»   » ಯುವತಿಯರ ಆರೋಪ ಶುದ್ಧ ಸುಳ್ಳು ಎಂದ 'ಪ್ಯಾಟೆ ಹುಡ್ಗೀರ್' ಶೋ ಆಯೋಜಕರು.!

ಯುವತಿಯರ ಆರೋಪ ಶುದ್ಧ ಸುಳ್ಳು ಎಂದ 'ಪ್ಯಾಟೆ ಹುಡ್ಗೀರ್' ಶೋ ಆಯೋಜಕರು.!

Posted By:
Subscribe to Filmibeat Kannada
ಯುವತಿಯರ ಆರೋಪ ಶುದ್ಧ ಸುಳ್ಳು ಎಂದ ಆಯೋಜಕರು.! | Flmibeat Kananda

ಜನಪ್ರಿಯ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋಗೆ ಡೈರೆಕ್ಟ್ ಆಗಿ ಸೆಲೆಕ್ಟ್ ಆಗಬೇಕು ಅಂದ್ರೆ, ''ಕಿಸ್ ಕೊಡು, ಎದುರಿಗೆ ಬಟ್ಟೆ ಬದಲಿಸು'' ಅಂತೆಲ್ಲ ಕೇಳಿ ಅಶ್ಲೀಲ ಆಡಿಷನ್ ನಡೆಸಲಾಗಿದೆ ಎಂದು ಕೆಲ ಯುವತಿಯರು ಆರೋಪ ಮಾಡ್ತಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಇಂದು ನಡೆಯುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಆಡಿಷನ್ಸ್ ಅರ್ಧಕ್ಕೆ ಸ್ಥಗಿತಗೊಳ್ಳಲು ಈ ಆರೋಪ ಹಾಗೂ ಅದರಿಂದ ಕಾಲೇಜು ಆವರಣದಲ್ಲಿ ಉಂಟಾದ ಗಲಾಟೆ ಕಾರಣ.

ಆಡಿಷನ್ಸ್ ನಲ್ಲಿ ಆಯೋಜಕರು ಅಶ್ಲೀಲ ಹಾಗೂ ಕೀಳು ಮಟ್ಟದ ಪ್ರಶ್ನೆ ಕೇಳಿದ್ದಾರೆ ಅಂತ ಯುವತಿರಂತೂ ಆರೋಪ ಮಾಡ್ತಿದ್ದಾರೆ. ಆದ್ರೆ, ಇದೆಲ್ಲ ಶುದ್ಧ ಸುಳ್ಳು ಅಂತ ಸ್ಟಾರ್ ಸುವರ್ಣ ವಾಹಿನಿ ಹಾಗೂ ಕಾರ್ಯಕ್ರಮದ ಆಯೋಜಕರು ಹೇಳ್ತಿದ್ದಾರೆ.

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದ ಆಯೋಜಕರಾದ ಉಷಾ ಗೌಡ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿರುವುದು ಹೀಗೆ -

ಕಾರ್ಯಕ್ರಮದ ಆಯೋಜಕರು ಏನಂತಾರೆ.?

''ಸುಮಾರು ಸಾವಿರಕ್ಕೂ ಹೆಚ್ಚು ಜನ ಆಡಿಷನ್ ಗೆ ಬಂದಿದ್ದರು. ಹತ್ತು ರೂಮ್ ನಲ್ಲಿ ಆಡಿಷನ್ ಮಾಡ್ತಿದ್ವಿ. ಕಾರ್ಯಕ್ರಮದ ಕಂಟೆಂಟ್ ಗೆ ನಮಗೇನು ಬೇಕೋ, ಅದರ ಮೇಲೆ ನಾವು ಪ್ರಶ್ನೆ ಕೇಳ್ತಿದ್ವಿ'' - ಉಷಾ ಗೌಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಆಯೋಜಕರು

ರಿಯಾಲಿಟಿ ಶೋ 'ರಿಯಲ್' ಮುಖ ಬಯಲು: ನೊಂದ ಯುವತಿ ಬಿಚ್ಚಿಟ್ಟ ಸ್ಫೋಟಕ ಸತ್ಯ ಏನು.?

ಏನೇನೋ ಪ್ರಶ್ನೆ ಕೇಳಿಲ್ಲ

''ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬೇಕು ಎನ್ನುವ ಅವಶ್ಯಕತೆ ಇಲ್ಲ. ಇದು ಇಡೀ ಕುಟುಂಬ ಕೂತು ನೋಡುವಂತಹ ಶೋ. ಇಲ್ಲಿ ಬೇರೆ ಇನ್ನೇನೋ ಮಾಡ್ತಿಲ್ಲ. ಹೀಗಿರುವಾಗ, ಏನೇನೋ ಪ್ರಶ್ನೆಗಳನ್ನು ಖಂಡಿತ ಕೇಳಿರಲ್ಲ'' - ಉಷಾ ಗೌಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಆಯೋಜಕರು

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

ಪ್ರಶ್ನೆ ಹುಟ್ಟಿರಬಹುದು!

''ವೀ ಆರ್ ರೆಡಿ ಟು ಡು ಎನಿಥಿಂಗ್ ಅಂತ ಹೇಳಿದಾಗ, ಖಂಡಿತ ಕೆಲವು ಪ್ರಶ್ನೆಗಳು ಹುಟ್ಟಿರಬಹುದೇ ಹೊರತಾಗಿ ಅಶ್ಲೀಲ ಪದಬಳಕೆ ಮಾಡಿಲ್ಲ'' - ಉಷಾ ಗೌಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಆಯೋಜಕರು

ಸೆಲೆಕ್ಟ್ ಆಗಿಲ್ಲ ಅಂತ ಹೀಗೆ ಮಾಡುವುದು ತಪ್ಪು

''ಕಾಂಪಿಟೇಶನ್ ಅನ್ನೋದು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಕೆಲವರಿಗೆ ಅವಕಾಶ ಸಿಗುತ್ತೆ, ಕೆಲವರಿಗೆ ಅವಕಾಶ ಸಿಗಲ್ಲ. ಅದೇ ತರಹ ಕೆಲ ಹುಡುಗಿಯರಿಗೆ ಆಗಿರಬಹುದು. ಅದಕ್ಕೆ ಆಡಿಷನ್ ನಲ್ಲಿ 'ಹೀಗೆ' ಆಗಿದೆ ಅಂತ ಹೇಳುವುದು ತಪ್ಪು. ಆಡಿಷನ್ ನಲ್ಲಿ ಅಶ್ಲೀಲ ಪ್ರಶ್ನೆಗಳನ್ನು ಖಂಡಿತ ಕೇಳಿಲ್ಲ. ಎಷ್ಟೋ ಜನ ಸೆಕೆಂಡ್ ಲೆವೆಲ್ ಆಡಿಷನ್ ಗೆ ಸೆಲೆಕ್ಟ್ ಆಗಿದ್ದಾರೆ. ದಯವಿಟ್ಟು ಅವರನ್ನೂ ಮಾತನಾಡಿಸಿ'' - ಉಷಾ ಗೌಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಆಯೋಜಕರು

ಜವಾಬ್ದಾರಿ ಇದೆ

''ಕೆಲವರು ಆಡಿಷನ್ ಕೊಟ್ಟಿಲ್ಲ. ಆದರೂ, ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿದ್ದಾರೆ. ನಾವು ಆಶ್ಲೀಲ ಪದಗಳನ್ನು ಕೇಳಿಲ್ಲ. ಕೇಳಲು ಸಾಧ್ಯ ಇಲ್ಲ. ಸ್ಟಾರ್ ಸುವರ್ಣ ಎಷ್ಟೋ ರಿಯಾಲಿಟಿ ಶೋ ಮಾಡಿದೆ. ನಮಗೂ ಕೂಡ ಜವಾಬ್ದಾರಿ ಇದೆ. ರಿಯಾಲಿಟಿ ಶೋಗಳಿಂದ ಎಷ್ಟೋ ಜನರಿಗೆ ಲೈಫ್ ಸಿಕ್ಕಿದೆ. ಎಷ್ಟೋ ಜನ ಬದುಕು ಕಂಡುಕೊಂಡಿದ್ದಾರೆ'' - ಉಷಾ ಗೌಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಆಯೋಜಕರು

English summary
Pyate Hudgeer Halli Lifu organiser, Usha Gowda gives clarification over audition controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada