For Quick Alerts
  ALLOW NOTIFICATIONS  
  For Daily Alerts

  Namratha Gowda: 'ನಾಗಿಣಿ 2' ನಟಿ ನಮ್ರತಾ ಟ್ರಿಪ್‌ನಲ್ಲಿ ಐಶ್ವರ್ಯಾ ಮಿಸ್ಸಿಂಗ್!

  By ಎಸ್ ಸುಮಂತ್
  |

  ನಾಡಿನ ಜನತೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವಾಗ ನಟಿ ನಮ್ರತಾ ಗೌಡ ತನ್ನ ಗ್ಯಾಂಗ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಒಂದೊಳ್ಳೆ ಬ್ರೇಕ್ ಬೇಕು ಎಂದು ಬಯಸುತ್ತಿದ್ದ ನಮ್ರತಾಗೆ ಈ ಬಾರಿ ಜೊತೆಯಾಗಿದ್ದು, ಭವ್ಯ ಗೌಡ ಅಂಡ್ ಫ್ರೆಂಡ್ಸ್. ಎಲ್ಲರೂ ಸೇರಿ ಒಂದೊಳ್ಳೆ ಟ್ರಿಪ್ ಪ್ಲ್ಯಾನ್ ಮಾಡಿದ್ದಾರೆ. ಅದನ್ನು ಸಕ್ಸಸ್ ಕೂಡ ಮಾಡಿದ್ದಾರೆ.

  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಹೊಸ ಟ್ರಿಪ್ ಹೋಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ನಾಗಿಣಿ 2' ಧಾರಾವಾಹಿ ಹೊಸ ಹೊಸ ಟ್ವಿಸ್ಟ್‌ಗಳನ್ನು ತೆಗೆದುಕೊಳ್ಳುತ್ತಿದ್ದು, ನಮ್ರತಾ ಗೌಡ ನಟನೆಗೆ ನೋಡುಗರು ಫಿದಾ ಆಗಿದ್ದಾರೆ. ಸದ್ಯ ನಾಗಮಣಿಯನ್ನು ಹುಡುಕುತ್ತಿರುವ ಶಿವಾನಿಗೆ ತನ್ನ ಪ್ರಿಯಕರ ಆದಿಶೇಷನಿಗೆ ಮರಳಿ ನೆನಪು ಭರಿಸುವುದು ಅಷ್ಟೇ ಮುಖ್ಯವಾಗಿದೆ.

  ಜಾಲಿ ಮೂಡ್‌ನಲ್ಲಿ ಭವ್ಯಾ ಅಂಡ್ ನಮ್ರತಾ

  ಜಾಲಿ ಮೂಡ್‌ನಲ್ಲಿ ಭವ್ಯಾ ಅಂಡ್ ನಮ್ರತಾ

  ಟ್ರಿಪ್ ಪ್ಲ್ಯಾನ್ ಅನ್ನು ಎಲ್ಲರೂ ಮಾಡ್ತಾರೆ. ಕಾಲೇಜ್ ಸ್ನೇಹಿತರು, ಉದ್ಯೋಗಿಗಳು, ಸ್ನೇಹಿತರು, ಹೀಗೆ ಟ್ರಿಪ್ ಅಂತ ಹೇಳಿದಾಗ ಒಂದು ದೊಡ್ಡ ಗುಂಪೇ ಇರುತ್ತೆ. ಹೊರಡುವಾಗ ಅದೆಷ್ಟೋ ಟ್ರಿಪ್‌ಗಳು ಠುಸ್ ಪಟಾಕಿ ಆಗಿರುತ್ತೆ.ಆದ್ರೆ ಟ್ರಿಪ್ ಪ್ಲ್ಯಾನ್ ಮಾಡಿದರೆ ನಮ್ರತಾ ಅಂಡ್ ಭವ್ಯ ರೀತಿಯಲ್ಲಿಯೇ ಇರಬೇಕು. ಯಾಕಂದ್ರೆ, ಜನವರಿ ಎಂಟರಂದು ಭೇಟಿ ಮಾಡಿದ್ದ ಭವ್ಯಾ ಮತ್ತು ನಮ್ರತಾ ತಮ್ಮ ಮುಂದಿನ ಟ್ರಿಪ್ ಬಗ್ಗೆ ಪ್ಲ್ಯಾನ್ ಮಾಡಿದ್ದರು. ಹೆಚ್ಚು ದಿನ ತೆಗೆದುಕೊಳ್ಳಲೇ ಇಲ್ಲ ಪ್ಲ್ಯಾನ್ ಅದಾಗಲೇ ಎಕ್ಸಿಕ್ಯೂಟ್ ಆಗಿದೆ.

  ನಮ್ರತಾ & ಭವ್ಯಾ ಹಬ್ಬ ಬಿಟ್ಟು ಹೊರಟಿದ್ದೆಲ್ಲಿಗೆ?

  ನಮ್ರತಾ & ಭವ್ಯಾ ಹಬ್ಬ ಬಿಟ್ಟು ಹೊರಟಿದ್ದೆಲ್ಲಿಗೆ?

  ಪ್ಲ್ಯಾನ್ ಮಾಡಿದ ಎಂಟೇ ದಿವಸದಲ್ಲಿ ತಾವಂದುಕೊಂಡಿದ್ದ ಸ್ಥಳಕ್ಕೆ ರೀಚ್ ಆಗಿದ್ದಾರೆ ನಮ್ರತಾ ಮತ್ತು ಭವ್ಯಾ. ಸುಂದರವಾದ ಕಾಡು, ಕಾಡಿನ ನಡುವೆ ಬ್ಯೂಟಿಫುಲ್ ರೆಸಾರ್ಟ್ ಅದಾಗಿದೆ. ಭವ್ಯಾ ಹಾಗೂ ನಮ್ರತಾ ಜೊತೆಗೆ ಇನ್ನು ಇಬ್ಬರು ಸೇರ್ಪಡೆಯಾಗಿದ್ದಾರೆ. ಅದುವೇ ಪ್ರಜ್ವಲಾ ಹಾಗೂ ಮೋಹನ್. ನಾಲ್ಕು ಜನ ಕಾಡಿನ ನಡುವೆ,ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಡ್ಯಾನ್ಸ್, ಹಾಡು, ರೀಲ್ಸ್ ಅಂತ ಎಂಜಾಯ್ ಮಾಡುತ್ತಿದ್ದಾರೆ. ಆ ಎಲ್ಲಾ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಐಶ್ವರ್ಯಾ ನಾಪತ್ತೆ

  ಐಶ್ವರ್ಯಾ ನಾಪತ್ತೆ

  ನಮ್ರತಾ ಅತಿ ಹೆಚ್ಚು ಕಾಣಿಸಿಕೊಂಡಿದ್ದು ಐಶ್ವರ್ಯಾ ಸಿಂಧೋಗಿ ಜೊತೆಗೆ. ಇಬ್ಬರು ಒಟ್ಟಿಗೆ 'ನಾಗಿಣಿ 2' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ನಮ್ರತಾ ಶಿವಾನಿಯಾಗಿ ನಟಿಸುತ್ತಿದ್ದರೆ, ಐಶ್ವರ್ಯಾ, ಮಾಯಾಂಗನೆ ಆಗಿ ನಟಿಸಿದ್ದಾರೆ. ಧಾರಾವಾಹಿಯಲ್ಲಿ ಇಬ್ಬರು ದುಷ್ಮನ್‌ಗಳಾಗಿದ್ದರೂ, ರಿಯಲ್ ಲೈಫ್‌ನಲ್ಲಿ ಇಬ್ಬರು ಆತ್ಮೀಯರು. ಹೀಗಾಗಿ ಎಲ್ಲಿಯೇ ಹೋದರೂ ಜೊತೆಯಾಗಿಯೇ ಹೋಗುತ್ತಾರೆ. ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಹೊಸ ಟ್ರಿಪ್‌ನಲ್ಲಿ ಐಶ್ವರ್ಯಾ ಕಾಣಿಸುತ್ತಿಲ್ಲ.

  ಅಂದು ಕೋಪ ಮಾಡಿಕೊಂಡಿದ್ದ ಐಶ್ವರ್ಯಾ

  ಅಂದು ಕೋಪ ಮಾಡಿಕೊಂಡಿದ್ದ ಐಶ್ವರ್ಯಾ

  ನಮ್ರತಾ ಗೌಡ ಇತ್ತೀಚೆಗೆ ಭವ್ಯಾ ಅವರನ್ನು ಭೇಟಿ ಮಾಡಿದಾಗ, ಫೋಟೊ ಹಂಚಿಕೊಂಡಿದ್ದರು. ಫೋಟೊ ಒಂದಕ್ಕೇನೆ ಕೋಪ ಮಾಡಿಕೊಂಡಿದ್ದ ಐಶ್ವರ್ಯಾ, ನಾನಿನ್ನು ಬದುಕಿದ್ದೀನಿ ಅಂತ ಉತ್ತರ ನೀಡಿದ್ದರು. ಬಳಿಕ ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ನಮ್ರತಾ ಗೌಡ, ಮುಂದಿನ ಟ್ರಿಪ್ ಪ್ಲ್ಯಾನ್ ಹಾಗೂ ಸಡನ್ ಭೇಟಿ ಎಂಬ ಕಾರಣಗಳನ್ನು ನೀಡಿದ್ದರು. ಅಷ್ಟು ಕೋಪಗೊಂಡಿದ್ದ ಐಶ್ವರ್ಯಾ ಇಂದು ಟ್ರಿಪ್‌ನಲ್ಲಿ ಕಾಣೆಯಾಗಿದ್ದಾರೆ.

  English summary
  Nagini 2 Serial Actress Namratha Gowda New Trip With Bhavya Videos Trending. Here is the details.
  Sunday, January 15, 2023, 19:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X