Just In
Don't Miss!
- News
ಗಣರಾಜ್ಯೋತ್ಸವ ದಿನದ ಫ್ಲೈಪಾಸ್ಟ್ ನೇತೃತ್ವ ವಹಿಸಲಿದ್ದಾರೆ ಸ್ವಾತಿ ರಾಥೋಡ್
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.25ರ ಚಿನ್ನ, ಬೆಳ್ಳಿ ದರ
- Sports
"ಸಿಡ್ನಿಯಲ್ಲಿ ನಾನು 30 ನಿಮಿಷ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು"
- Automobiles
ಪವರ್ಫುಲ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ಸ್ಕೋಡಾ ಕುಶಾಕ್
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜ್ಯಕ್ಕೆ 4ನೇ Rank ಪಡೆದಿದ್ದ ನಾರಾಯಣಮೂರ್ತಿ ಬಳಿ ತಂದೆ ಹೀಗೆ ಹೇಳಿದ್ದರಂತೆ.!
ಪ್ರಪಂಚದ ಅಗ್ರಗಣ್ಯ ಉದ್ಯಮಿಗಳ ಪೈಕಿ ಪ್ರಮುಖರಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಬಾಲ್ಯವನ್ನ ನೆನಪಿಸಿಕೊಂಡ ಅವರು ರಾಜ್ಯಕ್ಕೆ ನಾಲ್ಕನೇ Rank ಪಡೆದಿದ್ದಾಗ ತಂದೆ ಅವರ ಹೇಳಿದ ಮಾತು ಮೆಲುಕು ಹಾಕಿದರು.
ಮೈಸೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ನಾರಾಯಣ ಮೂರ್ತಿ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ Rank ಪಡೆದುಕೊಂಡಿದ್ದರಂತೆ.
ಚಪ್ಪಲಿ ಎಸೆದರೂ ದೇವದಾಸಿಯರ ಬದುಕು ಬದಲಿಸಿದ ಸುಧಾಮೂರ್ತಿ
ಈ ಸಂತಸವನ್ನ ಅವರ ತಂದೆಯ ಬಳಿ ಹೇಳಿಕೊಳ್ಳಲು ಹೋದಾಗ ಅವರ ಮಾತು ಅಚ್ಚರಿ ಉಂಟು ಮಾಡಿತ್ತಂತೆ. ನಾಲ್ಕನೇ Rank ಬಂದಿರುವುದರಿಂದ ಶಬ್ಬಾಶ್, ಪರವಾಗಿಲ್ಲ ಅಂತಾರೆ ಎಂದುಕೊಂಡು ಹೋದರಂತೆ. ಆದರೆ, ಅವರ ತಂದೆ ''ಉಳಿದ ಮೂರು Rank ಎಲ್ಲಿ' ಪ್ರಶ್ನಿಸಿದರಂತೆ.
ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ
ಇದನ್ನ ಕೇಳಿ ನಾರಾಯಣ ಮೂರ್ತಿ ಅವರು ಚಿಂತೆ ಮಾಡೋಕೆ ಶುರು ಮಾಡಿದರಂತೆ. ಆಮೇಲೆ ತಾಯಿ ಅವರ ಬಳಿ ಹೋಗಿ ಅಳಲು ಆರಂಭಿಸಿದರಂತೆ. 'ನಾನು ಇಷ್ಟು ಕಟ್ಟಪಟ್ಟು ರಾತ್ರಿ-ಹಗಲು ಓದಿ ನಾಲ್ಕನೇ Rank ಪಡೆದರೆ ಹೀಗೆ ಅಂತಾರಲ್ಲ' ಅಂತ. ಅದಕ್ಕೆ ಅವರ ತಾಯಿ ''ಅವರು ನಿನಗೆ ಹಾಗೆ ಹೇಳಿದ್ದು ಉತ್ತೇಜನ ಮಾಡೋಕೆ' ಅಂತ.
ನಂತರ ಪಿಯುಸಿ ಪರೀಕ್ಷೆಯಲ್ಲಿ ಮೂರನೇ Rank ಪಡೆದ ನಾರಾಯಣ ಮೂರ್ತಿ ಅವರು ಆ ವೇಳೆ ತಂದೆಯವರ ಜೊತೆ ಹೋಗಲಿಲ್ಲ ಎಂದು ನೆನಪು ಮೆಲುಕು ಹಾಕಿದರು.