For Quick Alerts
  ALLOW NOTIFICATIONS  
  For Daily Alerts

  ಸಾಧಕರ ಸೀಟ್ ಮೇಲೆ ಪ್ರಾಣೇಶ್ ಆಯ್ತು: ಈಗ ಪ್ರೊ.ಕೃಷ್ಣೇಗೌಡರ ಸರದಿ.!

  By Harshitha
  |

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದ ಸಾಧಕರ ಸೀಟ್ ಮೇಲೆ ಗಂಗಾವತಿ ಪ್ರಾಣೇಶ್ ಕುಳಿತಿದ್ದಾಯ್ತು. ಈಗ ಪ್ರೊ.ಕೃಷ್ಣೇಗೌಡರ ಸರದಿ.

  ವೃತ್ತಿಯಲ್ಲಿ ಉಪಾಧ್ಯಾಯ, ಪ್ರವೃತ್ತಿಯಲ್ಲಿ ಹಾಸ್ಯಗಾರರಾಗಿರುವ ಪ್ರೊ.ಕೃಷ್ಣೇಗೌಡ ರವರ ಲೈಫ್ ಸ್ಟೋರಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಸಾರ ಆಗಲಿದೆ.

  ಮಂಡ್ಯದ 'ಮಾತಿನ ಮಲ್ಲ'

  ಮಂಡ್ಯದ 'ಮಾತಿನ ಮಲ್ಲ'

  ವೇದಿಕೆ ಹತ್ತಿದರೆ ಸಾಕು, ತಿಳಿಹಾಸ್ಯದ ಹೊನಲು ಹರಿಸುವ ಪ್ರೊ.ಕೃಷ್ಣೇಗೌಡ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನ ಮರಡಿ ಎಂಬ ಗ್ರಾಮದಲ್ಲಿ. ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ ಎಂ.ಎ ಪದವಿ ಪಡೆದ ಕೃಷ್ಣೇಗೌಡ, ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ, ಹಾಡುಗಾರರಾಗಿ, ಅಧ್ಯಾಪಕರಾಗಿ, ಹಾಸ್ಯಗಾರನಾಗಿ ಬೆಳೆದ ಯಶೋಗಾಥೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಸಾರ ಆಗಲಿದೆ.

  ಪಡೆದಿರುವ ಬಹುಮಾನ ಲೆಕ್ಕವಿಲ್ಲ.!

  ಪಡೆದಿರುವ ಬಹುಮಾನ ಲೆಕ್ಕವಿಲ್ಲ.!

  ಚಿಕ್ಕವಯಸ್ಸಿನಿಂದಲೇ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಕೃಷ್ಣೇಗೌಡರು ಚರ್ಚಾಪಟುವಾಗಿ, ಹಾಡುಗಾರನಾಗಿ ಪಡೆದ ಬಹುಮಾನಗಳ ಸಂಖ್ಯೆ ಲೆಕ್ಕವಿಲ್ಲದಷ್ಟು.

  ಕಚಗುಳಿ ಇಡುವ ಪ್ರೊ.ಕೃಷ್ಣೇಗೌಡ ಹಾಸ್ಯ

  ಕಚಗುಳಿ ಇಡುವ ಪ್ರೊ.ಕೃಷ್ಣೇಗೌಡ ಹಾಸ್ಯ

  ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಹಾಸ್ಯ ವಿಷಯಗಳಲ್ಲಿ ಪ್ರೊ.ಕೃಷ್ಣೇಗೌಡ ಮಾಡಿರುವ ಭಾಷಣ ಕೂಡ ಲೆಕ್ಕವಿಲ್ಲದಷ್ಟು. 'ಶಿವರಾತ್ರಿ' ಪ್ರಯುಕ್ತ ನಡೆಯುವ 'ನಗೆ ಜಾಗರಣೆ'ಯಲ್ಲಿ ಪ್ರೊ.ಕೃಷ್ಣೇಗೌಡರ ರವರ ಹಾಸ್ಯ ಚಟಾಕಿ ಕೇಳುವುದಕ್ಕಾಗಿಯೇ ಸಾವಿರಾರು ಮಂದಿ ಜಮಾಯಿಸುತ್ತಾರೆ.

  ಪ್ರಸಾರ ಯಾವಾಗ.?

  ಪ್ರಸಾರ ಯಾವಾಗ.?

  'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡ ಭಾಗವಹಿಸಿರುವ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಪ್ರಸಾರ ಯಾವಾಗ ಎಂಬುದರ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.

  English summary
  Prof.Krishnegowda takes part in Zee Kannada Channel's popular show Weekend With Ramesh-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X