For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್'ಗೆ ಮತ್ತೆ ಬಂದ 'ಗೊಂಬೆ': ಹಲವು ಅನುಮಾನ, ಹಲವು ಚರ್ಚೆ.!

  |
  Bigg Boss Kannada Season 6: ಬಿಗ್ ಬಾಸ್'ಗೆ ಮತ್ತೆ ಬಂದ 'ಗೊಂಬೆ': ಹಲವು ಅನುಮಾನ, ಹಲವು ಚರ್ಚೆ.!

  ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಬಿಗ್ ಬಾಸ್ ಸಂಪ್ರದಾಯದಂತೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಹೊಸ ಸ್ಪರ್ಧಿ ಅಥವಾ ಅದೇ ಆವೃತ್ತಿಯಲ್ಲಿ ಮನೆಯಿಂದ ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳಿಗೆ ಅವಕಾಶ ಕೊಡುವುದನ್ನ ನೋಡಿದ್ದೀವಿ.

  ಆದ್ರೆ, ಇದೇ ಮೊದಲ ಸಲ ಹಳೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಒಬ್ಬರನ್ನ ಮತ್ತೊಮ್ಮೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇನ್ನೊಂದು ಸೀಸನ್ ಗೆ ಕಳುಹಿಸಲಾಗಿದೆ. ಹೌದು, ಐದನೇ ಆವೃತ್ತಿಯಲ್ಲಿ ಫಿನಾಲೆ ದಿನದವರೆಗೂ ಮನೆಯಲ್ಲಿದ್ದ ನಿವೇದಿತಾ ಈಗ ಮತ್ತೆ ಸ್ಪರ್ಧಿಯಾಗಿ ಬಿಗ್ ಮನೆಗೆ ಗೃಹಪ್ರವೇಶ ಮಾಡಿದ್ದಾರೆ.

  ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ 'ಬಿಗ್' ಮನೆಗೆ ಬಂದಿದ್ದು ಒಬ್ಬರಲ್ಲ, ಮೂವರು.!

  ಇದು ಹಲವು ಅನುಮಾನಗಳಿಗೆ, ಹಲವು ಚರ್ಚೆಗೆ ಕಾರಣವಾಗಿದೆ. ನಿಜಕ್ಕೂ ಸ್ಪರ್ಧಿಯಾಗಿಯೇ ಹೋಗಿದ್ದಾರಾ ಅಥವಾ ಒಂದೆರೆಡು ದಿನ ಇರೋದಕ್ಕೆ ಹೋಗಿದ್ದಾರಾ ಎಂಬ ವಿಷ್ಯ ಡಿಬೇಟ್ ಆಗ್ತಿದೆ. ಬಟ್, ನಿವೇದಿತಾ ಬಿಗ್ ಬಾಸ್ ಮನೆಗೆ ಮತ್ತೆ ಹೋಗಬಹುದು ಎಂಬ ಸುಳಿವು ಮೊದಲ ದಿನವೇ ಸಿಕ್ಕಿತ್ತು. ಅದು ಹೇಗೆ? ಮುಂದೆ ಓದಿ.....

  ಮೊದಲ ದಿನವೇ ಸುದೀಪ್ ಬಳಿ ಕೇಳಿದ್ರು ಗೊಂಬೆ

  ಮೊದಲ ದಿನವೇ ಸುದೀಪ್ ಬಳಿ ಕೇಳಿದ್ರು ಗೊಂಬೆ

  ಬಿಗ್ ಬಾಸ್ ಆರಂಭವಾದ ಮೊದಲ ದಿನ ನಿವೇದಿತಾ ಗೌಡ, ಅರುಣ್ ಸಾಗರ್ ಹಾಗೂ ಶ್ರುತಿ ಅತಿಥಿಯಾಗಿ ಬಂದಿದ್ದರು. ಈ ವೇಳೆ ಗೊಂಬೆ ಮಾತನಾಡುತ್ತಾ, 'ಸುದೀಪ್ ಬಳಿ ನಾನು ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ಬೇಕು, ಚಾನ್ಸ್ ಸಿಕ್ಕರೇ ಖಂಡಿತಾ ಹೋಗ್ತೀನಿ' ಅಂತ ಹೇಳಿಕೊಂಡಿದ್ದರು. ಅದಕ್ಕೆ ಸುದೀಪ್ 'ಈ ಸಲ ಹೋದ್ರೆ ಏನ್ ಮಾಡ್ತೀರಾ' ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಗೊಂಬೆ, 'ಈ ಸಲ ಚೆನ್ನಾಗಿ ಎಂಜಾಯ್ ಮಾಡ್ತೀನಿ'' ಅಂತ ಹೇಳಿದ್ರು.

  ಈ ಜೂನಿಯರ್ ನಿವೇದಿತಾ ಗೌಡ ಅವರ ಪ್ರತಿಭೆ ನೋಡಿದ್ರೆ ಬೆರಗಾಗ್ತೀರಾ.!

  ಅಂದು ಹೇಳಿದ್ದರಿಂದಲೇ ಅವಕಾಶ ಸಿಕ್ತಾ?

  ಅಂದು ಹೇಳಿದ್ದರಿಂದಲೇ ಅವಕಾಶ ಸಿಕ್ತಾ?

  ಅಂದು ನಿವೇದಿತಾ ಗೌಡ ತಮ್ಮ ಆಸೆಯನ್ನ ಹೇಳಿಕೊಂಡಿದ್ದರು. ಇಂದು ಬಿಗ್ ಬಾಸ್ ಆಯೋಜರಿಗೆ ಹಳೇ ಆವೃತ್ತಿಯ ಸ್ಪರ್ಧಿಯಲ್ಲಿ ಯಾರಾದರು ಒಬ್ಬರನ್ನ ಮನೆಯೊಳಗೆ ಮತ್ತೆ ಕಳುಹಿಸುವ ಯೋಚನೆ ಬಂದಿದೆ. ಆಗ ಫಟ್ ಅಂತ ನಿವೇದಿತಾ ಗೌಡ ನೆನಪಾಗಿರಬೇಕು. ಹಾಗಾಗಿಯೇ, ಅಂದು ಗೊಂಬೆ ಕೇಳಿದಂತೆ ಈಗ ಬಿಗ್ ಬಾಸ್ ಚಾನ್ಸ್ ಕೊಟ್ಟೇ ಬಿಟ್ಟರು. ಹೀಗಾಗಿ, ಸೆಕೆಂಡ್ ಚಾನ್ಸ್ ಪಡೆದುಕೊಂಡಿದ್ದಾರೆ.

  ಚಂದನ್ ಶೆಟ್ಟಿ-ನಿವೇದಿತಾಗೆ 'ಅಕ್ಟೋಬರ್ 15' ಮರೆಯಲಾಗದ ದಿನ ಆಗೋಯ್ತು.!

  ಎಷ್ಟ ದಿನ ಇರ್ತಾರೆ

  ಎಷ್ಟ ದಿನ ಇರ್ತಾರೆ

  ಅಂದ್ಹಾಗೆ, ನಿವೇದಿತಾ ಗೌಡ ಮತ್ತೆ ಬಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳ ಜೊತೆ ಬಂದಾಗ, ಇವರು ಗೆಸ್ಟ್ ಇರಬಹುದು ಎಂದುಕೊಂಡಿದ್ದವರೇ ಹೆಚ್ಚು. ಆದ್ರೆ, ಸ್ವತಃ ನಿವೇದಿತಾ ಅವರೇ ''ನಾನು ವೈಲ್ಡ್ ಕಾರ್ಡ್ ಸ್ಪರ್ಧಿ'' ಎಂದಾಗಲೂ ಮನೆಯಲ್ಲಿದ್ದ ಕೆಲವರು ನಂಬಲಿಲ್ಲ. ಅದ್ಯಾವಾಗ ನಿವೇದಿತಾ ಲಗ್ಗೇಜ್ ಬಂತೋ ಆಗ ಫಿಕ್ಸ್ ಆದರು. ಈಗ ಕಾಡ್ತಿರುವುದು ಒಂದೇ, ನಿವೇದಿತಾ ಎಷ್ಟು ದಿನ ಇರ್ತಾರೆ ಅಂತ?

  ಐಟಂ ಹಾಡಿಗೆ ಹೆಜ್ಜೆ ಹಾಕಿದ 'ಬಿಗ್ ಬಾಸ್' ನಿವೇದಿತಾ ಗೌಡ.!

  ಸುಮ್ಮನೆ ಕಳುಹಿಸಿರಬಹುದು

  ಸುಮ್ಮನೆ ಕಳುಹಿಸಿರಬಹುದು

  ಅಂದ್ಹಾಗೆ, ನಿವೇದಿತಾ ಗೌಡ ಅವರನ್ನ ಈ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಳುಹಿಸಿದ್ದರೂ, ಹೆಚ್ಚು ದಿನ ಉಳಿಯಲ್ಲ ಮತ್ತು ಸುಮ್ಮನೆ ಟೈಂ ಪಾಸ್ ಗೆ ಇರಲಿ ಎಂದು ನಿವೇದಿತಾ ಅವರನ್ನ ಆಯ್ಕೆ ಮಾಡಿದ್ದಾರೆ ಎಂಬ ಅಭಿಪ್ರಾಯವೇ ಜನಸಾಮನ್ಯರಲ್ಲಿ ಹೆಚ್ಚಾಗಿದೆ.

  ಅಥವಾ ಸುಮ್ಮನೆ ಸ್ಪರ್ಧಿ ಅಂತ ಹೇಳಿ, ಒಂದೆರಡು ದಿನ ಇಟ್ಕೊಂಡು ವಾಪಸ್ ಕಳುಹಿಸಬಹುದಾ? ಎಂಬ ಅನುಮಾನ ಕಾಡ್ತಿದೆ.

  ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಸಲ

  ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಸಲ

  ಅಂದ್ಹಾಗೆ, ಬಿಗ್ ಬಾಸ್ 5 ಆವೃತ್ತಿಗಳು ಮುಗಿದು ಆರನೇ ಆವೃತ್ತಿ ನಡೆಯುತ್ತಿದೆ. ಇದುವರೆಗೂ ಈ ರೀತಿ ಹಳೇ ಆವೃತ್ತಿಯ ಸ್ಪರ್ಧಿಗಳು ಇನ್ನೊಂದು ಆವೃತ್ತಿಗೆ ಸ್ಪರ್ಧಿಯಾಗಿ ಬಂದಿಲ್ಲ. ಇನ್ನು ಅತಿಥಿಗಳಾಗಿ ಬಂದಿದ್ದಾರೆ. ಬಟ್, ಇದೊಂದು ಹೊಸ ಪ್ರಯತ್ನಕ್ಕೆ ಬಿಗ್ ಬಾಸ್ 6 ಸಾಕ್ಷಿಯಾಗಿದೆ.

  English summary
  Bigg boss kannada 5 contestant niveditha gowda has got wild card entry to bigg boss kannada season 6.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X