For Quick Alerts
  ALLOW NOTIFICATIONS  
  For Daily Alerts

  ಲಿಪ್ ಲಾಕ್ ನಂತರ 'ಬಾತ್ ರೂಂ'ನಲ್ಲಿ ಲಾಕ್ ಆದ ಬಿಗ್ ಬಾಸ್ ಜೋಡಿ

  By Bharath Kumar
  |
  ಬಿಗ್ ಮನೆಯಲ್ಲಿ ಬಾತ್ ರೂಮ್ ನಲ್ಲಿ ಲಾಕ್ ಆದ ಜೋಡಿ | Filmibeat Kannada

  'ಬಿಗ್ ಬಾಸ್' ಕಾರ್ಯಕ್ರಮ ಎಷ್ಟೇ ಮನರಂಜನೆಯಿಂದ ಕೂಡಿದ್ದರೂ, ಈ ಶೋ ಮೇಲೆ ಬರುವ ಟೀಕೆಗಳು ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ.

  ಹೌದು, ಕುಟುಂಬ ಸಮೇತ ನೋಡುವ 'ಬಿಗ್ ಬಾಸ್' ನಲ್ಲಿ ಸ್ಪರ್ಧಿಗಳು ಯಾವುದೇ ಮುಜುಗರವಿಲ್ಲದೇ, ಕಿಸ್ ಮಾಡುವುದು, ರೊಮ್ಯಾನ್ಸ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

  ಇತ್ತೀಚೆಗಷ್ಟೇ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ಇಬ್ಬರು ಸ್ಪರ್ಧಿಗಳು ಈಗ ಬಾತ್ ರೂಂನಲ್ಲಿ ರೊಮ್ಯಾನ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದು ವೀಕ್ಷಕರ ಬೇಸರವನ್ನ ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

  ಲಿಪ್ ಲಾಕ್ ಆಯ್ತು ಈಗ ಬಾತ್ ರೂಂನಲ್ಲಿ ಲಾಕ್.!

  ಲಿಪ್ ಲಾಕ್ ಆಯ್ತು ಈಗ ಬಾತ್ ರೂಂನಲ್ಲಿ ಲಾಕ್.!

  ಕಳೆದ ವಾರ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ಹಿಂದಿ 'ಬಿಗ್ ಬಾಸ್ 11' ಸ್ಪರ್ಧಿಗಳಾದ ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ಈಗ ಬಾತ್ ರೂಂನಲ್ಲಿ ಲಾಕ್ ಆಗಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಲಿಪ್ ಲಾಕ್ ಮಾಡಿದ 'ಲವ್ ಬರ್ಡ್ಸ್'.!

  ಬಂದಗಿ ಹಿಂದೆ ಹೋದ ಪುನೀಶ್.!

  ಬಂದಗಿ ಹಿಂದೆ ಹೋದ ಪುನೀಶ್.!

  43ನೇ ದಿನದ ಬಿಗ್ ಬಾಸ್ ನಲ್ಲಿ ರಾತ್ರಿ 1.40ಕ್ಕೆ ನಟಿ ಬಂದಗಿ ಕಲ್ರಾ ಬಟ್ಟೆ ತೆಗೆದುಕೊಂಡು ಬಾತ್ ರೂಂಗೆ ಹೋಗ್ತಾರೆ. ಈ ವೇಳೆ ಪುನೀಶ್ ಶರ್ಮಾ, ಬಂದಗಿ ಅವರನ್ನ ಹಿಂಬಾಲಿಸಿ ಬಾತ್ ರೂಂ ಸೇರಿಕೊಳ್ಳುತ್ತಾರೆ.

  ಲಿಪ್ ಲಾಕ್ ನಂತರ 'ಬಾತ್ ರೂಂ'ನಲ್ಲಿ ಲಾಕ್ ಆದ ಬಿಗ್ ಬಾಸ್ ಜೋಡಿ

  ಯಾರಿಗೂ ಗೊತ್ತಿಲ್ಲ

  ಯಾರಿಗೂ ಗೊತ್ತಿಲ್ಲ

  ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ಅವರ ಬಗ್ಗೆ ಗಾಸಿಪ್ ಗಳು, ಚರ್ಚೆಗಳು ಆಗುತ್ತಿವೆ. ಆದ್ರೆ, ಬಾತ್ ರೂಂನಲ್ಲಿ ಇಬ್ಬರೂ ಒಟ್ಟಿಗೆ ಇದ್ದ ವಿಷ್ಯ ಯಾರಿಗೂ ಗೊತ್ತಿಲ್ಲ. ಬಹುಶಃ ಇದು ಗೊತ್ತಾದ್ರೆ, ಹಿಂದಿಯ ಬಿಗ್ ಬಾಸ್ ಮತ್ತಷ್ಟು ತಿರುವು ಪಡೆದುಕೊಳ್ಳುತ್ತೆ.

  'ಬಿಗ್ ಬಾಸ್' ಮನೆಗೆ ಹೋಗುತ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ

  ಇದು ರೀಲ್ ಅಥವಾ ರಿಯಲ್.?

  ಇದು ರೀಲ್ ಅಥವಾ ರಿಯಲ್.?

  ಬಿಗ್ ಬಾಸ್ ನಲ್ಲಿ ಈ ರೀತಿಯ ರೊಮ್ಯಾನ್ಸ್, ಕಿಸ್ಸಿಂಗ್ ಎಲ್ಲವೂ ಕೇವಲ ಪಬ್ಲಿಸಿಟಿಗೋಸ್ಕರ ಮಾಡ್ತಿದ್ದಾರೆ ಎಂಬ ವಾದವೂ ಹಲವರದ್ದು. ಇದೆಲ್ಲವೂ ಗೇಮ್ ಪ್ಲಾನಿಂಗ್ ಅಷ್ಟೆ. ಅವರೆಲ್ಲಾ ಪ್ಲಾನ್ ಮಾಡಿಕೊಂಡು ಗೇಮ್ ಆಡ್ತಿದ್ದಾರೆ ಎನ್ನುವುದು ಕೆಲವರ ವಾದ.

  ತೀವ್ರ ಚರ್ಚೆಯಾಗಿದೆ ಇವರಿಬ್ಬರ ಸಂಭಾಷಣೆ

  ತೀವ್ರ ಚರ್ಚೆಯಾಗಿದೆ ಇವರಿಬ್ಬರ ಸಂಭಾಷಣೆ

  ಪುನೀಶ್ ಶರ್ಮಾ ಅವರ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಬಂದಗಿ, ಇದನ್ನೆಲ್ಲ ನಮ್ಮ ಮನೆಯವರು ಒಪ್ಪಿಕೊಳ್ಳುವುದಿಲ್ಲ. ನನ್ನನ್ನು ಮನೆಯಿಂದ ಹೊರ ಹಾಕುತ್ತಾರೆ ಎನ್ನುತ್ತಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿದ ಪುನೀಶ್ ''ಯೋಚನೆ ಮಾಡಬೇಡ, ನಿಮ್ಮ ಮನೆಯವರು ಒಪ್ಪಿಕೊಂಡಿಲ್ಲ ಅಂದ್ರೆ ನಾನು ನಿನ್ನನ್ನು ಸ್ವೀಕರಿಸುತ್ತೇನೆ'' ಎಂದು ಸಂಭಾಷಣೆ ನಡೆಸಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

  ಸಲ್ಮಾನ್ ಕಡೆ ಎಲ್ಲರ ಗಮನ?

  ಸಲ್ಮಾನ್ ಕಡೆ ಎಲ್ಲರ ಗಮನ?

  ''ಬಿಗ್ ಬಾಸ್' ಕಾರ್ಯಕ್ರಮವನ್ನ ಮಕ್ಕಳೂ ಸೇರಿದಂತೆ ಇಡೀ ಕುಟುಂಬ ನೋಡುತ್ತಾರೆ. ಹೀಗಾಗಿ ಎಚ್ಚರಿಕೆಯಿಂದಿರಿ'' ಎಂದು ಕಳೆದ ವಾರ ಬಂದಗಿ ಹಾಗೂ ಪುನೀಶ್ ರವರಿಗೆ ಸಲ್ಮಾನ್ ಹೇಳಿದ್ದರು. ಆದರೂ, ಇವರಿಬ್ಬರು ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಕ್ಯಾಮರಾ ಇಲ್ಲದ ಬಾತ್ ರೂಂ ಸೇರಿಕೊಂಡಿದ್ದಾರೆ. ಇದಕ್ಕೆ ಬರುವ ಶನಿವಾರ ಸಲ್ಮಾನ್ ಖಾನ್ ಹೇಗೆ ಪ್ರತಿಕ್ರಿಯಿಸುತ್ತಾರೋ, ನೋಡೋಣ.

  ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರಾಸಲೀಲೆ ಬಯಲು

  English summary
  Bigg Boss 11: Puneesh Sharma and Bandgi Kalra sneak into the bathroom. 'ಬಿಗ್ ಬಾಸ್' ಮನೆಯ ಸ್ಪರ್ಧಿ ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ಬಾತ್ ರೂಂನಲ್ಲಿ ಒಟ್ಟಿಗೆ ಸಿಕ್ಕಿ ಬಿದ್ದಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X