»   » ಫೇಸ್ ಬುಕ್ನಲ್ಲಿ ಸವಾಲ್ ಹಾಕೋರಿಗೆ 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಜವಾಬು!

ಫೇಸ್ ಬುಕ್ನಲ್ಲಿ ಸವಾಲ್ ಹಾಕೋರಿಗೆ 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಜವಾಬು!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಗಳು ಬರುತ್ತಲೇ ಇರುತ್ತೆ. ಇದರಲ್ಲಿ ಕೆಲವರು ಸಕರಾತ್ಮಕವಾಗಿ ಬರೆದರೇ, ಮತ್ತೆ ಕೆಲವರು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮತ್ತೆ ಕೆಲವರು, ಒಂದು ಹೆಜ್ಜೆ ಮುಂದೆ ಅಶ್ಲೀಲ ಪದಗಳನ್ನ ಕೂಡ ಬಳಕೆ ಮಾಡುತ್ತಾರೆ. ನೇರವಾಗಿ 'ಬಿಗ್ ಬಾಸ್' ಕಾರ್ಯಕ್ರಮಕ್ಕಾಗಲಿ, ಅಥವಾ 'ಬಿಗ್ ಬಾಸ್' ಅಯೋಜಕರನ್ನ ಟೀಕಿಸುತ್ತಾರೆ.['ಬಿಗ್ ಬಾಸ್' ತೆರೆ ಹಿಂದಿನ ಕಥೆ ಬಿಚ್ಚಿಟ್ಟ 'ಡೈರೆಕ್ಟರ್'!]

ಈ ಎಲ್ಲಾ ಬೆಳವಣಿಗೆಗಳ ಕುರಿತು 'ಬಿಗ್ ಬಾಸ್' ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಪ್ರತಿಕ್ರಿಯೆ ನೀಡಿದ್ದು, ಅಂತಹವರಿಗೆ ಏನ್ ಹೇಳಿದ್ದಾರೆ ಎಂದು ಮುಂದೆ ಓದಿ....

ಮೆಚ್ಚುಗೆಗಿಂತ, ಟೀಕೆಗಳ ಬಗ್ಗೆ ಆಸಕ್ತಿ!

''ನಮ್ಮ ತಂಡದ ಬಗ್ಗೆ ಬರುವ ಮೆಚ್ಚುಗೆಗಿಂತ, ನಮ್ಮ ತಂಡದ ಬಗ್ಗೆ ಬರುವ ಟೀಕೆಗಳ ಬಗ್ಗೆ ನನಗೆ ಆಸಕ್ತಿ ಹೆಚ್ಚಿದೆ. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಒಳ್ಳೆಯದಾದಾಗ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಅದನ್ನ ವಿನಯದಿಂದಲೇ ಸ್ವೀಕರಿಸಿದ್ದೀನಿ. ಜನರು ನನ್ನನ್ನ ಬೈದಾಗಲೂ ನಾನು ಬೇಜಾರು ಮಾಡಿಕೊಂಡಿಲ್ಲ''['ಬಿಗ್ ಬಾಸ್'ಗೆ ಪ್ರಥಮ್ ಆಯ್ಕೆ ಆಗಿದ್ದೇಗೆ? ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ]

'ಕಾಮೆಂಟ್'ಗಳಿಂದ ನನಗೆ ಸಹಾಯವಾಗಿದೆ!

''ಬಿಗ್ ಬಾಸ್' ಬಗ್ಗೆ ಆಗಲಿ ಅಥವಾ ನನ್ನನ್ನಾಗಲಿ ಸೋಶಿಯಲ್ ಮಿಡಿಯಾದಲ್ಲಿ ಕೇಳುವ ಎಲ್ಲ ಪ್ರಶ್ನೆಗಳು ನನ್ನ ಬೆಳವಣಿಗೆಗೆ ಬುನಾದಿಯಾಗಿದೆ. ಈ ಪ್ರಶ್ನೆಗಳನ್ನ ನನ್ನಲ್ಲಿ ಕೇಳಿಕೊಂಡಿದ್ದೇನೆ. ಮತ್ತು ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೀನಿ. ಆದ್ದರಿಂದ ನಾನೊಬ್ಬ ಉತ್ತಮ ವ್ಯಕ್ತಿಯಾಗುವುದಕ್ಕೆ ಸಾಧ್ಯವಾಗುತ್ತಿದೆ''['ಬಿಗ್ ಬಾಸ್'ಗೆ 'ಹ್ಯಾಟ್ಸ್ ಆಫ್' ಎಂದ ಕನ್ನಡ ಕುಲಕೋಟಿ ವೀಕ್ಷಕರು.!]

ಕೆಟ್ಟ ಕಾಮೆಂಟ್ ಮಾಡೋರ ಸಂಸ್ಕಾರದ ಬಗ್ಗೆ ಪ್ರಶ್ನೆ ಮೂಡತ್ತೆ!

''ಬಿಗ್ ಬಾಸ್' ಚೆನ್ನಾಗಿಲ್ಲ ಅಂದಾಗ ಬೇಜಾರಾಗಿಲ್ಲ. ಹೀಗೆ ಮಾಡಬೇಕಿತ್ತು ಅಂದಾಗಲೂ ಬೇಜಾರಾಗಿಲ್ಲ. ಆದ್ರೆ, ಅದು ಅದೇಷ್ಟೋ ಕಡೆ ಪರ್ಸನಲ್ ಆಗಿದೆ. ಎಷ್ಟೋ ಕಡೆ ಕೆಟ್ಟ ಪದಗಳನ್ನ ಬಳಸಿದ್ದಾರೆ. ಅದು ಬೇಜಾರಿಲ್ಲ. ಬಟ್, ಆ ಪದಗಳನ್ನ ಬಳಸಿದವರ ಸಂಸ್ಕಾರದ ಬಗ್ಗೆ ಪ್ರಶ್ನೆ ಮೂಡತ್ತೆ. ಯಾಕಂದ್ರೆ, ನೀವು ಏನೇ ಹೇಳಿದ್ರು ತೆಗೆದುಕೊಳ್ಳವುದಕ್ಕೆ ನಾನು ತಯಾರು ಇದ್ದೀನಿ. ಹಾಗಿದ್ಮೇಲೆ ಈ ಭಾಷೆ ಯಾಕೆ ಬಳಿಸುತ್ತೀರಾ?

ಎಲ್ಲವೂ ಗೌರವದಿಂದ ಸ್ವೀಕರಿಸಿದ್ದೇನೆ!

''ಕೊನೆಗೂ ನಾನು ಒಂದು ಅರ್ಥ ಮಾಡಿಕೊಂಡಿದ್ದೀನಿ. ಯಾಕಂದ್ರೆ, ಅವರು ನಿರೀಕ್ಷೆಗಳನ್ನ ಇದ್ದುದ್ದರಿಂದಲೇ ಆ ಭಾಷೆ ಬಳಸಿದ್ದಾರೆ ಅಂತ. ಇವೆಲ್ಲವನ್ನೂ ನಾನು ಅತಿ ವಿನಯದಿಂದ, ಬಹಳ ಗೌರವದಿಂದ ಸ್ವೀಕರಿಸಿದ್ದೇನೆ''.

ನಮ್ಮದೊಂದು ತಂಡವಿದೆ!

ಸೋಶಿಯಲ್ ಮಿಡಿಯಾದಲ್ಲಿ ಬರುವ ಕಾಮೆಂಟ್ ಗಳನ್ನ ಗಮನಿಸಲು ನಮ್ಮದೊಂದು ತಂಡವಿದೆ. ಬಂದ ಎಲ್ಲಾ ಕಾಮೆಂಟ್ ಗಳನ್ನ ಗಮನಿಸಿ ಇದು ಜನರಲ್ ಅಭಿಪ್ರಾಯ ಅಂತ ನಮಗೆ ತಿಳಿಸುತ್ತಾರೆ. ಆ ಸಲಹೆಗಳನ್ನ ತಗೊಂಡಿದ್ದೇವೆ. ಅದನ್ನ ಅಭಿವೃದ್ದಿ ಪಡಿಸುವುದಕ್ಕೆ ಗುದ್ದಾಡಿದ್ದೇವೆ. ಆದ್ದರಿಂದ ನಾವು 'ಬಿಗ್ ಬಾಸ್' ನಾಲ್ಕು ಸೀಸನ್ ಗಳನ್ನ ಯಶಸ್ವಿಯಾಗಿ ನೀಡುವುದಕ್ಕೆ ಸಾಧ್ಯವಾಯಿತು.

ನಿಮ್ಮ 'ಕಾಮೆಂಟ್'ಗಳೇ ನನಗೆ ಉತ್ತೇಜನ!

'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ನೀಡಿರುವ ಸಲಹೆಗಳು, ಚೆನ್ನಾಗಿಲ್ಲ ಎಂಬ ಕೆಟ್ಟ ಕಾಮೆಂಟ್ ಗಳು, ಇನ್ನೂ ಈ ರೀತಿ ಮಾಡಬಹುದಾಗಿತ್ತು ಎಂದು ಮಾಡಿರುವ ಕಾಮೆಂಟ್ ಗಳನ್ನ ಗಮನದಲ್ಲಿಟ್ಟುಕೊಂಡು ಮುಂದಿನ ಆವೃತ್ತಿಯನ್ನ ಅತ್ಯುತ್ತಮವಾಗಿ ನೀಡುವುದಕ್ಕೆ ಪ್ರಯತ್ನ ಪಡುತ್ತೇನೆ''[ಪರಮೇಶ್ವರ್ ಗುಂಡ್ಕಲ್ ಮಾತನಾಡಿರುವ ವಿಡಿಯೋ ನೋಡಿ]

English summary
BiggBoss Kannada Director and Colours Kannada and Colours Super Business Head Parameshwar Gundkal Has Gives Reaction to Facebook Commenters.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X