»   » ಜೀ ಕನ್ನಡದಲ್ಲಿ ಮೊದಲ ಬಾರಿಗೆ ಪ್ರಸಾರ ಆಗಲಿದೆ ಪ್ರಿಯಾಂಕಾ 'ಮಮ್ಮಿ ಸೇವ್ ಮಿ'

ಜೀ ಕನ್ನಡದಲ್ಲಿ ಮೊದಲ ಬಾರಿಗೆ ಪ್ರಸಾರ ಆಗಲಿದೆ ಪ್ರಿಯಾಂಕಾ 'ಮಮ್ಮಿ ಸೇವ್ ಮಿ'

Posted By:
Subscribe to Filmibeat Kannada

ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯ ಹಾರರ್ ಥ್ರಿಲ್ಲರ್ ಸಿನಿಮಾ 'ಮಮ್ಮಿ ಸೇವ್ ಮಿ' ಮೊಟ್ಟ ಮೊದಲ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರ ಪ್ರಸಾರ ಆಗಲಿದೆ.

ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ

ನವ ನಿರ್ದೇಶಕ ಲೋಹಿತ್.ಎಚ್ ಎಂಬುವರು 'ಮಮ್ಮಿ ಸೇವ್ ಮಿ' ಚಿತ್ರವನ್ನು ಹಾಲಿವುಡ್ ರೇಂಜ್ ನ ಹಾರರ್ ಸಿನಿಮಾದಂತೆ ತಮ್ಮ ನಿರ್ದೇಶನದ ಮೂಲಕ ತೆರೆ ಮೇಲೆ ತಂದಿದ್ದರು. ಚಿತ್ರ ಮೊದಲ ದೃಶ್ಯದಿಂದ ಹಿಡಿದು ಕ್ಲೈಮ್ಯಾಕ್ಸ್ ವರೆಗೆ ಪ್ರೇಕ್ಷಕರಿಗೆ ಭಯಾನಕ ಅನುಭವ ನೀಡುವ ಎಲ್ಲಾ ಎಲಿಮೆಂಟ್ಸ್‌ಗಳನ್ನು ಹೊಂದಿದ್ದು, ಹಾರರ್ ಸಿನಿಮಾ ಪ್ರಿಯರಿಗೆ ಔಟ್ ಅಂಡ್ ಔಟ್ ಥ್ರಿಲ್ ನೀಡಲಿದೆ.

'Mummy Save Me' premiere in Zee Kannada tv on july 16th

ಪ್ರಿಯಾಂಕಾ ಉಪೇಂದ್ರ ಮತ್ತು ಯುವಿನಾ ಪಾರ್ಥವಿ ಅಭಿನಯದ ಈ ಚಿತ್ರ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿದ್ದಲ್ಲದೆ ಬಾಕ್ಸ್ ಆಫೀಸ್ ಗಳಿಕೆಯಲ್ಲು ಸಕ್ಸಸ್ ಆಗಿತ್ತು. ಅಲ್ಲದೇ ಈ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 30 ಲಕ್ಷಕ್ಕೆ ಸೇಲ್ ಆಗಿತ್ತು. ಥಿಯೇಟರ್ ನಲ್ಲಿ ಈ ಚಿತ್ರ ನೋಡಲು ಮಿಸ್ ಮಾಡಿಕೊಂಡವರು ಇದೇ ಭಾನುವಾರ (ಜುಲೈ 16) ಸಂಜೆ 4.30ಕ್ಕೆ ಜೀ ಕನ್ನಡ ವಾಹಿನಿ ಟ್ಯೂನ್ ಮಾಡಿ.

English summary
Kannada Actress Priyanka Upendra Starrer Kannada Movie 'Mummy Save Me' premiere in Zee Kannada TV on July 16th at 4.30 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada