Don't Miss!
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Sports
BGT 2023: ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು-ಕಾಶ್ಮೀರದ ಸ್ಪಿನ್ನರ್ಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ: ನಾಯಕ-ನಾಯಕಿ ಯಾರು ಗೊತ್ತಾ..?
ಮನರಂಜನಾ ವಾಹಿನಿಗಳು ಹೆಚ್ಚಾದಂತೆ, ಅದರಲ್ಲಿ ಮೂಡಿ ಬರುವ ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳು ಕೂಡ ಹೆಚ್ಚಾಗಿರುತ್ತವೆ. ಪ್ರತೀ ತಿಂಗಳು ಕೂಡ ಒಂದಲ್ಲ ಒಂದು ಹೊಸ ಕಾರ್ಯಕ್ರಮಗಳು ಇಲ್ಲವೇ ಧಾರಾವಾಹಿಗಳು ಮೂಡಿ ಬರುತ್ತವೆ.
ಧಾರಾವಾಹಿಗಳ ಬಗ್ಗೆ ಕೇಳುವುದೇ ಬೇಡ. ಒಮ್ಮೊಮ್ಮೆ ಒಂದೇ ದಿನ ಎರಡೆರಡು ವಾಹಿನಿಗಳಲ್ಲಿ ಹೊಸ ಧಾರಾವಾಹಿ ಶುರುವಾಗುತ್ತದೆ. ಪ್ರೇಕ್ಷಕರಿಗಂತೂ ಯಾವುದನ್ನು ನೋಡಬೇಕು, ಯಾವುದನ್ನು ಬಿಡಬೇಕು ಎಂಬುದೇ ಗೊತ್ತಾಗುವುದಿಲ್ಲ.
ತವರು
ಮನೆ
ಸೇರಿದ
ಅಮೂಲ್ಯ:
ವೇದಾಂತ್
ಹೆಂಡತಿ
ಮಾತನ್ನು
ಕೇಳುತ್ತಾನಾ..?
ಒಂದು ಧಾರಾವಾಹಿಗೂ ಮತ್ತೊಂದು ಧಾರಾವಾಹಿಗೂ ಕತೆಗಳು ವಿಭಿನ್ನವಾಗಿರುತ್ತದೆ. ಒಂದು ಕಾರ್ಯಕ್ರಮಕ್ಕಿಂತಲೂ ಮತ್ತೊಂದು ಕಾರ್ಯಕ್ರಮ ಉತ್ತಮವಾಗಿರುತ್ತದೆ. ಇದು ಪ್ರೇಕ್ಷಕರನ್ನು ಸಂಪೂರ್ಣವಾಗಿ ಗೊಂದಲಕ್ಕೊಳಗಾಗುವಂತೆ ಮಾಡಿ ಬಿಡುತ್ತದೆ.

ಹೊಸ ಧಾರಾವಾಹಿಗೆ ಸಹಿ ಹಾಕಿದ ನೇಹಾ
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಎಲ್ಲರೂ ಈ ಧಾರಾವಾಹಿಯನ್ನು ನೋಡಿದ್ದಾರೆ. ಸರಿ ಸುಮಾರು 6 ವರ್ಷಗಳ ಕಾಲ ಮೂಡಿ ಬಂದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಹಲವು ನಟ-ನಟಿಯರು ಫೇಮಸ್ ಆಗಿದ್ದು ಉಂಟು. ಕವಿತಾ ಗೌಡ, ನೇಹ ಗೌಡ, ರಶ್ಮೀ ಪ್ರಭಾಕರ್, ಚಂದನ್, ಅನಿಕಾ ಸಿಂಧ್ಯ ಹೀಗೆ ಹೇಳುತ್ತಿದ್ದರೆ, ಸಾಲು ಸಾಲು ಹೆಸರುಗಳನ್ನು ಹೇಳಬಹುದು. ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟ-ನಟಿಯರಿಗೆ ಒಳ್ಳೆಯ ಬ್ರೇಕ್ ಸಿಕ್ಕಿತ್ತು. ಧಾರಾವಾಹಿ ಮುಗಿದು ವರ್ಷಗಳೇ ಕಳೆದರೂ ಇನ್ನೂ ಈ ಸೀರಿಯಲ್ ನಲ್ಲಿ ಬಂದ ಪಾತ್ರಗಳನ್ನು ಜನ ಮರೆತಿಲ್ಲ.

ಕನ್ನಡ ಕಿರುತೆರೆಯಲ್ಲಿ ಚಂದು ಗೌಡ
ಇನ್ನು ಈ ಧಾರಾವಾಹಿಯಲ್ಲಿ ನಟಿಸಿದ ಗೊಂಬೆ ಪಾತ್ರಧಾರಿ ನೇಹಾ ಗೌಡ ಅವರನ್ನು ಇಂದಿಗೂ ಜನ ಗೊಂಬೆ ಎಂದೇ ಗುರುತಿಸುತ್ತಾರೆ. ನಟಿ ನೇಹಾ ಗೌಡ ಅವರು ಸದ್ಯ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ 9 ರಲ್ಲಿ ಕಾಣಿಸಿಕೊಂಡ ನೇಹಾ ಅವರು ಈ ಮತ್ತೆ ಕನ್ನಡದ ಕಿರುತೆರೆಗೆ ಎಂಟ್ರಿ ಕೊಡುವ ಸೂಚನೆಯನ್ನು ನೀಡಿದ್ದಾರೆ. ಇವರ ಜೊತೆಗೆ 'ಲಕ್ಷೀ ಬಾರಮ್ಮ' ಸೀರಿಯಲ್‌ನಲ್ಲಿ ನಟಿಸಿದ್ದ ಚಂದು ಗೌಡ ಅವರು ಕೂಡ ನೇಹಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇವರಷ್ಟೇ ಅಲ್ಲದೇ, ಚಂದು ಗೌಡ ಅವರು ಕೂಡ ಜೀ ತೆಲುಗು ಧಾರಾವಾಹಿ 'ತ್ರಿನಯನಿ'ಯಲ್ಲಿ ಕಾಣಿಸಿಕೊಂಡಿದ್ದರು.

ನೇಹಾ ಗೌಡ ಜೋಡಿಯಾಗಲಿರುವ ಸಿದ್ಧಾರ್ಥ್
'ಅಗ್ನಿಸಾಕ್ಷಿ' ಧಾರಾವಾಹಿ ಸುಮಾರು 7 ವರ್ಷಗಳ ಕಾಲ ಪ್ರಸಾರವನ್ನು ಕಂಡಿತ್ತು. ಕೆಲ ಪಾತ್ರಗಳು ಬದಲಾದರೂ ಕೂಡ ಧಾರಾವಾಹಿ ಮೇಲಿನ ಕುತೂಹಲಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಂಡಿದ್ದವು. 2013ರಲ್ಲಿ ಶುರುವಾದ ಅಗ್ನಿಸಾಕ್ಷಿ ಧಾರಾವಾಹಿ 2019ರ ಡಿಸೆಂಬರ್ ನಲ್ಲಿ ಮುಕ್ತಾಯಗೊಂಡಿತು. ಈ ಧಾರಾವಾಹಿಯಲ್ಲಿ ನಾಯಕ ಪಾತ್ರ ಸಿದ್ಧಾರ್ಥ್ ಆಗಿ ಕಾಣಿಸಿಕೊಂಡಿದ್ದ ವಿಜಯ್ ಸೂರ್ಯ ಮದುವೆಯಾಗಿ ಧಾರಾವಾಹಿಯಿಂದ ಹೊರ ನಡೆದಿದ್ದರು. ಬಳಿಕ ಯಾವುದೇ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ಸೀರಿಯಲ್ ಒಂದಕ್ಕೆ ಗೆಸ್ಟ್ ರೋಲ್ ನಲ್ಲಿ ಬಂದಿದ್ದರು. ಇದೀಗ ವಿಜಯ್ ಸೂರ್ಯ ಮತ್ತೆ ಕಿರುತೆರೆ ಪಯಣ ಆರಂಭಿಸಲು ಮುಂದಾಗಿದ್ದಾರೆ.

ಇಬ್ಬರು ನಾಯಕರು, ಒಬ್ಬಳೇ ನಾಯಕಿ
ನಟಿ ನೇಹಾ ಗೌಡ, ಚಂದು ಗೌಡ ಹಾಗೂ ವಿಜಯ್ ಸೂರ್ಯ ಮೂವರ ಕಾಂಬಿನೇಷನ್ ನಲ್ಲಿ ಧಾರಾವಾಹಿಯ ಶೂಟಿಂಗ್ ಒಂದು ಪ್ರಾರಂಭವಾಗಿದೆ. ಇದರಲ್ಲಿ ನಾಯಕಿ ಒಬ್ಬರಾದರೂ ನಾಯಕ ಇಬ್ಬರಂತೆ. ಟ್ರಯಾಂಗಲ್ ಲವ್ ಸ್ಟೋರಿಯನ್ನು ಹೊತ್ತು ಈ ಧಾರಾವಾಹಿ ಮೂಡಿ ಬರುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ ಎಂಬ ಮಾಹಿತಿಯೂ ಇದೆ. ಇನ್ನು ಧಾರಾವಾಹಿಯ ಹೆಸರಿನ ಬಗ್ಗೆ ನಿಮಗೆಲ್ಲಾ ಕುತೂಹಲವಿದ್ದೇ ಇದೆ ಎಂಬುದು ಗೊತ್ತಿದೆ. ಟ್ರಯಾಂಗಲ್ ಲವ್ ಸ್ಟೋರಿ ಇರುವ ಸೀರಿಯಲ್‌ಗೆ 'ಲಚ್ಚಿ' ಎಂಬ ಹೆಸರನ್ನು ಇಡಲಾಗಿದೆ. ಇನ್ನು ಈ ಧಾರಾವಾಹಿ ಯಾವಾಗ ಪ್ರಸಾರ ಕಾಣಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.