»   » ರಮೇಶ್ ಅವರ ಈ ಅದ್ಬುತ ಮಾತುಗಳು ನಿಮ್ಮ ಜೀವನ ಬದಲಿಸಬಹುದು

ರಮೇಶ್ ಅವರ ಈ ಅದ್ಬುತ ಮಾತುಗಳು ನಿಮ್ಮ ಜೀವನ ಬದಲಿಸಬಹುದು

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನೋಡುಗರಿಗೆ ಒಂದು ಸ್ಫೂರ್ತಿಯನ್ನು ನೀಡುತ್ತದೆ. ಸಾಧಕರ ಮಾತುಗಳ ಜೊತೆಗೆ ರಮೇಶ್ ಅವರ ಮಾತುಗಳು ಸಾಧನೆ ಮಾಡಬೇಕು ಅಂತ ಬಯಸುವವರಿಗೆ ಛಲ ಹುಟ್ಟಿಸುವಂತಿರುತ್ತದೆ.

ಪ್ರತಿ ಸಂಚಿಕೆಯಲ್ಲಿಯೂ ರಮೇಶ್ 'ಮತ್ತೆ ವೀಕೆಂಡ್ ಬಂದಿದೆ.. 9 ಗಂಟೆ ಆಗಿದೆ ಶುರು ಮಾಡೋಣ' ಅಂತ ಹೇಳಿ ಬಳಿಕ ಸಂಚಿಕೆಯ ಪ್ರಾರಂಭದಲ್ಲಿ ಒಂದೊಂದು ಸ್ಫೂರ್ತಿಯ ಮಾತನ್ನು ಹೇಳುತ್ತಿದ್ದರು. ಅದು ಕಾರ್ಯಕ್ರಮದ ಹೈಲೈಟ್ ನಲ್ಲಿ ಒಂದಾಗಿತ್ತು.

ಸ್ಪೂರ್ತಿಯಿಂದ.. ಖುಷಿಯಿಂದ.. ಪ್ರೀತಿಯಿಂದ ರಮೇಶ್ ಆಡಿದ ಮಾತುಗಳು ಮುಂದಿದೆ ಓದಿ....

'ಗೋ.. ವಿನ್ ದಿ ವರ್ಲ್ಡ್'

''ನಾಳೆ ಬೆಳ್ಳಗೆ ನಿಮ್ಮನ್ನು ಎಬ್ಬಿಸುವುದು ಒಂದು ಅಲಾರ್ಮ್ ಸೌಂಡ್ ಅಥವಾ ನಿಮ್ಮ ಅಮ್ಮನ ಕೂಗು ಆಗಿರಬಾರದು. ನಿಮ್ಮನ್ನು ನಿಮ್ಮ ಕನಸು ಎಬ್ಬಿಸಲಿ. ಆ ಕನಸನ್ನು ನನಸು ಮಾಡುವ ಛಲ ಎಬ್ಬಿಸಲಿ. ಗೋ.. ವಿನ್ ದಿ ವರ್ಲ್ಡ್'' - ರಮೇಶ್ ಅರವಿಂದ್, ನಟ

ನಂಬಿಕೆ ಇದ್ದರೆ ಆಗುತ್ತೆ

''ನಿಮ್ಮ ಕೈ ನಲ್ಲಿ ಆಗುತ್ತೆ ಅಂತ ನಂಬಿದರೆ ಆಗುತ್ತೆ. ನಿಮ್ಮ ಕೈ ನಲ್ಲಿ ಆಗಲ್ಲ ಅಂತ ನೀವೇ ಅಂದುಕೊಂಡರೆ ಖಂಡಿತ ಆಗಲ್ಲ. ನಿಮ್ಮ ಯೋಚನೆಗಳೇ ನಿಮ್ಮ ಜೀವನ'' - ರಮೇಶ್ ಅರವಿಂದ್, ನಟ

ಒಳಗಿನ ಶತ್ರು

''ನಿಮ್ಮ ಒಳಗಿನ ಶತ್ರುವನ್ನು ನೀವು ನಾಶ ಮಾಡಿಬಿಟ್ಟರೆ, ಬೇರೆ ಯಾವ ಹೊರಗಿನ ಶತ್ರುವೂ ನಿಮ್ಮನ್ನು ಏನೂ ಮಾಡೋಕ್ಕೆ ಆಗಲ್ಲ'' - ರಮೇಶ್ ಅರವಿಂದ್, ನಟ

ಆತ್ಮ ತೃಪ್ತಿ

''ಅಂಗಡಿಗೆ ಹೋಗಿ ಒಂದು ವಸ್ತು ತೆಗೆದುಕೊಳ್ಳುತ್ತೀರಾ.. ಅಂಗಡಿಯವರು 10 ರೂಪಾಯಿ ಎಕ್ಸಟ್ರಾ ಕೊಡುತ್ತಾರೆ. ಅದನ್ನ ಆರಾಮಾಗಿ ಜೇಬಿನಲ್ಲಿ ಇಟ್ಕೊಂಡು ಮನೆಗೆ ಹೋಗಬಹುದು. ಆದರೆ ಅದನ್ನು ವಾಪಸ್ ಕೊಡುವುದರಲ್ಲಿ ಒಂದು ಸಣ್ಣ ಸಂತೋಷ ಇದೆ ಅಲ್ವಾ... ಆಸ್ತಿ ಪಾಸ್ತಿ ಎಲ್ಲದಕ್ಕಿಂತ ದೊಡ್ಡದು ಆತ್ಮತೃಪ್ತಿ. ಆ ಆತ್ಮತೃಪ್ತಿಯ ರುಚಿ ಒಂದು ಸರಿ ನೋಡಿ. ನಿಮ್ಮ ಜೀವನದ ರುಚಿಯೇ ಬದಲಾಗುತ್ತೆ'' - ರಮೇಶ್ ಅರವಿಂದ್, ನಟ

ಕೇವಲವಾಗಿ ಕಾಣಬೇಡಿ

''ಒಬ್ಬ ಸ್ತ್ರೀ ಮಂಡಿಯೂರಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ ಅವಳನ್ನು ಅಬಲೆಯಾಗಿ.. ಕೇವಲವಾಗಿ ಕಾಣಬೇಡಿ. ಯಾಕಂದ್ರೆ, ಅವಳು ಎದ್ದು ನಿಂತರೇ ಅವಳು ಎಷ್ಟು ಉದ್ದ ಇದ್ದಾಳೆ ಅಂತ ನಾವು ಉಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ'' - ರಮೇಶ್ ಅರವಿಂದ್, ನಟ

ಪ್ರೀತಿ ನಿಶ್ಚರಣ

''ಪ್ರೀತಿ ನಿಶ್ಚರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು. ಯಾರನ್ನೂ ದ್ವೇಶಿಸಬೇಡಿ. ಆದರೆ ದ್ವೇಶಿಸಲೇ ಬೇಕು ಅಂದರೆ ಅದಕ್ಕೆ ಬಲವಾದ ಕಾರಣ ಇರಲಿ. ಆದರೆ ಪ್ರೀತಿಸುವುದಕ್ಕೆ ಮಾತ್ರ ಕಾರಣ ಹುಡುಕಬೇಡಿ'' - ರಮೇಶ್ ಅರವಿಂದ್, ನಟ

English summary
Motivational Quotes Of Ramesh Aravind in Zee Kannada channel's popular show 'Weekend with Ramesh'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada