»   » ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫಿಗೆ ಅಕುಲ್ ಬಾಲಾಜಿ ಎಂಟ್ರಿ?

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫಿಗೆ ಅಕುಲ್ ಬಾಲಾಜಿ ಎಂಟ್ರಿ?

By: ಜೀವನರಸಿಕ
Subscribe to Filmibeat Kannada

ಇಲ್ಲೀವರೆಗೂ ಬಿಗ್ ಬಾಸ್ ತಮಾಷೇನೇ ಅಲ್ಲ ಅಂದಿದ್ದಾಯ್ತು. ಬಿಗ್ ಬಾಸ್ ಪ್ರೇಕ್ಷಕರ ಮನಗೆಲ್ಲೋಕೆ ಹಂಡ್ರಡ್ ಪರ್ಸೆಂಟ್ ಯಶಸ್ವಿಯಾಗ್ಲಿಲ್ಲ ಅಂತ ಹಲವರು ಅಂದ್ರು. ಆದರೆ ಆರಂಭದಲ್ಲಿ ಬೋರು ಹೊಡೆಸ್ತಿದ್ದ ಶೋ ಆಮೇಲೆ ಅಕುಲ್ ಹುಚ್ಚಾಟ, ಅವರಿವರ ಕಿರಿಕ್ ನಿಂದ ಸ್ವಲ್ಪ ಪರ್ವಾಗಿಲ್ಲ ಅನ್ನಿಸಿಕೊಂಡಿತ್ತು.

ಬಿಗ್ ಬಾಸ್ 99 ದಿನದ ಯಾತ್ರೆ ಮುಗಿಸಿದ ಮರು ದಿನವೇ ಮತ್ತೊಂದು ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರನ್ನ ಸುವರ್ಣ ವಾಹಿನಿ ಸೆಳೀತಾ ಇದೆ. ಅದು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್-3'. ಹತ್ತು ಮಂದಿ ಸಿಲಿಕಾನ್ ಸಿಟಿ ಹುಡ್ಗೀರು ಮಂಡ್ಯದ ರಾಯಸಮುದ್ರದಲ್ಲಿ ಕಿರಿಕ್ ಕಿಕ್ಕುಗಳ ಮೂಲಕ ಪ್ರೇಕ್ಷಕರಿಗೆ ಕುತೂಹಲ ಮೂಡಿಸ್ತಿದ್ದಾರೆ. [ಸುವರ್ಣ ರಿಯಾಲಿಟಿ ಶೋ ನಿರೂಪಕರಾಗಿ ಸಂತೋಷ್]

ಆದ್ರೆ ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್ ವೀಕೆಂಡ್ ವಿಶೇಷಕ್ಕೆ ಎಂಟ್ರಿಕೊಡ್ತಿರೋ ಸ್ಟಾರ್ ಯಾರು ಅನ್ನೋ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್' ವಾರದ ವಾರ್ತೆ ಓದಲಿರೋರು ರಿಯಾಲಿಟಿ ಸ್ಟಾರ್ ಅಕುಲ್ ಬಾಲಾಜಿ.

ಬಿಗ್ ಬಾಸ್ ಆದ್ಮೇಲೆ ಪ್ರೊಮೋಷನ್

ತಮಾಷೇನೇ ಅನ್ನಿಸಿದ್ದ ಸ್ಪರ್ಧೆಯಲ್ಲಿ ಬಿಗ್ ಬಾಸ್ ಸೀಸನ್-2 ಟೈಟಲ್ ಗೆದ್ದ ಆತ್ಮೀಯ ಅಕುಲ್ ಪ್ರೊಮೋಷನ್ ಪಡ್ಕೊಂಡಿದ್ದಾರೆ. ಇಲ್ಲೀವರೆಗೂ ವಾರವಿಡೀ ಶೋ ಹೋಸ್ಟ್ ಮಾಡ್ತಿದ್ದ ಅಕುಲ್ ಈಗ ಗೆಸ್ಟ್ ಹೋಸ್ಟ್.

ವಾರದ ವಾರ್ತೆ ಓದ್ತಾರೆ ಅಕುಲ್

ಬಿಗ್ ಬಾಸ್ ಶೋನಲ್ಲಿ 99 ದಿನಗಳು ಇದ್ದು ಪ್ರೇಕ್ಷಕರನ್ನ ರಂಜಿಸಿದ್ದ ಅಕುಲ್ ಬಾಲಾಜಿ. ವೀಕೆಂಡ್ ನಲ್ಲಿ ಹಳ್ಳಿ ಲೈಫ್ ನ ವಾರದ ವಾರ್ತೆ ಓದಲಿದ್ದಾರೆ. ಯಾರು ಇನ್ ಯಾರು ಔಟ್ ಅನ್ನೋದನ್ನ ನಿರ್ಧರಿಸಲಿದ್ದಾರೆ.

ಬಿಗ್ ಬಾಸ್ ಬಿಗ್ ಗ್ಲಾಸ್

ಬಿಗ್ ಬಾಸ್ ಶೋನಲ್ಲಿ ಸುವರ್ಣ ವಾಹಿನಿಗೆ ತುಂಬಾನೇ ಲಾಸ್ ಆಗಿದೆಯಂತೆ. ಲಾಸ್ ಆಗಿದ್ದರಿಂದಾನೇ ಯಾವ ಸಿನಿಮಾ ಸ್ಟಾರನ್ನೂ ಗೆಸ್ಟ್ ಹೋಸ್ಟ್ ಮಾಡದೆ ಅಕುಲ್ ರನ್ನೇ ಬಳಸಿಕೊಳ್ಳಲಾಗ್ತಿದೆ ಅಂತಿದೆ ಸುವರ್ಣ ಮೂಲ.

ಈಗಾಗಲೇ ಕಿಕ್ ಕೊಡ್ತಿದೆ ಶೋ

ಪ್ಯಾಟೇ ಹುಡ್ಗೀರ ಹಳ್ಳಿ ಲೈಫಲ್ಲಿ 10 ಹುಡ್ಗೀರಿದ್ದು ಮಂಡ್ಯದ ಹಳ್ಳಿ ಸುತ್ತಿ ಹೈರಾಣಾದ್ರೂ ಕಿರಿಕ್ ಮಾಡ್ಕೊಂಡು ಶೋಗೆ ಕಿಚ್ಚು ಹಚ್ತಿದ್ದಾರೆ. ಸಿಲಿಕಾನ್ ಸಿಟಿ ಹುಡ್ಗೀರು. ಮೊದಲವಾರದ ಶೋಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಸುದೀಪ್ ಸ್ಥಾನ ತುಂಬ್ತಾರಾ ಅಕುಲ್

ವೀಕೆಂಡ್ ನಲ್ಲಿ ಎಂಟ್ರಿಕೊಡ್ತಿದ್ದ ಗೆಸ್ಟ್ ಹೋಸ್ಟ್ ಕಿಚ್ಚ ಬಂದ್ರೆ ಪ್ರೇಕ್ಷಕರು ಕಿಚ್ಚನ ಕಂಠದಿಂದ ಮೋಡಿಯಾಗ್ತಿದ್ರು. ಕಿಚ್ಚನ ಆಂಕರಿಂಗ್ ಸ್ಟೈಲ್ ಗೆ ಕೂಡ ಫಿದಾ ಆಗದವರಿಲ್ಲ. ಕಿಚ್ಚ ಇದ್ರೆ ಶೋ ಸಕ್ಸಸ್. ಇದೀಗ ಅಂತಹಾ ಜವಾಬ್ದಾರಿ ಅಕುಲ್ ಮೇಲಿದೆ.

ಹೋಸ್ಟ್ ಓಕೆ ಖಡಕ್ ಸಾಕೆ

ಹೋಸ್ಟ್ ಮಾಡೋದ್ರಲ್ಲಿ ಅಕುಲ್ ಸೂಪರ್. ಆದ್ರೆ ವೀಕೆಂಡ್ ಹೋಸ್ಟ್ ಅಂದ್ರೆ ಬೋಲ್ಡ್ ಇರ್ಬೇಕು ಖಡಕ್ ಲುಕ್ ಬೇಕೇ ಬೇಕು ಅದು ಅಕುಲ್ ಗೆ ಸಾಧ್ಯಾನಾ? ಗೊತ್ತಿಲ್ಲ.

English summary
'Bigg Boss Kannada 2' title winner Akul Balaji to be the guest host of the Suvarna channels Pyate Hudgeer Halli Lifu season 3. This is the third edition of the reality show conceptualized by Suvarna TV, the first two seasons were a huge success.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada