»   » 'ಮಂಗ್ಳೂರು ಹುಡುಗಿ ಮತ್ತು ಹುಬ್ಳಿ ಹುಡುಗ'ನಿಗೆ ಸ್ವಯಂವರ

'ಮಂಗ್ಳೂರು ಹುಡುಗಿ ಮತ್ತು ಹುಬ್ಳಿ ಹುಡುಗ'ನಿಗೆ ಸ್ವಯಂವರ

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಯಲ್ಲಿ ಮೂಡಿ ಬರುತ್ತಿರುವ 'ಮಂಗ್ಳೂರು ಹುಡುಗಿ ಮತ್ತು ಹುಬ್ಳಿ ಹುಡುಗ' ಧಾರವಾಹಿಯಲ್ಲಿ ಈಗ ಸ್ವಯಂವರ ನಡೆಯುತ್ತಿದೆ. ಪರಸ್ಪರ ಪ್ರೀತಿಸುತ್ತಿದ್ದ ಮಂಗ್ಳೂರು ಹುಡುಗಿ ಮತ್ತು ಹುಬ್ಳಿ ಹುಡುಗನ ಮಧ್ಯೆ ಭಿನ್ನಾಭಿಪ್ರಾಯ ಬಂದು ಅವರೀಗ ಬೇರೆ ಹುಡುಗ ಮತ್ತು ಬೇರೆ ಹುಡುಗಿಯನ್ನ ವಿವಾಹವಾಗಲು ನಿರ್ಧರಿಸಿರುತ್ತಾರೆ.

ಅಮೂಲ್ಯ ಮತ್ತು ಅನಿರುದ್ಧರನ್ನ ಮದುವೆಯಾಗುವ ಬಯಕೆಯಲ್ಲಿ ನಾ ಮುಂದು ತಾ ಮುಂದು ಎಂದು ಜನ ದುಂಬಾಲು ಬೀಳುತ್ತಾರೆ. ಸ್ವಯಂವರದಲ್ಲಿ ಬರುವ ಸ್ಪರ್ಧಿಗಳಿಗೆ ವಿವಿಧ ಬಗೆಯ ಟಾಸ್ಕ್ ಗಳನ್ನ ನೀಡಲಾಗುವುದು.

Mangalore Hudgi Hubli Huduga - Swayamvara March 28th

ಹೋಳಿಗೆ ತಿನ್ನುವುದು, ಅಡುಗೆ ಸಾಮಾನುಗಳನ್ನ ಗುರುತಿಸುವುದು, ಪ್ರತಿಭಾ ಪ್ರದರ್ಶನ ಮುಂತಾದ ತಮಾಷೆ ಪರೀಕ್ಷೆಗಳನ್ನ ಸ್ವರ್ಧಿಗಳು ಭಾಗವಹಿಸುತ್ತಾರೆ.

Mangalore Hudgi Hubli Huduga - Swayamvara March 28th

ಯುಗಾದಿ ಹಬ್ಬದಂದು ನಡೆಯುವ ಈ ಸ್ವಯಂವರ ಕೆಲವರಿಗೆ ಬೇವು-ಮತ್ತೆ ಕೆಲವರಿಗೆ ಬೆಲ್ಲ ಆಗಲಿದೆ. ಆದರೆ, ಈ ಬೇವು-ಬೆಲ್ಲ, ಸಿಹಿ-ಕಹಿಗಳು ಸಮವಾಗಿ ಹಂಚಿಕೊಳ್ಳುವವರು ಮಾತ್ರ ಸ್ವಯಂವರದ ವಿಜಯಶಾಲಿ ವಧು-ವರರು ಆಗಲಿದ್ದಾರೆ. ಈ ಥ್ರಿಲ್ಲಿಂಗ್ ಕಹಾನಿ ಇದೇ ಮಾರ್ಚ್ 28 ರಂದು ಮಂಗಳವಾರ ಸಂಜೆ 7.30ಕ್ಕೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
'Mangalore Hudgi Hubli Huduga', Swayamvara Special Episode Telecasting Ugadi Festival on March 28th at Colors Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada