»   » ಗೋವಾದಲ್ಲಿ ಮರಾಠಿ ನಟಿ ವೇಶ್ಯಾವಾಟಿಕೆ: 5 ಬಂಧನ

ಗೋವಾದಲ್ಲಿ ಮರಾಠಿ ನಟಿ ವೇಶ್ಯಾವಾಟಿಕೆ: 5 ಬಂಧನ

Posted By:
Subscribe to Filmibeat Kannada
prostitution-marathi-actor-sachit-pati-held-goa-parlour
ಪಣಜಿ, ಸೆ.8: ಬ್ಯೂಟಿ ಪಾರ್ಲರ್ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮುಂಬೈನ ಮರಾಠಿ ನಟಿಯೊಬ್ಬಳನ್ನು ಬಂಧಿಸಲಾಗಿದೆ. ನಟಿ ಜತೆಗೆ ಇನ್ನೂ ಐದು ಯುವತಿಯರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಗೋವಾದ ಪರ್ವೋರಿಮ್ ಬಳಿಯಿರುವ ಮಸಾಜ್ ಪಾರ್ಲರ್ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ ಗೋವಾ ಪೊಲೀಸರು ಮರಾಠಿ ನಟಿ ಸಚಿತ್ ಪಾಟಿ ಮತ್ತು ಇತರೆ ಐದು ತರುಣಿಯರನ್ನು ಬಂಧಿಸಿದ್ದಾರೆ. ನಟಿ ಸಚಿತ್ ಪಾಟಿ ಅನೇಕ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾಳೆ. ಮರಾಠಿ ಕಿರು ತೆರೆಯಲ್ಲಿ ಆಕೆಯದು ಹೆಚ್ಚು ಚಾಲ್ತಿಯಲ್ಲಿರುವ ಹೆಸರು.

Lotus beauty parlourನಲ್ಲಿ ಮಸಾಜ್ ಮಾಡುವ ಕಾಯಕದಲ್ಲಿ ಸದರಿ ನಟಿ ಸಚಿತ್ ಪಾಟಿ ತನ್ನ ಜತೆಗೆ ಇನ್ನೂ ಐದು ತರುಣಿಯರನ್ನು ನೇಮಿಸಿಕೊಂಡಿದ್ದಳು. ಆದರೆ ಮಸಾಜ್, ಸೌಂದರ್ಯವೃದ್ಧಿ ಸೇವೆಯ ಜತೆಗೆ ಗ್ರಾಹಕರಿಗೆ ದೈಹಿಕ ಸುಖ ನೀಡುವ ಕಾಯಕದಲ್ಲೂ ಆ ಐದು ತರುಣಿಯರನ್ನು ನಟಿ ಪಾಟಿ ತೊಡಗಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆಲ್ಲ ಸಹಕಾರ ನೀಡುತ್ತಿದ್ದ ಒಬ್ಬ ಮಹಿಳೆಯನ್ನೂ ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ರಾಹುಲ್ ಪರಾಬ್ ಹೇಳಿದ್ದಾರೆ. ಬಂಧಿತ ತರುಣಿಯರ ಪೈಕಿ ನಾಲ್ವರು ಡಾರ್ಜಿಲಿಂಗ್ ನವರು ಮತ್ತು ಇನ್ನೊಬ್ಬಳು ಮುಂಬೈನವಳು. ಗೋವಾ ಹೋಟೆಲುಗಳಲ್ಲಿ ರಿಸೆಪ್ಷನಿಸ್ಟ್ ಮುಂತಾದ ಪರಿಚಾರಿಕೆ ಕೆಲಸಗಳನ್ನು ಕೊಡಿಸುವುದಾಗಿ ನಂಬಿಸಿ ಈ ಐದೂ ತರುಣಿಯನ್ನು ಇಲ್ಲಿಗೆ ಕರೆತರಲಾಗಿತ್ತು ಎಂದು ತಿಳಿದುಬಂದಿದೆ.

English summary
Marathi actor Sachit Pati was arrested along with five others when police raided a Goa massage parlour and rescued five women, Goa police inspector Rahul Parab said on Friday. Under the facade of massage parlour prostitution was going on here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada