»   » ಬಿಗ್ ಬಾಸ್ 'ವಿನ್ನರ್-ರನ್ನರ್' ಯಾರು ಅಂತ ಭವಿಷ್ಯ ನುಡಿದ ಪ್ರಥಮ್!

ಬಿಗ್ ಬಾಸ್ 'ವಿನ್ನರ್-ರನ್ನರ್' ಯಾರು ಅಂತ ಭವಿಷ್ಯ ನುಡಿದ ಪ್ರಥಮ್!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4'....ಕೊನೆಯ ಹಂತಕ್ಕೆ ಕೇವಲ ಒಂದು ವಾರ ಮಾತ್ರ ಬಾಕಿಯಿದೆ. ಈಗಾಗಲೇ ಎಲ್ಲೇಲ್ಲೂ ಈ ಬಾರಿ 'ವಿನ್ನರ್' ಯಾರು ಎಂಬ ಚರ್ಚೆ ಶುರುವಾಗಿದೆ.

ಇದು 'ಬಿಗ್ ಬಾಸ್' ಮನೆಯ ಹೊರಗೆ ಮಾತ್ರವಲ್ಲ, 'ಬಿಗ್ ಬಾಸ್' ಮನೆಯ ಒಳಗೂ ಕೂಡ ಚರ್ಚೆ ಜೋರಾಗಿದೆ. ವಿಶೇಷ ಏನಪ್ಪಾ ಅಂದ್ರೆ, ಈ ಸೀಸನ್ ನಲ್ಲಿ 'ಬಿಗ್ ಬಾಸ್' ವಿಜಯಮಾಲೆ ಯಾರಿಗೆ ಒಲಿಯುತ್ತೆ ಎಂಬುದನ್ನ ಪ್ರಥಮ್ ಭವಿಷ್ಯ ನುಡಿದಿದ್ದಾರೆ.['ಬಿಗ್ ಬಾಸ್' ವಿನ್ನರ್ ಯಾರಾಗಬೇಕು.? ವೀಕ್ಷಕರ ಆಯ್ಕೆ.... ]

ಪ್ರಥಮ್ ಭವಿಷ್ಯ ಅಂದ್ರೆ, ಅದು ನಿಜ ಇರಬಹುದಾ ಎಂಬ ಕುತೂಹಲ ಹಲವರದ್ದು. ಯಾಕಂದ್ರೆ, ಇದುವರೆಗೂ ಪ್ರಥಮ್ ಹೇಳಿದ ಅದೇಷ್ಟೋ ವಿಷ್ಯಗಳು ನಿಜ ಆಗಿವೆ. ಹಾಗಾದ್ರೆ, ಪ್ರಥಮ್ ಪ್ರಕಾರ 'ಬಿಗ್ ಬಾಸ್ ಸೀಸನ್-4 ರ' ವಿನ್ನರ್ ಯಾರು, ಎರಡನೇ ಸ್ಥಾನ ಯಾರಿಗೆ, ಮೂರನೇ ಸ್ಥಾನ ಯಾರಿಗೆ ಎಂಬುದನ್ನ ಮುಂದೆ ಓದಿ...

ಫೈನಲ್ ಗೂ ಮುಂಚೆನೇ ಭವಿಷ್ಯ!

'ಬಿಗ್ ಬಾಸ್' ಫೈನಲ್ ಗೆ ಕೊನೆಯ ವಾರ ಬಾಕಿಯಿದ್ದು, ಈ ವಾರದ ಎಲಿಮಿನೇಷನ್ ನಂತರ ಉಳಿದವರು ಫೈನಲ್ ಹಂತಕ್ಕೆ ತಲುಪಲಿದ್ದಾರೆ. ಈ ಮಧ್ಯೆ ಪ್ರಥಮ್ ಯಾರು ವಿನ್ ಆಗ್ತಾರೆ, ಯಾರಿಗೆ ಎರಡನೇ ಸ್ಥಾನ, ಎಂದು ಊಹೆ ಮಾಡಿದ್ದಾರೆ.[ಇವರೆಲ್ಲ ಫಿನಾಲೆ ವಾರಕ್ಕೆ ಹೋಗಬೇಕಂತೆ.! ಯಾಕಂತೆ.? ]

ಈ ವಾರ ಡಬಲ್ ಎಲಿಮಿನೇಶನ್ ಅಂತೆ!

ಪ್ರೇಕ್ಷಕರ ನಿರೀಕ್ಷೆಯಂತೆ ಈ ವಾರ ಡಬಲ್ ಎಲಿಮಿನೇಶನ್ ಸಾಧ್ಯತೆಯಿದೆ. ಆದ್ರೆ, ಪ್ರಥಮ್ ಕೂಡ ಈ ವಾರ ಡಬಲ್ ಎಲಿಮಿನೇಶನ್ ಇದೆ ಎಂಬುದು ಹೇಳಿದ್ದಾರೆ.['ಬಿಗ್ ಬಾಸ್' ಮನೆ ಸ್ಪರ್ಧಿಗಳಿಗೆ ಇಂದು ಸಿಗಲಿದೆ ಎಲಿಮಿನೇಷನ್ ಶಾಕ್.?]

ಈ ವಾರ ಹೊರಹೋಗುವ ಇಬ್ಬರು ಯಾರು!

ಪ್ರಥಮ್ ಹೇಳುವ ಪ್ರಕಾರ, ಈ ವಾರ ಭುವನ್ ಮತ್ತು ಮೋಹನ್ ಅವರು ಹೊರಗೋಗಬಹುದಂತೆ. ಅಥವಾ ಭುವನ್ ಜೊತೆ ಸ್ವತಃ ಪ್ರಥಮ್ ಹೋಗಬಹುದು ಎಂಬುದು ಅವರ ಯೋಚನೆ ಎಂದು ಕೀರ್ತಿ ಬಳಿ ಹೇಳಿದ್ದಾರೆ.

ಫೈನಲ್ ಗೆ ಹೋಗುವ ಮೂವರು ಇವರೇ!

'ಬಿಗ್ ಬಾಸ್ ಕನ್ನಡ-4'ನ ಫೈನಲ್ ಗೆ ಮಾಳವಿಕಾ, ರೇಖಾ, ಕೀರ್ತಿ ಮೂರು ಜನ ಎಂಟ್ರಿ ಕೊಡೋದು ಪಕ್ಕಾ ಅಂತ ಪ್ರಥಮ್ ಧೃಡಪಡಿಸಿದ್ದಾರೆ.['ಬಿಗ್ ಬಾಸ್ ಕನ್ನಡ-4': ಯಾರು ಉತ್ತಮರು ಈ ನಾಲ್ವರಲ್ಲಿ.?]

ಮೂರನೇ ಸ್ಥಾನ ಕೀರ್ತಿ!

ಫೈನಲ್ ಮೂರು ಜನರಲ್ಲಿ ಕೀರ್ತಿ ಕೂಡ ಒಬ್ಬರಾಗಿರ್ತಾರೆ. ಆದ್ರೆ, ಕೀರ್ತಿ ಅವರಿಗೆ ಎರಡನೇ ರನ್ನರ್ ಅಪ್, ಅಂದ್ರೆ ಮೂರನೇ ಸ್ಥಾನ ಸಿಗುತ್ತೆ ಎಂದು ಒಳ್ಳೆ ಹುಡುಗ ನಿರ್ಧರಿಸಿದ್ದಾರೆ.

'ವಿನ್ನರ್' ಯಾರಾಗಬಹುದು?

ಇನ್ನೂ ಮಾಳವಿಕಾ ಹಾಗೂ ರೇಖಾ ಅವರ ಮಧ್ಯೆ ವಿನ್ನರ್ ಯಾರು ಎಂಬುದು ಕಷ್ಟವಾಗಲಿದೆಯಂತೆ. ಆದ್ರೆ, ಇವರಿಬ್ಬರಲ್ಲಿ ಒಬ್ಬರು ವಿನ್ ಆಗುವುದು ಮಾತ್ರ 100% ಖಚಿತವಂತೆ.['ಬಿಗ್ ಬಾಸ್' ಹೀಗ್ಮಾಡಿದ್ರೆ, ಮೋಸ ಆಗಲ್ವಾ.? ಕ್ಲಾರಿಟಿ ಕೊಡಿ..]

ನಾಲ್ಕು, ಐದು ಗೊತ್ತಿಲ್ವಂತೆ!

ಇನ್ನೂ ನಾಲ್ಕು ಮತ್ತು ಐದನೇ ಸ್ಥಾನ ಯಾರಿಗೆ ಅಂತ ಗೊತ್ತಿಲ್ವಂತೆ. ಯಾಕಂದ್ರೆ ವೀಕ್ಷಕರ ಧೋರಣೆ ಏನಿರಬಹುದು ಎಂಬುದು ಕಷ್ಟವಂತೆ.

English summary
BiggBoss Kannada 4 Conteatant Pratham Prediction: Keerthi, Rekha, and Malavika are most likely to enter the grand finale of Bigg Boss 4 Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada