twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಮಾಯಾಮೃಗ ಧಾರಾವಾಹಿಯಲ್ಲಿ ಮೇಧಾ ವಿದ್ಯಾಭೂಷಣ್

    By Priya Dore
    |

    ಮಾಯಾಮೃಗ ಧಾರಾವಾಹಿ ಕಳೆದ 25 ವರ್ಷದ ಹಳೆಯದಾದರೂ, ಎಲ್ಲಾ ಜನರೇಷನ್‌ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾದ ಸೀರಿಯಲ್.‌ ಈಗಲೂ ಈ ಧಾರಾವಾಹಿಯನ್ನು ಯೂಟ್ಯೂಬ್‌ ನಲ್ಲಿ ನೋಡುವವರ ಸಂಖ್ಯೆ ಹೆಚ್ಚೇ ಇದೆ. ಈಗ ಇದೇ ಧಾರಾವಾಹಿಯ ಮುಂದುವರಿದ ಭಾಗವಾಗಿ ಮತ್ತೆ ಮಾಯಾಮೃಗ ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದೆ.

    ಈ ಮೂಲಕ ಟಿ ಎನ್‌ ಸೀತಾರಾಂ ಅವರು ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಈಗ ಮೂಡಿ ಬರುತ್ತಿರುವ ಮತ್ತೆ ಮಾಯಾಮೃಗದ ಕಥೆಯ ಎಳೆ ಹಳೆಯ ಧಾರಾವಾಹಿಯದ್ದೇ ಆಗಿದ್ದು, ಅವರ ಮಕ್ಕಳು ಮೊಮ್ಮಕ್ಕಳ ಕುರಿತು ಕಥೆ ಹೆಣೆಯಲಾಗಿದೆ.

    ಈಗ ಮತ್ತೆ ಮಾಯಾಮೃಗ ಧಾರಾವಾಹಿ ಹತ್ತಾರು ಕುತೂಹಲಗಳನ್ನು ಹೊತ್ತು ಪ್ರೇಕ್ಷಕರ ಮುಂದೆ ಬಂದಿದೆ. ಈ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳ ಪರಿಚಯವನ್ನು ಮಾಡಿಕೊಡಲಾಗುತ್ತಿದೆ. ಈಗಿನ ಕಾಲಕ್ಕೆ ತಕ್ಕಂತೆ ಧಾರಾವಾಹಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

    ಮತ್ತೆ ಮನ್ವಂತರದಲ್ಲಿ ನಾಯಕಿಯಾಗಿ ಆಯ್ಕೆ

    ಮತ್ತೆ ಮನ್ವಂತರದಲ್ಲಿ ನಾಯಕಿಯಾಗಿ ಆಯ್ಕೆ

    ಆಡಂಬರದ ಧಾರಾವಾಹಿಗಳ ನಡುವೆ ಸಿಂಪಲ್‌ ಆಗಿ ಅದ್ಧೂರಿತನವಿಲ್ಲದೆಯೂ ಮತ್ತೆ ಮಾಯಾಮೃಗ ಮೂಡಿ ಬರುತ್ತಿರುವುದು ವಿಶೇಷವೇ. ಇನ್ನು ಮತ್ತೆ ಮಾಯಾಮೃಗದಲ್ಲಿ ಶ್ರೀ ವಿದ್ಯಾಭೂಷಣರ ಮಗಳು ಮೇಧಾ ನಟಿಸುತ್ತಿದ್ದಾರೆ. ಮೇಧಾ ಅವರು ಸಾಂಸ್ಕೃತಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಈಗ ಕಿರುತೆರೆಗೆ ಪಾದಾರ್ಪಣೆ ಮಾಡಿರುವುದು ಎಲ್ಲರಿಗೂ ಖುಷಿಯ ವಿಚಾರವೇ. ಚಿಕ್ಕವರಿದ್ದಾಗ ಮಾಯಾಮೃಗ, ಮನ್ವಂತರ ಧಾರಾವಾಹಿಗಳನ್ನು ನೋಡುತ್ತಾ ಬೆಳೆದ ಮೇಧಾ ಅವರು ಈಗ ಅದೇ ಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿರುವುದು ಖುಷಿಯ ಸಂಗತಿ ಎಂದು ಅವರ ಮನೆಯವರು ಸಂತಸಗೊಂಡಿದ್ದಾರೆ. ಮೇಧಾ ಅವರು ಸೀತಾರಾಂ ಅವರ ಮತ್ತೆ ಮನ್ವಂತರ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಮತ್ತೆ ಮನ್ವಂತರ ಕಾರಣಾಂತರಗಳಿಂದ ಪ್ರಸಾರ ಕಾಣಲಿಲ್ಲ.

    ಪ್ರೇಕ್ಷಕರ ಗಮನ ಸೆಳೆದ ಪಾತ್ರ

    ಪ್ರೇಕ್ಷಕರ ಗಮನ ಸೆಳೆದ ಪಾತ್ರ

    ಈಗ ಮೇಧಾ ಅವರು ಮತ್ತೆ ಮಾಯಾಮೃಗ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಧಾರಾವಾಹಿಯಲ್ಲಿ ಮಾಳವಿಕಾ ಅವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಐ ಓದಿ ಚೀಫ್‌ ಇಂಜಿನಿಯರ್‌ ಆಗಿದ್ದು, ಆಕೆಗೆ ಮದುವೆ ಬೇಡ ಅನ್ನೋ ಮನಸ್ಥಿತಿ ಇದ್ದರೆ, ಮಾಳವಿಕಾಗೆ ತನ್ನ ಮಗಳ ಮದುವೆ ಮಾಡುವ ಆಸೆ. ಈ ಕತೆ ಹೇಗೆ ಮುಂದೆ ಸಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಮೇಧಾ ಅವರ ಇತರೆ ಚಟುವಟಿಕೆಗಳ ಬಗ್ಗೆ ತಿಳೀಯೋಣ ಬನ್ನಿ

    ಇಂಜಿನಿಯರಿಂಗ್ ಓದಿರುವ ಮೇಧಾ

    ಇಂಜಿನಿಯರಿಂಗ್ ಓದಿರುವ ಮೇಧಾ

    ಮೇಧಾ ಅವರ ತಂದೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದವರು. ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಅವರು ಸುಮಾರು 24 ವರ್ಷಗಳ ಕಾಲ ಸ್ವಾಮೀಜಿಯಾಗಿ ನಂತರ ಗೃಹಸ್ಥಾಶ್ರಮ ಪ್ರವೇಶಿಸಿದವರು. ಅವರ ಮಗಳಾದ ಮೇಧಾ ಅವರು ಕರ್ನಾಟಿಕ್ ಕ್ಲಾಸಿಕಲ್ ಸಂಗೀತವನ್ನು ಚಿಕ್ಕವಯಸ್ಸಿನಿಂದಲೇ ಅಭ್ಯಾಸ ಮಾಡಿಕೊಂಡಿದ್ದಾರೆ. ಈಗಾಗಲೇ ಇವರು ಹಾಡಿರುವ ದೇವರ ಹಾಡಿನ ಸಿಡಿಗಳು ಬಿಡುಗಡೆಯಾಗಿವೆ ಕೂಡ. ಹಾಡುಗಾರ್ತಿ ಅಷ್ಟೇ ಅಲ್ಲದೇ, ಮೇಧಾ ಅವರು ಕಥಕ್ ಡ್ಯಾನ್ಸರ್ ಕೂಡ ಹೌದು. ಇನ್ನು ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿಧ್ಯಾಭ್ಯಾಸವನ್ನು ಮಾಡಿದ್ದಾರೆ.

    ಸಂಗೀತವೇ ನನ್ನ ಉಸಿರು

    ಸಂಗೀತವೇ ನನ್ನ ಉಸಿರು

    ಶಾಲೆಯಲ್ಲಿರುವಾಗಲೇ ಮೇಧಾ ಅವರು ರಂಗಭೂಮಿ ಕಡೆಗೆ ಒಲವಿದ್ದವರು. ಈಗಲೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಕೆಲ ನಾಟಕಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಸೀತಾರಾಂ ಅವರಂತಹ ಪರಿಣಿತರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿರುವ ಮೇಧಾ ಅವರು ನಟನೆ ನನ್ನ ಜೀವನದ ಒಂದು ಭಾಗವಷ್ಟೇ ಎಂದು ಹೇಳಿದ್ದಾರೆ. ನಟನೆಗಿಂತಲೂ ಮೇಧಾ ಅವರ ಗುರಿ ಸಂಗೀತದ ಕಡೆಗಷ್ಟೇ ಕೇಂದ್ರೀಕರಿಸಿದೆ. ಸಂಗೀತ ನನ್ನ ಉಸಿರು, ಜೀವ ಎಂದು ಹೇಳಿರುವ ಮೇಧಾ ಅವರು ತಮ್ಮ ಬದುಕಲ್ಲಿ ಸಂಗೀತಕ್ಕಷ್ಟೇ ಪ್ರಾಧಾನ್ಯತೆಯನ್ನು ಕೊಡುವುದಾಗಿ ಹೇಳಿದ್ದಾರೆ.

    English summary
    medha vidyabhushan acting in mathe mayamruga serial and her other activities. Read on
    Thursday, November 3, 2022, 20:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X