For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್'ಗಾಗಿ ದಾಖಲೆಯ ಸಂಭಾವನೆ ಪಡೆದ ಮೋಹನ್ ಲಾಲ್.!

  By Bharath Kumar
  |

  ಭಾರತ ಟಿವಿಲೋಕದಲ್ಲಿ ಈಗ ದೊಡ್ಡ ಸದ್ದು ಮಾಡುತ್ತಿರುವುದು ಬಿಗ್ ಬಾಸ್ ಶೋ. ಹಿಂದಿಯ ಮೂಲಕ ಭಾರತಕ್ಕೆ ಕಾಲಿಟ್ಟ 'ಬಿಗ್ ಬಾಸ್' ಕ್ರಮೇಣ ಕನ್ನಡ, ತೆಲುಗು, ತಮಿಳು, ಬೆಂಗಾಳಿ ಈಗ ಮಲಯಾಳಂನಲ್ಲೂ ಶುರುವಾಗಿದೆ.

  ಮಲಯಾಳಂನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ನಿರೂಪಣೆ ಮಾಡ್ತಿದ್ದು, ಚೊಚ್ಚಲ ಎಪಿಸೋಡ್ ಈಗಾಗಲೇ ಆರಂಭವಾಗಿದೆ. ಇದೀಗ, ಮೋಹನ್ ಲಾಲ್ ಅವರ ಸಂಭಾವನೆ ದಕ್ಷಿಣ ಭಾರತದಲ್ಲಿ ದೊಡ್ಡ ಚರ್ಚೆಯಾಗಿದೆ.

  ಮಲಯಾಳಂ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರ.? ಮಲಯಾಳಂ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರ.?

  ಸದ್ಯ, ಮಲಯಾಳಂ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಬಿಗ್ ಬಾಸ್ ನಿರೂಪಣೆ ಮಾಡಲು ಬರೋಬ್ಬರಿ 12 ಕೋಟಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

  ಅಂದ್ಹಾಗೆ, ಇದು ಸಣ್ನ ಮೊತ್ತವಲ್ಲ. ಮೂಲಗಳ ಪ್ರಕಾರ ನಟ ಮೋಹನ್ ಲಾಲ್ ಒಂದು ಚಿತ್ರಕ್ಕೆ ಮೂರರಿಂದ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಾರಂತೆ. ಆ ಲೆಕ್ಕಾಚಾರದಲ್ಲಿ ನೋಡಿದ್ರೆ, ಇದು ಅದಕ್ಕಿಂತ ಮೂರು ಪಟ್ಟು ಹೆಚ್ಚು. ಆದ್ರೆ, ಈ ಮೊತ್ತ ಒಂದು ವರ್ಷಕ್ಕಾ ಅಥವಾ ಮೂರ್ನಾಲ್ಕು ವರ್ಷಕ್ಕಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

  'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!

  ಮೋಹನ್ ಲಾಲ್ ಅವರು ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನ ನಿರೂಪಣೆ ಮಾಡ್ತಿದ್ದು, ಈ ಬಗ್ಗೆ ಹಲವು ಶೋಗಳನ್ನ ನೋಡಿದ್ದಾರಂತೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಸುದೀಪ್, ತೆಲುಗಿನಲ್ಲಿ ನಾನಿ ಹಾಗೂ ತಮಿಳಿನಲ್ಲಿ ಕಮಲ್ ಹಾಸನ್ ಬಿಗ್ ಬಾಸ್ ನಿರೂಪಣೆ ಮಾಡ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಈಗಾಗಲೇ ಬಿಗ್ ಬಾಸ್ ಆರಂಭವಾಗಿದೆ.

  English summary
  According to a report Malayalam superstar Mohanlal has charged Rs 12 crore as remuneration for first season of Bigg Boss Malayalam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X