»   » ನಿಜವಾಗಲೂ ಕನ್ನಡವನ್ನ ಉಳಿಸುತ್ತಿರುವವರು ವಿದ್ಯಾವಂತರಲ್ಲ, ಇವರು.!

ನಿಜವಾಗಲೂ ಕನ್ನಡವನ್ನ ಉಳಿಸುತ್ತಿರುವವರು ವಿದ್ಯಾವಂತರಲ್ಲ, ಇವರು.!

Posted By:
Subscribe to Filmibeat Kannada

ಕನ್ನಡ ಭಾಷೆ, ಕನ್ನಡ ನೆಲ, ಕನ್ನಡ ಜಲ.....ಹೀಗೆ ಕನ್ನಡವನ್ನ ಉಳಿಸಿ ಬೆಳಸುವವರು ಕನ್ನಡಿಗರು. ಆದ್ರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಯವಾಗುತ್ತಿದೆ. ಆಧುನೀಕರಣವಾಗುತ್ತಿದ್ದಂತೆ ಪಾಶ್ಚತ್ಯ ಸಂಸ್ಕೃತಿಗಳ ವ್ಯಾಮೋಹದಿಂದ ಕನ್ನಡ ಅಭಿಮಾನ ಕಮ್ಮಿಯಾಗುತ್ತಿದೆ ಅನ್ಸುತ್ತೆ.[ಸಾಧಕರ ಸೀಟ್ ಮೇಲೆ ಪ್ರಾಣೇಶ್ ಆಯ್ತು: ಈಗ ಪ್ರೊ.ಕೃಷ್ಣೇಗೌಡರ ಸರದಿ.!]

ಹಾಗಾದ್ರೆ, ನಿಜವಾಗಲೂ ಕನ್ನಡವನ್ನ ಉಳಿಸುವವರು ಯಾರು ಎಂಬ ಪ್ರಶ್ನೆ ಕಾಡುತ್ತೆ. ಇಂದು ಸ್ಕೂಲ್, ಕಾಲೇಜುಗಳಲ್ಲಿ ಕನ್ನಡ ಮರೆಯಾಗುತ್ತಿದೆ, ಆಫೀಸ್ ಗಳಲ್ಲಿ ಇಂಗ್ಲೀಷ್ ಮುಖ್ಯವಾಗುತ್ತಿದೆ. ಹೀಗಾಗಿ, ಸಹಜವಾಗಿ ಕನ್ನಡ ಮಕ್ಕಳಿಗೆ ಆತಂಕ ಮೂಡುತ್ತೆ. ಹೀಗಿರುವಾಗ ನಿಜವಾಗಲೂ ಕನ್ನಡವನ್ನ ಉಳಿಸಿ, ಬೆಳಸುವವರು ಯಾರು ಎಂದು ಪ್ರೋ.ಕೃಷ್ಣೇಗೌಡ ಅವರು ಹೇಳಿದ್ದಾರೆ. ಮುಂದೆ ಓದಿ....

ಕನ್ನಡ ಉಳಿಸುವವರು ಇವರೇ!

''ಕನ್ನಡವನ್ನ ನಿಜವಾಗಲೂ ಉಳಿಸುತ್ತಿರುವುದು ಅಕ್ಷರಸ್ಥರಲ್ಲ. ಕನ್ನಡವನ್ನ ಉಳಿಸಿ, ಬೆಳಸುತ್ತಿರುವುದು, ಕನ್ನಡ ಜೀವಂತವಾಗಿರಲು ಕಾರಣ ಅನಕ್ಷರಸ್ಥರೇ. ಅವರಿಂದು ಬೀದಿಗಳಲ್ಲಿ, ಹಳ್ಳಿಗಳಲ್ಲಿ, ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೂವು ಕಟ್ಟುತ್ತಿದ್ದಾರೆ, ಕುಲುಮೆ ಕೆಲಸ ಮಾಡುತ್ತಿದ್ದಾರೆ''-ಪ್ರೋ.ಕೃಷ್ಣೇಗೌಡ[ಪ್ರೊ.ಕೃಷ್ಣೇಗೌಡರ ಬದುಕಿನಲ್ಲಿ ಸಿಡಿಲಿನಂತೆ ಬಡಿದ ಎರಡು ದುರ್ಘಟನೆಗಳು..]

ಇವರು ಕನ್ನಡವನ್ನೇ ನಂಬಿದವರು!

''ಇವರೆಲ್ಲರೂ ಕನ್ನಡವನ್ನೇ ನಂಬಿದವರು, ಕನ್ನಡವನ್ನೇ ಬೆಳಸಿದವರು. ಅಂದು ಸರಾಗವಾಗಿ ಕನ್ನಡ ಹಾಡುತ್ತಿದ್ದರು. ವಚನಗಳು, ಪದ್ಯಗಳು, ಹಾಡುಗಳನ್ನ ಹಾಡುತ್ತಿದ್ದ ಇವರು ಹೆಬ್ಬೆಟ್ಟು ಒತ್ತುತ್ತಿದ್ದವರು. ಇವರಿಗೆ ಯಾವುದೇ ವಿಶ್ವವಿದ್ಯಾಲಯ ಪದವಿ ಕೊಟ್ಟಿಲ್ಲ''-ಪ್ರೋ.ಕೃಷ್ಣೇಗೌಡ

ಇವರು ಕನ್ನಡವನ್ನ ಬೆಳಸುತ್ತಿಲ್ಲ!

''ಕಚೇರಿಗಳಲ್ಲಿ ಇರುವವರು, ಕಂಪನಿಗಳಲ್ಲಿ ಇರುವವರು, ಲ್ಯಾಬರೇಟರಿಗಳಲ್ಲಿ ಇರುವವರು, ವಿಜ್ಞಾನ ಮಂದಿರದಲ್ಲಿರುವವರು, ಕನ್ನಡವನ್ನ ಬೆಳಸುತ್ತಿಲ್ಲ. ಬೆಳಸಬಹುದಿತ್ತು. ಆದ್ರೆ, ಬೆಳಸುತ್ತಿಲ್ಲ''-ಪ್ರೋ.ಕೃಷ್ಣೇಗೌಡ

ಅಂದದ ಕನ್ನಡ ಇಂದು ಕಾಣುತ್ತಿಲ್ಲ !

''ನಾವು ಎಂತಹ ಕನ್ನಡವನ್ನ ಕೇಳುತ್ತಿದ್ದೇವು. ಆದ್ರೆ ಇಂದು ಕನ್ನಡವನ್ನ ಕೇಳುವುದಕ್ಕು ಭಯವಾಗುತ್ತಿದೆ. ಯಾಕೇ ಈ ತರ ಸುಡುಗಾಡು ಕನ್ನಡ ಕೇಳುತ್ತಿದ್ದೇವೆ ಅನ್ನಿಸುತ್ತೆ ಕೆಲವೊಮ್ಮೆ. ನಿಜವಾಗಲೂ ಕನ್ನಡ ಬೆಳಸುವವರು ಅವರೇ ಪುಣ್ಯಾತ್ಮರು''- ಪ್ರೋ.ಕೃಷ್ಣೇಗೌಡ

English summary
Prof.Krishnegowda takes Part in Zee Kannada Channel's Popular show Weekend With Ramesh-3. and He Talk About Who Are Real Kannadigas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada