»   » ಅಮಿತಾಬ್ 'ಕೆಬಿಸಿ'ಯಲ್ಲಿ ಕೋಟಿ ಗೆದ್ದ ವೀರ ಮನೋಜ್

ಅಮಿತಾಬ್ 'ಕೆಬಿಸಿ'ಯಲ್ಲಿ ಕೋಟಿ ಗೆದ್ದ ವೀರ ಮನೋಜ್

Posted By:
Subscribe to Filmibeat Kannada
ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್ ಪತಿ-6' (ಕೆಬಿಸಿ-6) ಶೋದಲ್ಲಿ ಕಾಶ್ಮೀರದ ಮನೋಜ್ ಕುಮಾರ್ ರೈನಾ ರು. ಒಂದು ಕೋಟಿ ಗೆದ್ದಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಕಾಶ್ಮೀರದಿಂದ ಮೊದಲ ಸ್ಪರ್ಧಿಯಾಗಿದ್ದ ಮನೋಜ್, ಹಾಟ್ ಸೀಟ್ ನಲ್ಲಿ ಕುಳಿತು ಬರೋಬ್ಬರಿ ಕೋಟಿ ರು. ಗೆದ್ದಿದ್ದಾರೆ. ಇಂದು ರಾತ್ರಿ 8-30ಕ್ಕೆ (09 ಸೆಪ್ಟೆಂಬರ್ 2012) ಸೋನಿ ಟಿವಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಚ್ಚರಿಯೆಂಬಂತೆ ಈ ಮನೋಜ್ ಕುಮಾರ್ ರೈನಾ ಕಳೆದ ವರ್ಷಗಳಲ್ಲಿ ಸಾಕಷ್ಟು ಬಾರಿ ಈ ಶೋದಲ್ಲಿ ಭಾಗವಹಿಸಲು ಹರಸಾಹಸ ಪಟ್ಟಿದ್ದರು. 2000 ದಲ್ಲಿ ಕೆಬಿಸಿ ಶೋ ಪ್ರಾರಂಭವಾದಾಗಿನಿಂದ ಪ್ರಾರಂಭವಾದ ಇವರ ಪ್ರಯತ್ನ, ಕೊನೆಗೂ ಈಗ ಫಲ ನೀಡಿದೆ. ಅಷ್ಟೇ ಅಲ್ಲ, ಇವರೀಗ ಬರೋಬ್ಬರಿ ರು. ಒಂದು ಕೋಟಿಗೆ ಒಡೆಯರಾಗಿದ್ದಾರೆ. ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ನೀವಿದನ್ನು ನೋಡಬಹುದು.

ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡಲಿರುವ ಟಿವಿ ಗೇಮ್ ಶೋ 'ಕೌನ್ ಬನೇಗಾ ಕರೋಡಪತಿ- ಸೀಸನ್ 6', ಈ ತಿಂಗಳು, 07 ಸೆಪ್ಟಂಬರ್ 2012 ರಿಂದ ಪ್ರಾರಂಭವಾಗಿದೆ. ರಾತ್ರಿ 8-30ಕ್ಕೆ ಪ್ರಸಾರವಾಗುತ್ತಿರುವ ಈ ಶೋ ಈ ಬಾರಿಯೂ ತನ್ನ ಮೊದಲಿನ ಕ್ರೇಜ್ ಹಾಗೇ ಉಳಿಸಿಕೊಂಡಿದೆ. ಕಳೆದ 5 ಶೋಗಳೂ ಯಶಸ್ವಿಯಾಗಿದ್ದು ಇದೀಗ ಆರನೇ ಸೀಸನ್ ಪ್ರಾರಂಭವಾಗಿದೆ. ಅಮಿತಾಬ್ ನಡೆಸಿಕೊಟ್ಟ ಈ ಮೊದಲಿನ ಸೀಸನ್ ಗಳನ್ನು ನೋಡಿರುವ ಜಗತ್ತಿನ ಕೋಟ್ಯಾಂತರ ಮಂದಿ ಈ ಶೋಗೆ ಕಾತರದಿಂದ ಕಾದಿದ್ದರು.

ಈ ಸಂಬಂಧ ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತಾಬ್ "ನಮ್ಮ ಭಾರತದಲ್ಲಿ ಈಗಲೂ ಸಾಕಷ್ಟು ಮಂದಿ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಇದು ಸರ್ಕಾರಕ್ಕೂ ಗೊತ್ತಿರುವ ವಿಷಯವೇ. ಆದರೆ ಇಂಥ ವಿದ್ಯಾವಂತರು, ನಿರುದ್ಯೋಗಿಗಳು ನಾವು ಮಾಡುತ್ತಿರುವ ಈ ಕೆಬಿಸಿಯಲ್ಲಿ ಭಾಗವಹಿಸಬೇಕು. ಒಮ್ಮೆ ಅವರು ಸೆಲೆಕ್ಟ್ ಆದರೆ, ನಂತರ ಅವರು ತಮ್ಮ ಪ್ರತಿಭೆ ಹಾಗೂ ಅದೃಷ್ಟದ ಬಲದಿಂದ ಇಲ್ಲಿ ಹಣ ಗಳಿಸಬಹುದು.

ಮುಂದುವರಿದ ಅಮಿತಾಬ್, ನಿರುದ್ಯೋಗ ಮುಂತಾದ ಸಮಸ್ಯೆಗಳಿಗೆ ಕೇವಲ ಸರ್ಕಾರದ ಕಡೆಯಿಂದ ಮಾತ್ರ ಸಹಾಯ, ಪರಿಹಾರ ಅಪೇಕ್ಷಿಸಲಾಗದು. ಅದಕ್ಕೆ ಭಾರತದಲ್ಲಿರುವ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳೂ ಕೈಜೋಡಿಸಬೇಕು. ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಕೆಬಿಸಿ ಯಿಂದಲೇ ಪರಿಹಾರ ಸಿಗಬೇಕು ಎಂದು ನಿರೀಕ್ಷಿಸುವುದು ತಪ್ಪು. ಸರ್ಕಾರ ಹಾಗೂ ಕಾರ್ಪೋರೇಟ್ ಈ ಕೆಲಸ ಮಾಡುತ್ತಿವೆ, ಅದಿನ್ನೂ ಹೆಚ್ಚಾಗಿ ಮುಂದುವರಿಯಬೇಕಿದೆ" ಎಂದಿದ್ದಾರೆ.

ಒಟ್ಟಿನಲ್ಲಿ ಇಂದು ಒಂದು ಕೋಟಿ ರು ಹಣ ಗಳಿಸಿರುವ ಸ್ಪರ್ಧಿಯೊಬ್ಬರ ಆಟ ನೋಡುವ ಅವಕಾಶ ಎಲ್ಲರದಾಗಿದೆ. ಅಮಿತಾಬ್ ಈ ಶೋವನ್ನು ಮೊದಲಿನಷ್ಟೇ ಆಸ್ಥೆ ಹಾಗೂ ಆಕರ್ಷಕವಾಗಿ ನಡೆಸಿಕೊಡುತ್ತಿದ್ದಾರೆ. ಇಂದು ರಾತ್ರಿ 8-30ಕ್ಕೆ ಪ್ರಸಾರವಾಗಲಿರುವ ಮನೋಕ್ ಕುಮಾರ್ ರೈನಾ ಶೋ ನೋಡಲು ಬಹಳಷ್ಟು ಕಾಶ್ಮೀರಿಯನ್ನರು ಹಾಗೂ ಕೆಬಿಸಿ ಅಭಿಮಾನಿಗಳು ಕಾದಿದ್ದಾರೆ. (ಏಜೆನ್ಸೀಸ್)

English summary
Bollywood Bog B Amitabh Bachchan hosted TV show KBC season 6 started from 07 September 2012. Today (09 September 2012), the episode of Kashmiri participant Manoj Kumar Raina, who won Rs. 1 Crore to telecast on Sony TV at Night 8-30 PM. 
 
Please Wait while comments are loading...