»   » ಪಬ್ಲಿಕ್ ಟಿವಿಯಿಂದ ಇನ್ನೊಂದು ಚಾನಲ್

ಪಬ್ಲಿಕ್ ಟಿವಿಯಿಂದ ಇನ್ನೊಂದು ಚಾನಲ್

Posted By:
Subscribe to Filmibeat Kannada
Public tv celebrates 1st b'day
ರೈಟ್ ಮೆನ್ ಮೀಡಿಯಾ ಸಂಸ್ಥೆಯ ಕನ್ನಡ ನ್ಯೂಸ್ ಚಾನಲ್ 'ಪಬ್ಲಿಕ್ ಟಿವಿ' ಇದೇ ಫೆ.12, 2013ಕ್ಕೆ ಒಂದು ವರ್ಷ ಪೂರೈಸಿದೆ. ಇದೇ ಸಂತಸದಲ್ಲಿರುವ ವಾಹಿನಿಯು ಮತ್ತೊಂದು ಮಹತ್ತರ ಹೆಜ್ಜೆಯನ್ನಿಡಲು ಸಿದ್ಧವಾಗುತ್ತಿದೆ.

ಮುಂಬರುವ ದಿನಗಳಲ್ಲಿ ಕನ್ನಡ ಮ್ಯೂಸಿಕ್ ಚಾನಲ್ ಆರಂಭಿಸುವ ಬಗ್ಗೆ ರೈಟ್ ಮೆನ್ ಮೀಡಿಯಾ ಸಂಸ್ಥೆ ಗಮನಹರಿಸಿದೆ. ಈ ಮೂಲಕ ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ಲೋಕಕ್ಕೆ ಮತ್ತೊಂದು ಚಾನಲ್ ಸೇರ್ಪಡೆಯಾಗುವ ಎಲ್ಲ ಸೂಚನೆಗಳನ್ನು ನೀಡಿದೆ.

ತಮ್ಮ ವಾಹಿನಿ ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಪಬ್ಲಿಕ್ ಟಿವಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಆರ್ ರಂಗನಾಥ್ ಮಾತನಾಡುತ್ತಾ, "ಕಳೆದ ಒಂದು ವರ್ಷದ ಪಯಣದಲ್ಲಿ ಪಬ್ಲಿಕ್ ಟಿವಿ ಕರ್ನಾಟಕದ ಮಾದರಿ ಹಾಗೂ ವಿಶ್ವಾಸಾರ್ಹ ಸುದ್ದಿ ವಾಹಿನಿಯಾಗಿ ಹೊರಹೊಮ್ಮಿರುವುದು ನಿಜಕ್ಕೂ ಸಂತಸ ತಂದಿದೆ " ಎಂದಿದ್ದಾರೆ.

"ಇಷ್ಟೆಲ್ಲಾ ಕಾರ್ಯಸಾಧ್ಯವಾಗಿದ್ದು ನಮ್ಮ ವಾಹಿನಿಯ ವಿಶ್ವಾಸಾರ್ಹ ಹಾಗೂ ಸದೃಢ ನಿಲುವಿನಿಂದ. ವಾಹಿನಿ ಅಳವಡಿಸಿಕೊಂಡಂತಹ ನವೀನ ಪ್ರಯತ್ನದ ಫಲ ಇದು. ಈ ನಮ್ಮ ನೂತನ ಪ್ರಯತ್ನ ಎಲ್ಲ ವೃತ್ತಿಪರರಿಗೂ ಇಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಮ್ಯೂಸಿಕ್ ಚಾನಲ್ ಒಂದನ್ನು ನಾಡಿನ ಜನತೆಗೆ ಸಮರ್ಪಿಸುತ್ತಿದ್ದೇವೆ" ಎಂದರು.

"ಸದ್ಯಕ್ಕೆ ಕನ್ನಡದಲ್ಲಿ ಕೇವಲ ಎರಡೇ ಎರಡು ಮ್ಯೂಸಿಕ್ ಚಾನಲ್ ಗಳಿವೆ. ನಮ್ಮ ಮ್ಯೂಸಿಕ್ ಚಾನಲ್ ನ ನಿಲುವು ಹಾಗೂ ಉದ್ದೇಶಗಳು ವಿಭಿನ್ನವಾಗಿರುತ್ತದೆ. ಮುಖ್ಯವಾಗಿ ನಾವು ಯುವ ಜನಾಂಗವನ್ನು ಉದ್ದೇಶವಾಗಿಟ್ಟುಕೊಂಡು ಹೊಸ ಚಾನಲ್ ಆರಂಭಿಸುತ್ತಿದ್ದೇವೆ" ಎಂದು ಅವರು ತಿಳಿಸಿದರು.

"ಈಗಾಗಲೆ ಉತ್ಕೃಷ್ಟ ಮಾಹಿತಿಯ ಜೊತೆಗೆ 5,000 ಗಂಟೆಗಳಷ್ಟು ಮ್ಯೂಸಿಕ್ ಲೈಬ್ರರಿ ಸಿದ್ಧವಾಗಿದೆ. ಇದರಲ್ಲಿ ಶೇ.70ರಷ್ಟು ಹಾಡುಗಳು ಸಿನಿಮಾಗೆ ಸಂಬಂಧಿಸಿದಂತವು. ಮುಂದಿನ ದಿನಗಳಲ್ಲಿ ಪಬ್ಲಿಕ್ ಟಿವಿ ಕಾರ್ಯಕ್ರಮಗಳ ಲುಕ್ ಅಂಡ್ ಫೀಲ್ ಬದಲಾಗಲಿದೆ. ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದೇವೆ" ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರ ನೋಟ ಬೀರಿದರು.

ಪಬ್ಲಿಕ್ ಟಿವಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅರುಣ್ ಕುಮಾರ್ ಮಾತನಾಡುತ್ತಾ, "ಏಕಮಾತ್ರ ಸಂಪಾದಕೀಯ ಸ್ಥಾನ, ಪರಸ್ಪರ ಪ್ರಭಾವ ಬೀರುವಂತಹ, ಸ್ವತಂತ್ರ ಸುದ್ದಿ ಕವರೇಜ್, ಪೂರಕ ಸುದ್ದಿ ಹಾಗೂ ನಮ್ಮ ಯುವ ತಂಡದ ದೃಢಪ್ರಯತ್ನದ ಫಲವೇ ಈ ಗೆಲುವು. ಗ್ರಾಸ್ ರೇಟಿಂಗ್ ಪಾಯಿಂಟ್ (GRP)ನಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬರುತ್ತಿರುವ ಪಬ್ಲಿಕ್ ಟಿವಿ ಮಾರ್ಕೆಟ್ ಲೀಡರ್ ಆಗಿ ಬೆಳದಿದೆ" ಎಂದರು.

"ಪಬ್ಲಿಕ್ ಟಿವಿ ಡಿಟಿಎಚ್ ಸೇವೆಗೂ ಮುಂದಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸದೃಢವಿಶ್ವಾಸ ಹಾಗೂ ನಿಶ್ಚಿತಾಭಿಪ್ರಾಯದೊಂದಿಗೆ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ನಾಡಿನ ಜನತೆ ಬಗೆಗೆ ತೋರಿದ ಅಪಾರ ಕಾಳಜಿಯ ಪರಿಣಾಮ ಪಬ್ಲಿಕ್ ಟಿವಿ ಇಂದು ಮನೆಮಾತಾಗಿದೆ" ಎಂದವರು ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸಿಕೆ ಹರೀಶ್ ಕುಮಾರ್. (ಕೃಪೆ: exchange4media.com)

English summary
Kannada news channel Public TV, part of Writmen Media, is celebrating completion of its first year of operations on February 12, 2013. The company is now planning to expand its channel offerings with a Kannada music channel.
Please Wait while comments are loading...