For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ನಲ್ಲಿ ಸಲ್ಲೂ ಜತೆ ದೀಪಾವಳಿ ಧಮಾಕ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸ್ಪರ್ಧಿಗಳು ಸಲ್ಮಾನ್ ಖಾನ್, ರಣವೀರ್ ಸಿಂಗ್, ಸಾನಿಯಾ ಮಿರ್ಜಾ, ಭಾರ್ತಿ ಸಿಂಗ್, ಲಾರೆನ್ ಗೊಟ್ಟಿಲೆಬ್ ಜತೆ ಸಂಭ್ರಮವನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ.

  ಸಲ್ಮಾನ್ ನಂತರ ರಣವೀರ್ ಮನೆಗೆ ಬಂದು ರಾಮಲೀಲ ಚಿತ್ರದ ಪ್ರಚಾರ ಕೈಗೊಂಡರೆ ಡ್ಯಾನ್ಸರ್ ಭಾರ್ತಿ ಸಿಂಗ್, ಲಾರೆನ್ ಮನೆಯಲ್ಲಿ ಕಾಣಿಸಿಕೊಂಡು ಸಂಭ್ರಮ ಹೆಚ್ಚಿಸಿದರು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ವಾರಾಂತ್ಯ ಸಲ್ಮಾನ್ ಜತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಮನೆ ಮಂದಿ ಜತೆ ವಿಡಿಯೋ ಮೂಲಕ ಮಾತುಕತೆ ನಡೆಸಿದರು.

  ಯುವರಾಜ ಚಿತ್ರದ ಹಾಡು ಹಾಡುವಂತೆ ಸಲ್ಮಾನ್ ಖಾನ್ ಗೆ ಕೋರಿಕೆ ಇಟ್ಟರು. ಸಲ್ಲೂ ಸಿಕ್ಕಿದ್ದೆ ಚಾನ್ಸ್ ಎಂದು ಸಾನಿಯಾ ಜತೆ ರೋಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದರು.ಮನೆಯಲ್ಲಿರುವ ಸ್ಪರ್ಧಿಗಳಿಗೆ ಸ್ವಲ್ಪ ಕಸರತ್ತು ನೀಡಿದ ಸಾನಿಯಾ ಮುಷ್ಟಿ ಯುದ್ಧ ನಡೆಸುವಂತೆ ಹೇಳಿದರು.

  ರಾಮಲೀಲ ಚಿತ್ರದ ಗೆಟೆಪ್ ನಲ್ಲೇ ಎಂಟ್ರಿ ಕೊಟ್ಟ ರಣವೀರ್ ಸಿಂಗ್ ಎಲ್ಲಿ ಅವ್ರಾಮ್ ಜತೆ ಒಂದಷ್ಟು ಹರಟೆ ಹೊಡೆದ. ಚಿತ್ರದ ಹಾಡಿಗೆ ಕುಣಿದ. ಭಾರ್ತಿ ಸಿಂಗ್ ಎಂಟ್ರಿ ಹಾಗೂ ಸ್ಪರ್ಧಿಗಳಿಗೆ ಕೊಟ್ಟ ಉಡುಗೊರೆ ಎಲ್ಲವೂ ಸುಂದರವಾಗಿ ಮೂಡಿ ಬಂದಿತು. ಸಂಗ್ರಾಮ್ ಸಿಂಗ್ ಭಾರ್ತಿ ಸಿಂಗ್ ಎತ್ತಿಕೊಂಡಿದ್ದು ಅದ್ಭುತ ಸೀನ್ ಆಗಿತ್ತು.

  'ಕಾಮಿಡಿ ನೈಟ್ಸ್ ವಿಥ್ ಕಮಲ್' ಕಾರ್ಯಕ್ರಮ ಖ್ಯಾತಿಯ ದಾದಿ ಮಾತ್ರ ವಿಚಿತ್ರ ಹಾವಭಾವಗಳ ಮನರಂಜನೆಗಿಂತ ಅಧಿಕವಾಗಿ ಕಿರಿಕಿರಿಯಾಗುವಂತೆ ಕಾಣಿಸಿಕೊಂಡು ಮನೆಯಿಂದ ತೆರಳಿದರು. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಸಂಭ್ರಮ ಕಲರ್ ಫುಲ್ ಆಗಿತ್ತು.

  ಮನೆಯೊಳಗೆ ಸಲ್ಮಾನ್

  ಮನೆಯೊಳಗೆ ಸಲ್ಮಾನ್

  ದೀಪಾವಳಿ ಸಂದರ್ಭದಲ್ಲಿ ಮನೆಗೆ ಸಲ್ಮಾನ್ ಖಾನ್ ಭೇಟಿ ಅಚ್ಚರಿ ವಿಷಯವಾಗಿತ್ತು.

  ಸಲ್ಲೂಗೆ ರಂಜನೆ

  ಸಲ್ಲೂಗೆ ರಂಜನೆ

  ಸಲ್ಮಾನ್ ಖಾನ್ ರಂಜಿಸಲು ಹಾಡು ಕುಣಿತ ಆಯೋಜಿಸಿದ್ದ ಕಾಮ್ಯಾ ಹಾಗೂ ಗೌಹರ್. ಚಿತ್ರದಲ್ಲಿ ಎಲ್ಲಿ ಡ್ಯಾನ್ಸ್

  ಗೌಹರ್ ಫುಲ್ ಖುಷ್

  ಗೌಹರ್ ಫುಲ್ ಖುಷ್

  ಗೆಳೆಯ ಕುಶಾಲ್ ಇಲ್ಲದೆ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡ ಗೌಹರ್ ಆಕರ್ಷಕ ಉಡುಪು ಧರಿಸಿ ಕಣ್ಮನ ಸೆಳೆದರು

  ದೇವರ ಪೂಜೆ

  ದೇವರ ಪೂಜೆ

  ಮನೆಗೆ ಎಂಟ್ರಿ ಕೊಟ್ಟ ಕೆಲ ಕಾಲದ ನಂತರ ಸಲ್ಮಾನ್ ಖಾನ್ ಎಲ್ಲರೊಟ್ಟಿಗೆ ಬೆರೆತು ದೇವರಿಗೆ ಪೂಜೆ, ಆರತಿ ಅರ್ಪಿಸಿದರು. ಲಕ್ಷ್ಮಿದೇವಿಗೆ ಎಲ್ಲಿ ಜತೆ ಸಲ್ಮಾನ್ ಆರತಿ ಬೆಳಗಿದ್ದು ವಿಶೇಷ

  ಸಲ್ಲೂಗೆ ರಂಜನೆ

  ಸಲ್ಲೂಗೆ ರಂಜನೆ

  ಮನೆಯಲ್ಲಿ ಕುಳಿತು ಸ್ಪರ್ಧಿಗಳು ನೀಡಿದ ಮನರಂಜನೆ ವೀಕ್ಷಿಸಿದ ಸಲ್ಮಾನ್

  ಅಪೂರ್ವ ಸೈಲಂಟ್

  ಅಪೂರ್ವ ಸೈಲಂಟ್

  ಏಳು ವಾರಗಳ ಬಿಗ್ ಬಾಸ್ ಮನೆಯಲ್ಲಿದ್ದು ಇತರೆ ಸ್ಪರ್ಧಿಗಳ ಜತೆ ಅಲ್ಲದೆ ಪ್ರೇಕ್ಷಕರ ಮನ ಗೆದ್ದಿದ್ದ ಅಪೂರ್ವ ಅವರು ದೀಪಾವಳಿ ಸಂಭ್ರಮಕ್ಕೂ ಮುನ್ನ ಮನೆಯಿಂದ ಎಲಿಮಿನೇಟ್ ಆಗಿದ್ದು ಅನ್ಯಾಯ ಎಂಬ ಕೂಗು ಸಾಮಾಜಿಕ ಜಾಲ ತಾಣಗಳಲ್ಲಿ ಎದ್ದಿದೆ. ಆದರೆ, ಈ ಬಗ್ಗೆ ಅಪೂರ್ವ ಹೆಚ್ಚು ಚರ್ಚೆ ನಡೆಸಲು ಇಷ್ಟಪಡಲಿಲ್ಲ.

  ಸಾನಿಯಾ ಜತೆ ಸಲ್ಲೂ

  ಸಾನಿಯಾ ಜತೆ ಸಲ್ಲೂ

  ಯುವರಾಜ ಚಿತ್ರದ ಹಾಡಿಗೆ ಸಲ್ಮಾನ್ ಜತೆ ಸಾನಿಯಾ ಡ್ಯಾನ್ಸ್

  ಮುಷ್ಟಿ ಯುದ್ಧ

  ಮುಷ್ಟಿ ಯುದ್ಧ

  ಸ್ಪರ್ಧಿಗಳಿಗೆ ಮುಷ್ಟಿಯುದ್ಧ ಆಟವಾಡುವಂತೆ ಹೇಳಿದ ಸಾನಿಯಾ ಮಿರ್ಜಾ

  ರಸನಿಮಿಷ

  ರಸನಿಮಿಷ

  ಎಲ್ಲಿ ಹೊಡೆದ ಡೈಲಾಗ್ ಗೆ ಫಿದಾ ಆದ ರಾಮಲೀಲ ನಾಯಕ ರಣವೀರ

  ಅರ್ಮಾನ್ ಜತೆ ಭಾರ್ತಿ

  ಅರ್ಮಾನ್ ಜತೆ ಭಾರ್ತಿ

  ಉಗ್ರಪ್ರತಾಪಿ ಅರ್ಮಾನ್ ನನ್ನು ಕುಣಿಸಿದ ಖ್ಯಾತ ನೃತ್ತ್ಯಗಾರ್ತಿ ಭಾರ್ತಿ ಸಿಂಗ್

  ಯಪ್ಪಾ ಏನ್ ಭಾರ

  ಯಪ್ಪಾ ಏನ್ ಭಾರ

  ಭಾರ್ತಿ ಸಿಂಗ್ ಳನ್ನು ಹೊರಲಾರದೆ ಹೊತ್ತ ಸಂಗ್ರಾಮ್

  ಮನೆಗೆ ಬಂದ ದಾದಿ

  ಮನೆಗೆ ಬಂದ ದಾದಿ

  ಮನೆಗೆ ಬಂದ ಕಾಮಿಡಿ ನೈಟ್ಸ್ ಮಿಥ್ ಕಮಲ್ ಕಾರ್ಯಕ್ರಮ ಖ್ಯಾತಿಯ ದಾದಿ

  ಲಾರೆನ್ ಜತೆ ಆಂಡಿ

  ಲಾರೆನ್ ಜತೆ ಆಂಡಿ

  ಲಾರೆನ್ ಗೊಟ್ಟಿಲೆಬ್ ಜತೆ ಮಾತುಕತೆ ನಡೆಸಿದ ವಿಜೆ ಆಂಡಿ

  English summary
  Bigg Boss 7 contestants celebrated Diwali with Salman Khan, Ranveer Singh, Sania Mirza, Bharti Singh and Lauren Gottlieb in the house. Ranveer Singh was on the show to promote his upcoming film Ram Leela. Sania Mirza was on stage, whereas Bharti Singh and Lauren Gottlieb were in the house doing what they do best to entertain the viewers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X