ಯಕ್ರಮಗಳು

  ಕಲರ್ಸ್ ಕನ್ನಡದ 'ಮಂಗಳಗೌರಿ ಮದುವೆ' ಮದುವೆ ಮೊದಲ ಸ್ಥಾನದಲ್ಲಿ ಇದೆ. ಆದರೆ, ಉಳಿದ ಸ್ಥಾನದಲ್ಲಿ ಜೀ ಕನ್ನಡದ ಕಾರ್ಯಕ್ರಮಗಳೇ ತುಂಬಿಕೊಂಡಿದೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' (5562) ಎರಡನೇ ಸ್ಥಾನದಲ್ಲಿ, 'ನಾಗಿಣಿ' (4719) ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿ, 'ಯಾರೇ ನೀ ಮೋಹಿನಿ' (4524) ಐದನೇ ಸ್ಥಾನದಲ್ಲಿ ಇದೆ.

  'ಮಂಗಳಗೌರಿ ಮದುವೆ'ಯಲ್ಲಿ ತಿರುವು

  'ಮಂಗಳಗೌರಿ ಮದುವೆ'ಯಲ್ಲಿ ತಿರುವು

  'ಮಂಗಳಗೌರಿ ಮದುವೆ' ಧಾರಾವಾಹಿ ಈ ವಾರ ನಂಬರ್ ಸ್ಥಾನದಲ್ಲಿ ಇರಲು ಕಾರಣವೂ ಇದೆ. ಧಾರಾವಾಹಿ ಕಥೆ ಕುತೂಹಲಕಾರಿ ಹಂತಕ್ಕೆ ಬಂದಿದೆ. ಸತ್ತು ಹೋದ ಮಂಗಳ ಗೌರಿ ಮತ್ತೆ ಬದುಕುತ್ತಾಳಾ...?, ಇಲ್ವಾ...? ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇತ್ತು. ಆದರೆ, ಸಂಜೀವಿನಿ ಕುಡಿಸುವ ಮೂಲಕ, ಏನೇನೋ ಸರ್ಕಸ್ ಮಾಡಿ ನಿರ್ದೇಶಕರು ಆಕೆಯನ್ನು ಬದುಕಿಸಿದರು.

  ಟಾಪ್ ಗೇರಿದ ಕಲರ್ಸ್ ಕನ್ನಡ ಟಿ.ಆರ್.ಪಿ: ಎಲ್ಲ 'ಕಿರಿಕ್ ಪಾರ್ಟಿ' ಕರಾಮತ್ತು.!ಟಾಪ್ ಗೇರಿದ ಕಲರ್ಸ್ ಕನ್ನಡ ಟಿ.ಆರ್.ಪಿ: ಎಲ್ಲ 'ಕಿರಿಕ್ ಪಾರ್ಟಿ' ಕರಾಮತ್ತು.!

  ಟಾಪ್ 5 ಚಾನೆಲ್ ಗಳು

  ಟಾಪ್ 5 ಚಾನೆಲ್ ಗಳು

  ಕಾರ್ಯಕ್ರಮಗಳ ಪಟ್ಟಿಯಲ್ಲಿ 'ಮಂಗಳಗೌರಿ ಮದುವೆ' ಮೊದಲ ಸ್ಥಾನದಲ್ಲಿ ಇದೆ. ಆದರೆ, ವಾಹಿನಿಯ ಒಟ್ಟು ಪಿ ಆರ್ ಪಿ ಅಂತ ತೆಗೆದುಕೊಂಡರೆ, ಜೀ ಕನ್ನಡ ವಾಹಿನಿ ಮುಂದೆ ಇದೆ. ಜೀ ಕನ್ನಡ 476536 ಪಾಯಿಂಟ್ಸ್ ಪಡೆದಿದೆ. ಕಲರ್ಸ್ ಕನ್ನಡ 325540, ಉದಯ ಟಿವಿ 203444, ಸ್ಟಾರ್ ಸುವರ್ಣ 179468 ಹಾಗೂ ಉದಯ ಮೂವಿಸ್ 153283 ಪಾಯಿಂಟ್ಸ್ ಪಡೆದುಕೊಂಡಿದೆ.

  English summary
  Mangala Gowri Maduve serial got number 1 place in barc rating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X